ಕೊರೊನಾ ಸೋಂಕು ಕ್ಷೀಣ

ನವದೆಹಲಿ,ನ.೨೭- ದೇಶದಲ್ಲಿ ನಿನ್ನೆ ದಾಖಲಾಗಿದ್ದ ಸೋಂಕು ಸಂಖ್ಯೆಗಿಂತ ಇಂದು ಶೇಕಡ ೨೧ ರಷ್ಟು ಕಡಿಮೆ ಸೋಂಕು ದೃಢಪಟ್ಟಿದೆ.

ನೆನ್ನೆ ೧೦,೫೪೯ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇಂದು ಈ ಸಂಖ್ಯೆ ೮,೩೧೮ ಮಂದಿಯಲ್ಲಿ ಕಾಣಿಸಿಕೊಂಡಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ಕಳೆದ ೨೪ ಗಂಟೆಗಳ ಅವಧಿಯಲ್ಲಿ ೪೬೫ ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು ೧೦,೯೬೭ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮಾಹಿತಿಯಲ್ಲಿ ತಿಳಿಸಲಾಗಿದೆ.

ಇಂದು ಬೆಳಗ್ಗೆ ೮ ಗಂಟೆ ತನಕ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸಂಖ್ಯೆ ಸೇರಿದಂತೆ ಇಲ್ಲಿಯತನಕ ಒಟ್ಟಾರೆ ಸಂಖ್ಯೆ ೩,೪೫,೬೩,೭೪೯ ಕ್ಕೆ ಏರಿಕೆಯಾಗಿದೆ. ಜೊತೆಗೆ ಸೋಂಕಿನಿಂದ ಚೇತರಿಸಿಕೊಂಡು ಬಿಡುಗಡೆಯಾದ ಒಟ್ಟು ಸಂಖ್ಯೆ ೩,೩೯,೮೮,೭೯೭ ಮಂದಿಗೆ ಹೆಚ್ಚಳವಾಗಿದೆ. ಸೋಂಕಿನಿಂದ ಇರುವರೆಗೂ ಮೃತಪಟ್ಟವರ ಒಟ್ಟು ಸಂಖ್ಯೆ ೪,೬೭,೯೩೩ ಮಂದಿಗೆ ಏರಿಕೆಯಾಗಿದೆ.

ಸಕ್ರಿಯ ಪ್ರಕರಣ ಇಳಿಕೆ:

ನೆನ್ನೆ ಚೇತರಿಕೆ ಪ್ರಮಾಣಕ್ಕಿಂತ ಸೋಂಕು ಸಂಖ್ಯೆ ಏರಿಕೆಯಾಗಿದ್ದ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣ ಇಳಿಕೆಯಾಗಿತ್ತು.ಇಂದು ಸೋಂಕು ಸಂಖ್ಯೆ ಕಡಿಮೆಯಾಗಿ ಚೇತರಿಕೆ ಅಧಿಕವಾಗಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಮತ್ತಷ್ಟು ಇಳಿಕೆಯಾಗಿದೆ.

ದೇಶದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ ೧,೦೭,೦೧೯ ಮುಂದಿಯಲ್ಲಿ ಇದೆ . ೫೪೧ ದಿನಗಳ ಬಳಿಕ ಅತಿ ಕಡಿಮೆ ಪ್ರಕರಣ ಇದಾಗಿದೆ. ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಇದುವರೆಗೂ ೧೨೧.೦೬ ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜೊತೆಗೆ ಇಲ್ಲಿಯತನಕ ೬೩.೮೨ ಕೋಟಿ ಜನರಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ತಿಳಿಸಿದೆ.

ಕೊರೊನಾ ಸೋಂಕಿನ ದಿನದ ಪಾಸಿಟಿವಿಟಿ ಪ್ರಮಾಣ ಶೇ.೦.೮೬ ರಷ್ಟು ಇದ್ದು ವಾರದ ಸರಾಸರಿ ಪ್ರಮಾಣ ಶೇ.೦೮೮ ರಷ್ಟು ಇದೆ.

ಶೇ.೯೮.೩೪ ರಷ್ಟು ಚೇತರಿಕೆ

ದೇಶದಲ್ಲಿ ಪ್ರತಿನಿತ್ಯ ಸೋಂಕು ಸಂಖ್ಯೆ ಏರಿಳಿತ ವಾಗುತ್ತಿರುವ ನಡುವೆಯೇ ಚೇತರಿಕೆಯ ಪ್ರಮಾಣವೂ ಏರಿಳಿತವಾಗುತ್ತದೆ.

ಸದ್ಯ ಸೋಂಕಿನ ಚೇತರಿಕೆಯ ಒಟ್ಟು ಪ್ರಮಾಣ ಶೇ.೯೪.೩೪ ರಷ್ಟು ಇದೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