ಕೊರೊನಾ ಹಿನ್ನಲೆ ಎಳ್ಳಮಾವಸೆ ಆಚರಣೆಗೆ ಅವಕಾಶವಿಲ್ಲ: ಬಿ.ಕೆ.ವಿಜಯಾ

ಕಲಬುರ್ಗಿ,ಜ.9- ಮಹಾಮಾರಿ ಕೋವಿಡ್-19 ಕೊರೊನಾ ಸೋಂಕು ಹರಡುವುದನ್ನು ತಪ್ಪಿಸಲು ಹಾಗೂ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವ ಉದ್ದೇಶದಿಂದ ಎಳ್ಳು ಅಮಾವಾಸ್ಯೆಯ ದಿನದಂದು ಸಾರ್ವಜನಿಕರು ಒಂದಡೆ ಸೇರುವುದನ್ನು ತಪ್ಪಿಸಲು ಇಲ್ಲಿನ ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಸಾರ್ವಜನಿಕರು ಭೇಟಿ ನೀಡಲು ಅವಕಾಶ ಇರುವುದಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥೆಯಾದ ರಾಜಯೋಗಿನಿ ಬಿ. ಕೆ. ವಿಜಯಾ ಅವರು ತಿಳಿಸಿದ್ದಾರೆ.
ಪ್ರತಿವರ್ಷ ಎಳ್ಳಮಾಸಿಯ ದಿನದಂದು ನಗರದ ಹೊರ ವಲಯದ ಸೇಡಂ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಾಕುಮಾರಿಸ್ ಈಶ್ವರೀಯ ವಿಶ್ವ ವಿದ್ಯಾಲಯದ ಅಮೃತ ಸರೋವರ ರಿಟ್ರೀಟ್ ಸೆಂಟರಿನ ಪರಿಸರದಲ್ಲಿ ಎಳ್ಳಮಾಸಿಯ ಉತ್ಸವ ಆಚರಣೆಗಾಗಿ ಪ್ರತಿವರ್ಷ ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಿಗೆ ಕೋವಿಡ್-19 ಹಿನ್ನಲೆಯಲ್ಲಿ ಈ ವರ್ಷ ಅವಕಾಶ ಇರುವುದಿಲ್ಲ ಸಾರ್ವಜನಿಕರು ಸಹಕರಿಸುವಂತೆ ಅವರು ಕೋರಿದ್ದಾರೆ.
ಇಲ್ಲಿಗೆ ಪ್ರತಿ ವರ್ಷ ಎಳ್ಳು ಅಮಾವಾಸ್ಯಯ ದಿನದಂದು ಊಟಕ್ಕಾಗಿ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಸಂಸ್ಥೆಗೆ ಸಂತಸ ವೆನಿಸುತ್ತದೆ ಆದರೇ ಈ ವರ್ಷ ಮಹಾಮಾರಿ ಕೊರೊನಾ ಸೋಂಕಿನ ಹಿನ್ನಲೆಯಲ್ಲಿ ಸಾರ್ವಜನಿಕರು ಒಂದಡೆ ಸೇರಲು ಅವಕಾಶ ಇರುವುದಿಲ್ಲ. ಹಿಗಾಗಿ ಇಲ್ಲಿ ಯಾರೊಬ್ಬರು ಬರಕೋಡದೆಂದು ಅವರು ಮನವಿ ಮಾಡಿದ್ದಾರೆ.