ಕೊರೊನಾ ಸೋಂಕು ಮುಕ್ತ ಗ್ರಾಮ ಪಂಚಾಯಿತಿಯಾಗಲಿ

ಹನೂರು: ಜೂ.06: ಶಾಗ್ಯ ಗ್ರಾ.ಪಂ. ಇನ್ನೂ ಎರಡು ಮೂರು ವಾರಗಳಲ್ಲಿ ಕೊರೊನಾ ಸೋಂಕು ಮುಕ್ತ ಗ್ರಾಮ ಪಂಚಾಯಿತಿಯಾಗಲಿ ಎಂದು ಶಾಸಕ ಆರ್.ನರೇಂದ್ರ ಆಶಯ ವ್ಯಕ್ತಪಡಿಸಿದರು.
ತಾಲ್ಲೂಕಿನ ಶಾಗ್ಯ ಗ್ರಾ.ಪಂ.ಟಾಸ್ಕ್‍ಪೋರ್ಸ್ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿ, ಕ್ಷೇತ್ರ ವ್ಯಾಪ್ತಿಯ ಇನ್ನಿತರೆ ಗ್ರಾ.ಪಂ.ಗಳಿಗೆ ಹೋಲಿಕೆ ಮಾಡಿದರೆ ಶಾಗ್ಯ ಗ್ರಾ.ಪಂ.ವ್ಯಾಪ್ತಿಯಲ್ಲಿ ಕಡಿಮೆಕೊರೊನಾ ಸೋಂಕಿನ ಪ್ರಮಾಣ ಇರುವುದು ಸಮಾಧಾನಕರ ಸಂಗತಿ. ಕೊವೀಡ್ ಲಸಿಕೆಯನ್ನು ಹೆಚ್ಚು ಜನರು ಪಡೆದಿದ್ದಾರೆ. ಇದರಿಂದ ಸೋಂಕು ಹಾಗೂ ಸಾವಿನ ಪ್ರಮಾಣ ಕಡಿಮೆಯಾಗಿದೆ. ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಯರು, ಆರೋಗ್ಯ ಇಲಾಖೆ ಹಾಗೂ ಗ್ರಾ.ಪಂ.ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಕಾರ್ಯ ಮೆಚ್ಚುವಂತಹದ್ದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಜಿ.ಹೆಚ್.ನಾಗರಾಜು, ತಾ.ಪಂ.ಇಒ ಧರಣೇಶ್, ಗ್ರಾ.ಪಂ.ಪಿಡಿಒ ರಾಮು, ಕಾರ್ಯದರ್ಶಿ ಶಿವಕುಮಾರ್, ಗ್ರಾ.ಪಂ. ಅಧ್ಯಕ್ಷೆ ಹಾಗೂ ಸದಸ್ಯರುಗಳು ಇದ್ದರು.