ಕೊರೊನಾ ಹೆಚ್ಚಳ ಎಚ್‌ಎಎಲ್ ನೌಕರರಿಗೆ ಒಂದು ವಾರ ರಜೆ

ಬೆಂಗಳೂರು,ಏ.23-ಮಹಾಮಾರಿ ಕೊರೊನಾ ಹೆಚ್ಚಳ ಹಿನ್ನಲೆಯಲ್ಲಿ ‌ಎಚ್‌ಎಎಲ್ ತನ್ನ ವಿವಿಧ ಸಂಕೀರ್ಣಗಳು ಮತ್ತು ವಿಭಾಗದಲ್ಲಿ ಕೆಲಸ ಮಾಡುವ ನೌಕರರಿಗೆ ರಜೆ ನೀಡಿದೆ.
ಬೆಂಗಳೂರಿನಲ್ಲಿ ಏಪ್ರಿಲ್ 23 ರಿಂದ 27 ರವರೆಗೆ, ಲಖನೌ / ಕಾನ್ಪುರದಲ್ಲಿ 21 ರಿಂದ 23 ರವರೆಗೆ, ನಾಸಿಕ್​ನಲ್ಲಿ 21 ರಿಂದ 24 ರವರೆಗೆ ಹೆಚ್​ಎಎಲ್​​ ಮುಚ್ಚಲಾಗಿದೆ. ಕೋವಿಡ್​ ಸಂಬಂಧ ಎಚ್ಚರಿಕೆ ವಹಿಸುವಂತೆ ನೌಕರರಿಗೆ ಸೂಚಿಸಲಾಗಿದೆ. ಸಂಸ್ಥೆಯು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸುತ್ತದೆ ಎಂದು ವಕ್ತಾರ ಗೋಪಾಲ್ ಸುತಾರ್ ಮಾಹಿತಿ ನೀಡಿದ್ದಾರೆ.
ಪಿಎಸ್‌ಯುಗಳ ಕಾರ್ಯನಿರ್ವಹಣೆಗೆ ಸರ್ಕಾರ ಅನುಮತಿ ನೀಡಿತ್ತು. ಆದರೆ, ಕೊರೊನಾ ಸಮುದಾಯ ಹರಡುವಿಕೆ ನಿಯಂತ್ರಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಈ ರಜಾ ದಿನವು ಯಾವುದೇ ಕಾರ್ಮಿಕರ ವೇತನದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೂಡ ಸ್ಪಷ್ಟಪಡಿಸಿದ್ದಾರೆ.