ಕೊರೊನಾ ಹೆಸರಿನಲ್ಲಿ ಜಿಪುಣರಿಗೆ ವರವಾದರೆ, ದಾಸೋಹಿಗಳಿಗೆ ಸಂಕಟ ಮದುವೆ-ಶುಭ ಕಾರ್ಯಗಳಿಗೆ ನೈಟ್-ವಿಕೆಂಡ್ ಕಫ್ರ್ಯೂಜಾರಿ: ಪರದಾಟ

ಆಳಂದ:ಎ.27: ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ಜಾರಿಗೆ ತಂದಿರುವ ನೈಟ್ ಕಫ್ರ್ಯೂ ಹಾಗೂ ವಿಕೆಂಡ್ ಕಫ್ರ್ಯೂಗೆ ಜನರು ಗೊಂದಲಕ್ಕೊಳಗಾಗಿ ಮದುವೆ ಸೇರಿ ಇನ್ನಿತರ ಕುಟುಂಬಗಳ ಶುಭ ಕಾರ್ಯಕ್ಕೆ ಅನುಮತಿ ಪಡೆಯಲು ಕಚೇರಿಗಳತ್ತ ಅಲೆದಾಡುತ್ತಿದ್ದಾರೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಏ.21ರಿಂದ ರಾತ್ರಿ 9:00ಗಂಟೆಯಿಂದ ಮೇ 4ರ ಬೆಳಗಿನ 6:00ಗಂಟೆಯವರೆಗೆ ನೈಟ್ ಕಫ್ರ್ಯೂ ಹಾಗೂ ವಾರದ ಶುಕ್ರವಾರ ರಾತ್ರಿ 9:00ಗಂಟೆಯಿಂದ ಸೋಮವಾರ ಬೆಳಗಿನ 6:00ಗಂಟೆಯವರೆಗೆ ವಿಕೆಂಡ್ ಕಫ್ರ್ಯೂ ಜಾರಿ ಮಾಡಿ ಕಟ್ಟುನಿಟ್ಟಾಗಿ ಅನುಷ್ಠಾನ ಗೊಳಿಸಲು ಮುಂದಾದ ಪ್ರಯುಕ್ತ ಜನ ಸಾಮಾನ್ಯರು ಗೊಂದಲಕ್ಕಿಡಾಗಿ ತಮ್ಮ ಎಲ್ಲ ಚಟುವಟಿಕೆಗಳು ಮೊಟುಕುಗೊಳಿಸ ತೊಡಗಿದ್ದಾರೆ.

ವರ್ಷದ ಏಪ್ರಿಲ್ ಮತ್ತು ಮೇ ತಿಂಗಳಲ್ಲೇ ಅತಿ ಹೆಚ್ಚಾಗಿ ನಡೆಯಬೇಕಾಗಿರುವ ಮದುವೆ, ಕುಪ್ಪಸ ಕಾರ್ಯಕ್ರಮ, ಯಂಗೇಜ್‍ಮಿಂಟ್‍ನಂತ ಕಾರ್ಯಕ್ರಮಗಳಿಗೆ ಮುಂದಾದವರಿಗೆ ನುಂಗದ ತುತ್ತಾಗಿ ಪರಿಣಮಿಸಿದೆ. ಮದುವೆ ಇನ್ನಿತರ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಜಿಲ್ಲಾಡಳಿತವು ಆದೇಶಿಸಿರುವುದಿಂದ ವದು-ವರನ ಕುಟುಂಬಸ್ಥರು ತಹಸೀಲ್ದಾರ ಕಚೇರಿಗೆ ವಿವಾಹ ಆಮಂತ್ರಣ ಪತ್ರಿಕೆಯೊಂದಿಗೆ ಅಲೆದಾಡುತ್ತಿದ್ದಾರೆ.

ಅನುಮತಿ ನೀಡಲಾಗುತ್ತಿದೆ ಎಂದು ಕಚೇರಿಗಳಿಗೆ ಹೆಚ್ಚು ಜನರು ಬರತೊಡಗಿದ್ದರಿಂದ ಜನ ದಟ್ಟಣೆ ಉಂಟಾಗುತ್ತಿದೆ.

ಸರ್ಕಾರದ ನಿಯಮಾವಳಿಯಂತೆ ಮದುವೆ ಮಾಡಿಕೊಳ್ಳಲೇ ಬೇಕಾದಲ್ಲಿ ತಾಲೂಕು ತಹಸೀಲ್ದಾರರಿಂದ ಅನುಪತಿ ಪಡೆದು 50 ಜನರೊಳಗೊಂಡು ವಿವಾಹ ಕೈಗೊಳ್ಳಲು ಅನುಮತಿ ನೀಡಲಾಗುತ್ತಿದೆ.

