ಕೊರೊನಾ ಸೋಂಕು, ಸಾವಿನ ಸಂಖ್ಯೆ ಏರಿಕೆ: ಚೇತರಿಕೆ ಕುಸಿತ

ಬೆಂಗಳೂರು, ಸೆ.12-ರಾಜ್ಯದಲ್ಲಿಂದು ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಕೊರೊನಾ‌ ಸೋಂಕಿನ ಚೇತರಿಕೆ ಸಂಖ್ಯೆ ಕುಸಿತ ಕಂಡಿದೆ

ರಾಜ್ಯದಲ್ಲಿ ಇಂದು ಹೊಸದಾಗಿ 803 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು 17 ಮಂದಿ ಸೋಂಕಿನಿಂದ ಮೃತಪಟ್ಟಿದ್ದು 802 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ

ಬೀದರ್,ಗದಗ , ಕೊಪ್ಪಳ, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಇಂದು ಯಾವುದೇ ಸೋಂಕು ದೃಢಪಟ್ಟಿಲ್ಲ.

ರಾಜ್ಯದಲ್ಲಿ ಕೊರೊನಾ ಸೋಂಕಿನ ಶೇಕಡವಾರು ಪ್ರಮಾಣ ಶೇ.0.80 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಶೇ .2.11ಕ್ಕೆ ಹೆಚ್ಚಳವಾಗಿದೆ.

ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 16,656 ರಷ್ಟು ಇದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ಹೊಸದಾಗಿ ದಾಖಲಾಗಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟಾರೆಯಾಗಿ ಸೋಂಕಿತರ ಸಂಖ್ಯೆ 29,61,735 ಕ್ಕೆ ಏರಿಕೆಯಾಗಿದೆ ಜೊತೆಗೆ ಚೇತರಿಸಿಕೊಂಡವರ ಸಂಖ್ಯೆ 29,07,548 ಕ್ಕೆ ಹೆಚ್ಚಳವಾಗಿದೆ.

ಸೋಂಕಿನಿಂದ ಒಟ್ಟಾರೆ ಸಾವನ್ನಪ್ಪಿದವರ ಸಂಖ್ಯೆ 37,504 ಕ್ಕೆ ಹೆಚ್ಚಳವಾಗಿದೆ.

ಬೆಂಗಳೂರಿನಲ್ಲಿ ತುಸು ಏರಿಕೆ

ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಏರಿಕೆಯಾಗಿದೆ .ಇಂದು 255 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು ಇಂದು 6 ಮಂದಿ ಮೃತಪಟ್ಡಿದ್ದಾರೆ. ಜೊತೆಗೆ 107 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

1ಲಕ್ಷ ಪರೀಕ್ಷೆ

ರಾಜ್ಯದಲ್ಲಿ ಇಂದು 1,00,176 ಮಂದಿ್ಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ.ಇದರೊಂದಿಗೆ ರಾಜ್ಯದಲ್ಲಿ ಒಟ್ಟಾರೆ 4,52,94,928 ಕ್ಕೆ ಹೆಚ್ಚಳವಾಗಿದೆ.

ಇಂದಿನ ಸೋಂಕು ಸಂಖ್ಯೆ

ಜಿಲ್ಲೆ ಎಷ್ಟು

  • ಬಾಗಲಕೋಟೆ – 1
  • ಬಳ್ಳಾರಿ – 4
  • ಬೆಳಗಾವಿ -17
  • ಬೆಂಗಳೂರು ಗ್ರಾಮಾಂತರ- 21
  • ಬೆಂಗಳೂರು ನಗರ. -255
  • ಬೀದರ್ -0
  • ಚಾಮರಾಜನಗರ – 6
  • ಚಿಕ್ಕಬಳ್ಳಾಪುರ – 2
  • ಚಿಕ್ಕಮಗಳೂರು- 14
  • ಚಿತ್ರದುರ್ಗ – 4
  • ದಕ್ಷಿಣ ಕನ್ನಡ -153
  • ದಾವಣಗೆರೆ -9
  • ಧಾರವಾಡ -9
  • ಗದಗ – 0
  • ಹಾಸನ – 30
  • ಹಾವೇರಿ – 1
  • ಕಲಬುರಗಿ- 2
  • ಕೊಡಗು – 63
  • ಕೋಲಾರ -8
  • ಕೊಪ್ಪಳ -0
  • ಮಂಡ್ಯ – 11
  • ಮೈಸೂರು -36
  • ರಾಯಚೂರು -2
  • ರಾಮನಗರ -2
  • ಶಿವಮೊಗ್ಗ – 24
  • ತುಮಕೂರು -22
  • ಉಡುಪಿ – 90
  • ಉತ್ತರ ಕನ್ನಡ – 28
  • ವಿಜಯಪುರ – 0
  • ಯಾದಗಿರಿ- 0