ಕೊರೊನಾ ಹತ್ತಿಕ್ಕಲು ಲಸಿಕೆಯೇ ಅಸ್ತ್ರ

ಮುದ್ದೇಬಿಹಾಳ:ಎ.27: ತಾಲೂಕಿನ ಇಲ್ಲಿನ ಬಸರಕೋಡ ಗ್ರಾಮದÁ್ತಲೂಕಾ ಬಿಜೆಪಿ ಹಿರಿಯ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹೇಮರಡ್ಡಿ ಮೇಟಿ ಅವರು ಸೋಮವಾರ ಪಟ್ಟಣದ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಇಢಿ ದೇಶದಲ್ಲಿಯೇ ಕೋವಿಡ್ ಮಹಾಮಾರಿ ಎರಡನೆ ಅಲೆ ಪ್ರಾರಂಭಿಸಿದಲ್ಲದೇ ಜನ ಜೀವನ ಅಸ್ಥವೆಸ್ತಗೊಳ್ಳುವಂತೆ ಮಾಡಿದೆ. ಈ ನಿಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ರಾಜ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ನೇತ್ರತ್ವದ ಸರಕಾರ ಕೋವಿಡ್ ಗೆ ಸಂಬಂಧಿದಂತೆ ಅತ್ಯಂತ ಗಂಭಿರವಾಗಿ ಪರಗಣಿಸಿ ಈಗಾಗಲೇ ದೇಶದಾದ್ಯಂತ ಉಚಿತ ಲಸಿಕೆ ಹಾಕುವ ನಿರ್ಧರಿಸಿ ಹಾಕಲಾಗಿದೆ. ಇದರಿಂದ ಕೋವಿಡ್ ರೋಗವನ್ನು ತಡೆಗಟ್ಟುವ ಶಕ್ತಿ ಲಸಿಕೆ ಮಾಡಲಿದೆ. ಸಾರ್ವಜನಿಕರು ಎಚ್ಚುತ್ತುಕೊಳ್ಳಬೇಕು. ಅದಲ್ಲದೇ ಮಾಸ್ಕ್ ಧರಿಸುವುದು, ಸ್ಯಾನಿಟೈಜರ ಬಳಸುವುದು ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಕೋರೊನಾ ಹತ್ತಿಕ್ಕುವಲ್ಲಿ ಪ್ರಯತ್ನಿಬೇಕು ಎಂದರು.