ಕೊರೊನಾ : ಹು-ಧಾದಲ್ಲಿ ಬಿಗಿ ಕ್ರಮ


ಹುಬ್ಬಳ್ಳಿ, ಏ. 22: ಕೊರೊನಾ 2 ನೇ ಅಲೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಿನ್ನೆಯಿಂದ ಮೇ 4 ರವರೆಗೆ ರಾತ್ರಿ 9 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ಕಠಿಣ ರಾತ್ರಿ ಕಫ್ರ್ಯೂ ಹಾಗೂ ವೀಕೆಂಡ್ ಕಫ್ರ್ಯೂ ಜಾರಿಯಾಗಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿಯೂ ಕಠಿಣ ಕ್ರಮ ಜಾರಿಯಾಗಿದ್ದರಿಂದ ನಿರ್ದೇಶಿತ ನಿಯಮದನ್ವಯ ಜನನಿಬಿಡ ಪ್ರದೇಶಗಳಲ್ಲಿನ ಮಾಲ್‍ಗಳು, ಬೃಹತ್ ಬಟ್ಟೆ ಅಂಗಡಿಗಳನ್ನು ಬಂದ್ ಮಾಡಲು ಇಂದು ಬೆಳಿಗ್ಗೆಯಿಂದ ಪೆÇಲೀಸರು ಕಾರ್ಯಾಚರಣೆಯಲ್ಲಿ ತೊಡಗಿದರು.
, ಔಷಧಿ, ಪೆಟ್ರೋಲ್, ಡಿಸೇಲ್, ಕಿರಾಣಿ, ವೈದ್ಯಕೀಯ ಸೇವೆ ಹಾಗೂ ತುರ್ತು ಸೇವೆ ಹೊರತುಪಡಿಸಿ, ಶಾಲಾ-ಕಾಲೇಜು, ಉದ್ಯಾನವನ, ಹೊಟೇಲ್, ಬಾರ್, ರೆಸ್ಟೋರೆಂಟ್, ಅಂಗಡಿ-ಮುಂಗಟ್ಟು, ಮಾಲ್, ಥಿಯೇಟರ್ ಸೇರಿದಂತೆ ವಿವಿಧೆಡೆ ಕಟ್ಟು ನಿಟ್ಟಿನ ಆದೇಶವನ್ನು ಜಿಲ್ಲಾಧಿಕಾರಿ ಹಾಗೂ ಕಮೀಷನರ್ ಅವರ ನೇತೃತ್ವದಲ್ಲಿ ನೀಡಲಾಯಿತು.
ಹುಬ್ಬಳ್ಳಿಯ ಜನತಾಬಜಾರ, ದುರ್ಗದಬೈಲ್, ಕೇಶ್ವಾಪೂರ, ಸಿಬಿಟಿ, ಹಳೇಹುಬ್ಬಳ್ಳಿ, ಧಾರವಾಡದ ಸಿಬಿಟಿ, ಸೂಪರ್ ಮಾರ್ಕೆಟ್ ಸೇರಿದಂತೆ ವಿವಿಧೆಡೆ ಪೆÇಲೀಸರು ಬೆಳ್ಳಂ ಬೆಳಿಗ್ಗೆಯಿಂದಲ್ಲೇ ಕಾರ್ಯಾಚರಣೆ ನಡೆಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಮೂಲಕ ಅಂಗಡಿ-ಮುಂಗಟ್ಟುಗಳನ್ನು ತೆರೆಯದಂತೆ ವ್ಯಾಪಾರಸ್ಥರಿಗೆ ಸೂಚನೆ ನೀಡಿದರು. ಅಲ್ಲದೇ ಈ ವೇಳೆ ಸಾರ್ವಜನಿಕರು ತಪ್ಪದೇ ಮಾಸ್ಕ್ ಧರಿಸಿ ಎಂದು ದಂಡ ನೀಡುವ ಮೂಲಕ ಎಚ್ಚರಿಕೆ ನೀಡಿದರು.
ಎಪಿಎಂಸಿ ಸಮಿತಿಯ ಪ್ರಾಂಗಣದಲ್ಲಿ ಜರುಗುವ ವಿಳ್ಳೆದೆಲೆ ಸಂತೆಯನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ರದ್ದುಗೊಳಿಸಲಾಗಿದೆ.
ನಿನ್ನೆ ರಾತ್ರಿಯಿಂದ ಕಠಿಣಾತಿ ಕಠಿಣ ಕ್ರಮ ಜಾರಿಯಾಗಿದ್ದು, ನಿನ್ನೆ ರಾತ್ರಿ 9 ಗಂಟೆಯ ನಂತರ ಸಂಪೂರ್ಣ ಬಂದ್ ಆಗಿದ್ದರಿಂದ ರಾತ್ರಿ ಹುಬ್ಬಳ್ಳಿ-ಧಾರವಾಡ ಪ್ರಮುಖ ರಸ್ತೆಗಳು ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತು.
ಮೊದಲನೇ ಕೊರೊನಾ ಅಟ್ಟಹಾಸ ಬೆನ್ನಲ್ಲೇ ಕೊರೊನಾ 2 ನೇ ಅಲೆ ತನ್ನ ರಕ್ಕಸ ನರ್ತನವನ್ನು ತೋರಿಸುತ್ತಿದ್ದು, ಪ್ರತಿನಿತ್ಯ ರಾಜ್ಯದಲ್ಲಿ 20 ಸಾವಿರಕ್ಕೂ ಹೆಚ್ಚು ಕೊರೊನಾ ಕೇಸ್ ಗಳು ಹಾಗೂ ಸಾವು, ನೋವುಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ವರ್ಷದ ಬಳಿಕ ಮತ್ತೇ ಕೋವಿಡ್ ಕಠಿಣ ಮಾರ್ಗಸೂಚಿ ಹೊರಡಿಸಿದ್ದು, ಸಾರ್ವಜನಿಕರು ಮತ್ತೇ ನಲುಗುವಂತಾಗಿದೆ.
ರಸ್ತೆಗಿಳಿದ ಜಿಲ್ಲಾಧಿಕಾರಿ, ಪೆÇಲೀಸ್ ಕಮೀಷನರ್ :
ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ರಾತ್ರಿ ಕಠಿಣ ನಿಯಮ ಜಾರಿ ಇರುವುದರಿಂದ ಜಿಲ್ಲಾಧಿಕಾರಿ ಹಾಗೂ ಪೆÇಲೀಸ್ ಕಮಿಷನರ್ ಅವರು ಅವಳಿ ನಗರದಲ್ಲಿ ನಿನ್ನೆ ರಾತ್ರಿ ಹಾಗೂ ಇಂದು ಸಂಚರಿಸಿ ಸಾರ್ವಜನಿಕರು ರಾತ್ರಿ ಸಮಯದಲ್ಲಿ ಮನೆಯಿಂದ ಹೊರಬಾರದಂತೆ ಜಾಗೃತಿ ಮೂಡಿಸಿದರು.
ಅಲ್ಲದೇ ಕೊರೊನಾ ನಿಯಂತ್ರಣಕ್ಕೆ ಸಾರ್ವಜನಿಕರು ಕೈಜೋಡಿಸಿ, ಸರ್ಕಾರದ ಆದೇಶಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.