ಕೊರೊನಾ ಸೋಂಕು ತಡೆ ಕರ್ತವ್ಯವಾಗಲಿ-ನಾಗರಾಜ್

ಮುಳಬಾಗಿಲು, ಅ.31:ಕೋವಿಡ್ ೧೯ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಕೊರೋನ ಸೋಂಕನ್ನು ತಡೆಗಟ್ಟಬೇಕಾಗಿರುವುದು ಆದ್ಯ ಕರ್ತವ್ಯವಾಗಬೇಕಾಗಿದೆ, ಆದ್ದರಿಂದ ಈ ಬಾರಿಯ ಕನ್ನಡ ರಾಜ್ಯೋತ್ಸವವನ್ನು ಸರಳ ಮತ್ತು ಅರ್ಥಪೂರ್ಣವಾಗಿ ತಾಲೂಕು ಆಡಳಿತದಿಂದ ಆಚರಣೆ ಮಾಡಲಾಗುತ್ತಿದ್ದು, ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳು ಸಹಾ ಸರಳವಾಗಿ ರಾಜ್ಯೋತ್ಸವವನ್ನು ತಮ್ಮ ತಮ್ಮ ಸಂಘಟನೆಗಳ ವ್ಯಾಪ್ತಿಯಲ್ಲಿ ಆಚರಣೆ ಮಾಡುವ ಮೂಲಕ ಹೆಚ್ಚು ಕಡೆ ಕನ್ನಡ ಕಾರ್ಯಕ್ರಮಗಳು ಮಾಡುವ ಮೂಲಕ ಕನ್ನಡದ ಮೆರುಗನ್ನು ಹೆಚ್ಚಿಸಬೇಕೆಂದು ತಹಶೀಲ್ದಾರ್ ಕೆ.ಎನ್.ರಾಜಶೇಖರ್ ತಿಳಿಸಿದರು.
ತಾಲೂಕು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವದ ಬಗ್ಗೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ಸರ್ಕಾರದ ಪ್ರತಿಯೊಂದು ಇಲಾಖೆಯಲ್ಲೂ ಆಯಾ ಅಧಿಕಾರಿಗಳು ಸಿಬ್ಬಂದಿ ರಾಜ್ಯೋತ್ಸವವನ್ನು ಆಚರಣೆ ಮಾಡುವುದರ ಜೊತೆಗೆ ಇಲಾಖೆಗಳ ಕಟ್ಟಡಗಳಿಗೆ ಆ ೩೧ರ ರಾತ್ರಿ ವಿದ್ಯುತ್ ದೀಪಾಲಂಕಾರ ನ.೧ ರಂದು ತಳಿರು ತೋರಣಗಳಿಂದ ಶೃಂಗರಿಸಿ ಹಬ್ಬದ ವಾತಾವರಣದ ಮೂಲಕ ಕನ್ನಡದ ಕಂಪನ್ನು ಅರಳಿಸಲು ಸೂಚನೆ ನೀಡಲಾಗಿದೆ ಎಂದರು.
ನಗರದ ಪ್ರತಿಯೊಂದು ಪ್ರಮುಖ ಸ್ಥಳದಲ್ಲೂ ಒಂದೊಂದು ಕನ್ನಡಪರ ಸಂಘಟನೆಗಳು ಸ್ವ ಪ್ರೇರಣೆಯಿಂದ ಸರಳವಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಣೆ ಮಾಡಿ ಕೋವಿಡ್ ನಿಯಮಗಳನ್ನು ಅನುಸರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಬೇಕೆಂದು ಸೂಚಿಸಿದರು.
ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ.ಶಂಕರ್‌ಕೇಸರಿ ಮಾತನಾಡಿ ಸರ್ಕಾರಿ ಕಚೇರಿಗಳಲ್ಲಿ ಸಂಪೂರ್ಣ ಕನ್ನಡ ವಾತಾವರಣ ನಿರ್ಮಾಣ ಮಾಡಬೇಕು, ಲಿಖಿತ ಭಾಷೆ ಕನ್ನಡವಾದರೂ ಆಡು ಭಾಷೆ ತೆಲುಗು ಆಗಬಾರದು, ಸರ್ಕಾರಿ ಅಧಿಕಾರಿಗಳು ಮತ್ತು ನೌಕರರು ಸಾರ್ವಜನಿಕರೊಂದಿಗೆ ಕನ್ನಡದಲ್ಲೇ ಮಾತನಾಡುವ ಮೂಲಕ ಭಾಷೆ ಎಲ್ಲಾ ಹಂತದಲ್ಲೂ ಕನ್ನಡವಾಗುವಂತಹ ವಾತಾವರಣ ನಿರ್ಮಿಸಬೇಕೆಂದು ಕೋರಿದರಲ್ಲದೆ ಅಂಗಡಿ ಮುಂಗಟ್ಟುಗಳಲ್ಲಿ ನಾಮಫಲಕಗಳು ಶೇಕಡ ೭೦ರಷ್ಟೇ ಕನ್ನಡದಲ್ಲಿ ಎದ್ದು ಕಾಣುವಂತೆ ಬರೆಸಲು ಕಡ್ಡಾಯಮಾಡಬೇಕೆಂದು ಹೇಳಿದರು.ಕನ್ನಡದ ಸಂಘದ ಅಧ್ಯಕ್ಷ ಇ.ಶ್ರೀನಿವಾಸಗೌಡ ಮಾತನಾಡಿ ಈ ಬಾರಿ ಸರಳವಾಗಿ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಿದ್ದು ನವೆಂಬರ್ ಪೂರ್ತಿ ಕನ್ನಡ ಚಲನಚಿತ್ರಗಳು ಪ್ರದರ್ಶನಕ್ಕೆ ಚಿತ್ರ ಮಂದಿರದ ಮಾಲೀಕರಿಗೆ ಸೂಚನೆ ನೀಡಬೇಕೆಂದು ತಿಳಿಸಿದರು.
ನಗರದ ಎಲ್ಲಾ ವೃತ್ತಗಳಲ್ಲೂ ವಿವಿಧ ಕನ್ನಡಪರ ಸಂಘಟನೆಗಳಿಂದ ರಾಜ್ಯೋತ್ಸವವನ್ನು ಅಚರಣೆ ಮಾಡಲು ವೃತ್ತಗಳಲ್ಲಿ ಅಲಂಕಾರ ಮಾಡಿ ಕನ್ನಡ ವಾತಾವರಣ ನಿರ್ಮಾಣ ಮಾಡಲು ನಿರ್ಣಯಿಸಲಾಯಿತು.
ಕಸಬಾ ಆರ್.ಐ. ಸಾದತ್ತುಲ್ಲಾಖಾನ್, ಕಚೇರಿಯ ವಿಷಯ ನಿರ್ವಾಹಕ ಅಭಿಷೇಕ್, ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಎ.ಅಪ್ಪಾಜಿಗೌಡ, ಕರ್ನಾಟಕ ರಕ್ಷಣಾವೇಧಿಕೆ ಟಿ.ಎ.ನಾರಾಯಣಗೌಡ ಬಣದ ತಾಲೂಕು ಅಧ್ಯಕ್ಷ ಕೆ.ಎಸ್.ನಾಗೇಶ್‌ಬಾಬು, ಪ್ರವೀಣ್‌ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಹರೀಶ್‌ಗೌಡ, ಕಾರ್ಯದರ್ಶಿ ಹುಸೇನ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷ ವಿಮಲ, ಕನ್ನಡಪರ ಸಂಘಟನೆಗಳ ಮುಖಂಡರಾದ ವೆಂಕಟೇಶ್, ನಂದಕುಮಾರ್, ಮಂಜುನಾಥ್, ಆವನಿ ಮಂಜು ಮತ್ತಿತರರು ಇದ್ದರು.