ಇದುವರೆಗೂ ತಾಲೂಕಿನಲ್ಲಿ 120 ಮದುವೆ ಬೇಡಿಕೆಗಾಗಿ 120 ಅರ್ಜಿಗಳನ್ನು ಸಲ್ಲಿಕೆಯಾಗಿದ್ದವು. ಎಲ್ಲ ಅರ್ಜಿಗಳಿಗೆ ತಹಸೀಲ್ದಾರರು ನಿಮಾವಳಿಯಂತೆ ವಿವಾಹ ಕೈಗೊಳ್ಳಬೇಕು ಎಂದು ಷರತು ವಿಧಿಸಿ ಅನುಮತಿ ನೀಡಿದ್ದಾರೆ. ಇನ್ನೂ ಸಾರ್ವಜನಿಕರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂದುವರೆದಿದೆ.

ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಬೇಕಾದ ಜೋಡಿಗಳ ಕನಸು ಕಮರಿ ಹೋಗಲು ನೈಟ್‍ಕಫ್ರ್ಯೂ ಹಾಗೂ ವಿಕೆಂಡ್ ಕಫ್ರ್ಯೂ ಅಡ್ಡಿಯಾಗಿದ್ದರಿಂದ ವದು-ವರರ ಎರಡು ಕುಟುಂಬಸ್ಥರಿಗೆ ದಿಕ್ಕು ತೋಚದಾಗಿದೆ. ಮದುವೆ ಸಮಾರಂಭಕ್ಕೆ ಅನುಪತಿ ಪಡೆಯಲು ಕಚೇರಿಗೆ ಬರುತ್ತಿರುವುದು ಜನದಟ್ಟಣೆ ಉಂಟಾಗುತ್ತಿದೆ. ಜಿಲ್ಲಾಡಳಿತವು ಮದುವೆಗೆ ಕೇವಲ 50 ಜನರು ಸೇರುವಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

ಈ ಆದೇಶ ಉಲ್ಲಂಘಿಸಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಪಟ್ಟಣದ ಎ.ವಿ.ಪಾಟೀಲ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವೊಂದರ ಕುಟುಂಬಸ್ಥರಿಗೆ ದಂಡ ವಿಧಿಸಲಾಗಿದೆ. ಇದರಿಂದಾಗಿ ಅನೇಕರು ಇದ್ಯಾವುದು ಗೋಜಿಗೆ ಹೋಗದೆ ತಮ್ಮ ಮದುವೆಗಳು ಮುಂದೊಡಿದ ಪ್ರಸಂಗವು ಎದುರಾಗಿವೆ. ಅನುಮತಿ ಪಡೆಯಲು ಮುಂದಾಗುವ ಜನರಿಗೆ ದಾಖಲೆಗಳು ಸಂಗ್ರಹ, ಸಾರಿಗೆ ವೆಚ್ಚ ಮತ್ತು ಮಧ್ಯವರ್ತಿಗಳಿಗೆ ಹಣ ಹೀಗೆ ಜೇಬಿಗೆ ಕತ್ತರಿಯೂ ಬೀಳತೊಡಗಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.

ಕೊರೊನಾ ಹೆಸರಿನಲ್ಲಿ ಜೀಪುಣರಿಗೆ ವರವಾದರೆ, ದಾಸೋಹಿಗಳಿಗೆ ಸಂಕಟ

ಯಾರ ಮದುವೆ, ಶುಭ ಕಾರ್ಯಗಳಿಗೆ ಮೊದಲೇ ಹೋಗದ ಜೀಪುಣರಿಗೆ ಕೊರೊನಾ ನೆಪದಲ್ಲಿ ಮನೆಯಲ್ಲೇ ಉಳಿಯಲು ಕುಂಟು ನೆಪ್ಪ ಅಷ್ಟೇ ಅಲ್ಲ ಆಯೆರಿ, ಸಾರಿಗೆ ವೆಚ್ಚ ಹೀಗೆ ಎಲ್ಲ ರೀತಿಯ ಖರ್ಚಿನ ಉಳಿತಾಯವಾಗುತ್ತಿದೆ. ಅಲ್ಲದೆ, ತಮ್ಮ ಕುಟುಂಬದ ವಿವಾಹ ಇತರೆ ಶುಭ ಕಾರ್ಯಗಳಿಗೆ ಹೆಚ್ಚಿನವರಿಗೆ ಕರೆಯುವ ಗೋಜಿಗೆ ಹೋಗದ ಸರಳವಾಗಿ ಮಾಡಿ ಒಳಗೊಳಗೆ ಎಲ್ಲವೂ ಉಳಿತಾವಾಗಿದೆ ಎಂದು ಹುಮ್ಮಸ್ಸಿನಲ್ಲಿದ್ದರೆ, ಇನ್ನೂಂದಡೆ ಮಕ್ಕಳ ಮದುವೆ ಸೇರಿ ಇನ್ನಿತರ ಅದ್ಧೂರಿ ಕಾರ್ಯಕ್ರಮಗಳ ಮಾಡಿ ಹೆಚ್ಚಿನ ಬಂಧು, ಬಾಂಧವರು ಸ್ನೇಹಿತರು ನೆರೆ-ಹೊರೆಯವರಿಗೆ ಅನ್ನಸಂತಾರ್ಪಣೆ ಮಾಡಬೇಕು ಎಂದವರಿಗೆ ಕಸಿವಿಸಿಯಾಗಿ ಅಸಮಾಧಾನಕ್ಕೆ ಕಾರಣವಾಗಿದೆ.