ಕೊರೊನಾ ಸೋಂಕು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ

ಬೆಂಗಳೂರು, ನ.10- ರಾಜ್ಯದಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ‌ ಮತ್ತಷ್ಟು ಏರಿಕೆಯಾಗಿದೆ.

ರಾಜ್ಯದಲ್ಲಿ ಇಂದು ಹೊಸದಾಗಿ 328 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 9 ಮಂದಿ ಸಾವನ್ನಪ್ಪಿದ್ದಾರೆ.ಜೊತೆಗೆ 247 ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ‌.

ರಾಜ್ಯದಲ್ಲಿ‌ ಬಾಗಲಕೋಟೆ, ಬೀದರ್, ದಾವಣಗೆರೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಯಲ್ಲಿ ಯಾವುದೇ ಸೋಂಕು ಪ್ರಕರಣ ದೃಢಪಟ್ಟಿಲ್ಲ.

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ 29,90,856 ಕ್ಕೆ ಏರಿಕೆಯಾಗಿದೆ.ಇಲ್ಲಿಯ ತನಕ 29,44,669 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 38,131 ಕ್ಕೆ ಏರಿಕೆ.

ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 8,027 ಕ್ಕೆ ಕುಸಿದಿದೆ.

ಸೋಂಕಿನಿಂದ ಸಾವನ್ನಪ್ಪಿದವ ಪ್ರತಿಶತ ಪ್ರಮಾಣ ಶೇ.2.74 ಕ್ಕೆ ಏರಿಕೆಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರತಿಶತ 0.27ರಷ್ಟು ಇದೆ.

ಬೆಂಗಳೂರಿನಲ್ಲಿ ಏಳಿಕೆ

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣ ಇಂದು ಏರಿಕೆಯಾಗಿದೆ. 187 ಮಂದಿಗೆ ಕಾಣಿಸಿಕೊಂಡಿದ್ದು, 106 ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಇಂದು 2 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

1.17 ಲಕ್ಷ ಪರೀಕ್ಷೆ:

ರಾಜ್ಯದಲ್ಲಿ ಇಂದು 1,17,748 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು ಇಲ್ಲಿಯತನಕ ಒಟ್ಟಾರೆಯಾಗಿ 5,16, 90,177 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನ ಪ್ರಕರಣ

ಜಿಲ್ಲೆ ಎಷ್ಟು

  • ಬಾಗಲಕೋಟೆ- 0
  • ಬಳ್ಳಾರಿ – 5
  • ಬೆಳಗಾವಿ – 6
  • ಬೆಂಗಳೂರು ಗ್ರಾಮಾಂತರ- 11
  • ಬೆಂಗಳೂರು ನಗರ. – 176
  • ಬೀದರ್ 0
  • ಚಾಮರಾಜನಗರ- 2
  • ಚಿಕ್ಕಬಳ್ಳಾಪುರ- 1
  • ಚಿಕ್ಕಮಗಳೂರು- 14
  • ಚಿತ್ರದುರ್ಗ- 1
  • ದಕ್ಷಿಣ ಕನ್ನಡ – 13
  • ದಾವಣಗೆರೆ- 0
  • ಧಾರವಾಡ- 0
  • ಗದಗ- 0
  • ಹಾಸನ- 29
  • ಹಾವೇರಿ- 0
  • ಕಲಬುರಗಿ- 2
  • ಕೊಡಗು- 7
  • ಕೋಲಾರ- 4
  • ಕೊಪ್ಪಳ- 0
  • ಮಂಡ್ಯ- 8
  • ಮೈಸೂರು- 15
  • ರಾಯಚೂರು- 0
  • ರಾಮನಗರ – 1
  • ಶಿವಮೊಗ್ಗ- 11
  • ತುಮಕೂರು- 8
  • ಉಡುಪಿ- 2
  • ಉತ್ತರ ಕನ್ನಡ- 10
  • ವಿಜಯಪುರ – 1
  • ಯಾದಗಿರಿ- 1