ಕೊರೊನಾ ಹಿನ್ನೆಲೆ ಗ್ರಾಮದೇವತೆ ಜಾತ್ರೆ ರದ್ದು

ಮುದ್ದೇಬಿಹಾಳ:ಎ.24: ಪಟ್ಟಣದ ಇಲ್ಲಿನ ವೈರಾಗ್ಯ ಗ್ರಾಮದೇವತೆ ಜಾತ್ರೆ ಇದೇ ಮೇ 28 ರಿಂದ 5 ದಿನಗಳ ಕಾಲ ಅತ್ಯಂತ ಅದ್ದೂರಿ ಸಂಭ್ರಮ, ಸಡಗರದಿಂದ ಆಚರಿಸಲು ನಿರ್ಧರಿಸಲಾಗಿತ್ತು. ಆದರೇ ಸಧ್ಯ ಕೋರೊನಾ ಅಬ್ಬರ ಹೆಚ್ಚಾಗುತ್ತಿರುವ ಹಿನ್ನೇಲೆಯಲ್ಲಿ ಸರಕಾರದ ಆದೇಶದಂತೆ ಗ್ರಾಮದೇವತೆ ಜಾತ್ರೆಯನ್ನು ಸಂಪೂರ್ಣ ರದ್ದು ಮಾಡಲು ತಿರ್ಮಾನಿಸಲಾಗಿದೆ ಎಂದು ಗ್ರಾಮ ದೇವತೆ ಜಾತ್ರಾ ಕಮೀಟಿ ಮುಖ್ಯಸ್ಥ ನೀಲಕಂಠರಾವ ನಾಡಗೌಡ ಅವರು ಹೇಳಿದರು.
ಪಟ್ಟಣದ ಇಲ್ಲಿನ ಪುರಸಭೆ ಸಭಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ ಅವರು ಪ್ರತಿ ಮೂರು ವರ್ಷಕ್ಕೋಮ್ಮೇ ಪಟ್ಟಣದ ಗ್ರಾಮ ದೇವತೆ ಜಾತ್ರಾ ಮಹೋತ್ಸವ ನಡೆಸಲಾಗುತ್ತಿತ್ತು. ಅದರಂತೆ ಕಳೇದ ವರ್ಷ2020ರಲ್ಲಿ ಏಪ್ರೀಲ್ ಮೇ ತಿಂಗಲ್ಲಿ ನಡೆಸಬೇಕಾಗಿತ್ತು. ಈ ಬಗ್ಗೆ ಸಭೇ ಕೂಡ ನಡೆಸಲಾಗಿತ್ತು. ಆದರೇ ಆಗಲೂ ಕೂಡ ಕೋರೊನಾ ವೈರಸ್ ನಿಂದಾಗಿ ಇಡೀ ದೇಶವೇ ಲಾಕ್ ಡೌನನಿಂದಾಗಿ ಪ್ರಸ್ತುತ ಈ ವರ್ಷವೂ ಕೋರೊನಾದಿಂದಾಗಿ ಜಾತ್ರೇಯನ್ನು ಆರಣೆಯನ್ನು ಕೈಬಿಟ್ಟು ಕೇವಲ ನಾಲ್ಕು ಶುಕ್ರುವಾರ ದೇವಿಗೆ ವಾರ ಮಾಡಲು ತಿರ್ಮಾನಿಸಿದೆ.
ಈಗಾಗಲೇ ಕೋರೊನಾ ಎನ್ನುವ ಮಾಹಾಮಾರಿ ಬಂದು ಜನಸಾಮಾನ್ಯರ ಮಾನವ ವೈರಿಯಾಗಿ ಬೆಂಬಡದೇ ಕಾಡುತ್ತಿದೆ. ಹಾಗಾಗಿ ಸರಕಾರದ ನಿರ್ಧೇಶನದಂತೆ ಎಲ್ಲರೂ ಮಾಸ್ಕ್ ಧರಿಸುವ ಮೂಲಕ ಆಗಾಗ ಸ್ಯಾನಿಟೈಜರ್ ಮೂಲಕ ಕೈತೊಳೆದುಕೊಳ್ಳುವುದು ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ದೇವಿ ಪೂಜೆ ಕಂಕೈರೆ ಮಾಡಲು ಕೋರಿಕೊಳ್ಳುತ್ತೇನೆ ಎಂದರು.
ಈ ವೇಳೆ ಪುರಸಭೆ ಅಧ್ಯಕ್ಷೇ ಪ್ರತಿಭಾ ಅಂಗಡಗೇರಿ, ಪುರಸಭೆ ಸದಸ್ಯರಾದ ವಿರೇಶ ಹಡಲಗೇರಿ, ಸಂಗಮ್ಮ ದೇವರಳ್ಳಿ ಅವರು ಮಾತನಾಡಿದರು. ಪುರಸಭೆ ಸದಸ್ಯರಾದ ಸಹನಾ ಬಡಿಗೇರ, ಮೈಬೂಬ ಗೊಳಸಂಗಿ, ಯಲ್ಲಪ್ಪ ನಾಯಕಮಕ್ಕಳ, ಅಶೋಕ ಒನಹಳ್ಳಿ, ಬಸವರಾಜ ತಟ್ಟಿ, ಸದಾಶಿವ ಮಾಗಿ, ಸೇರಿದಂತೆ ಸಂತೋಷ ನಾಯ್ಕೋಡಿ ಹಲವರು ಇದ್ದರು.