ಕೊರೊನಾ ಸೋಂಕು ಏರಿಕೆ, ಸಾವಿನ ಸಂಖ್ಯೆ ಇಳಿಕೆ

ಬೆಂಗಳೂರು, ನ.9- ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾಗಿದ್ದು ಮತ್ತು ಸಾವಿನ ಸಂಖ್ಯೆ‌ ಇಳಿಕೆಯಾಗಿದೆ.

ರಾಜ್ಯದಲ್ಲಿ ಇಂದು ಹೊಸದಾಗಿ 293 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು 4 ಮಂದಿ ಸಾವನ್ನಪ್ಪಿದ್ದಾರೆ.ಜೊತೆಗೆ 323 ಮಂದಿ ಚೇತರಿಸಿಕೊಂಡು ಗುಣಮುಖರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ‌

ರಾಜ್ಯದಲ್ಲಿ‌ ಇಂದು ಬಾಗಲಕೋಟೆ, ಬೀದರ್, ಚಾಮರಾಜ‌ನಗರ, ದಾವಣಗೆರೆ, ,ಗದಗ, ಹಾವೇರಿ,ಕೊಡಗು,,ಕೊಪ್ಪಳ, ಶಿವಮೊಗ್ಗ ಮತ್ತು ಯಾದಗಿರಿ ಜಿಲ್ಲೆಯಲ್ಲಿ ಯಾವುದೇ ಸೋಂಕು ಪ್ರಕರಣ ದೃಢಪಟ್ಟಿಲ್ಲ.

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಸೋಂಕು ಸೇರಿದಂತೆ ಇಲ್ಲಿಯ ತನಕ ಒಟ್ಟು ಸೋಂಕಿತರ ಸಂಖ್ಯೆ 29,90,528 ಕ್ಕೆ ಏರಿಕೆಯಾಗಿದೆ.ಇಲ್ಲಿಯ ತನಕ 29,44,442 ಕ್ಕೆ ಏರಿಕೆಯಾಗಿದೆ. ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 38,112 ಕ್ಕೆ ಏರಿಕೆ.

ರಾಜ್ಯದಲ್ಲಿ ಸದ್ಯ ಸಕ್ರಿಯ ಪ್ರಕರಣಗಳ ಸಂಖ್ಯೆ 7955 ಕ್ಕೆ ಕುಸಿದಿದೆ.

ಸೋಂಕಿನಿಂದ ಸಾವನ್ನಪ್ಪಿದವ ಪ್ರತಿಶತ ಪ್ರಮಾಣ ಶೇ.1.36 ಕ್ಕೆ ಏರಿಕೆಯಾಗಿದ್ದು ಸಕ್ರಿಯ ಪ್ರಕರಣಗಳ ಸಂಖ್ಯೆ ಪ್ರತಿಶತ 0.36ರಷ್ಟು ಇದೆ.

ಬೆಂಗಳೂರಿನಲ್ಲಿ ಏಳಿಕೆ

ಬೆಂಗಳೂರಿನಲ್ಲಿ ಕೊರೊನಾ ಸೋಂಕು ಪ್ರಕರಣ ಇಂದು ಏರಿಕೆಯಾಗಿದೆ. 187 ಮಂದಿಗೆ ಕಾಣಿಸಿಕೊಂಡಿದ್ದು, 106 ಚೇತರಿಸಿಕೊಂಡು ಬಿಡುಗಡೆಯಾಗಿದ್ದಾರೆ. ಇಂದು 2 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

79 ಸಾವಿರ ಪರೀಕ್ಷೆ:

ರಾಜ್ಯದಲ್ಲಿ ಇಂದು 79,996 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು ಇಲ್ಲಿಯತನಕ ಒಟ್ಟಾರೆಯಾಗಿ 5,15, 72,429 ಮಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಇಂದಿನ ಪ್ರಕರಣ

ಜಿಲ್ಲೆ ಎಷ್ಟು

  • ಬಾಗಲಕೋಟೆ- 0
  • ಬಳ್ಳಾರಿ – 3
  • ಬೆಳಗಾವಿ – 1
  • ಬೆಂಗಳೂರು ಗ್ರಾಮಾಂತರ- 6
  • ಬೆಂಗಳೂರು ನಗರ. – 187
  • ಬೀದರ್ 0
  • ಚಾಮರಾಜನಗರ- 0
  • ಚಿಕ್ಕಬಳ್ಳಾಪುರ- 1
  • ಚಿಕ್ಕಮಗಳೂರು- 1
  • ಚಿತ್ರದುರ್ಗ- 2
  • ದಕ್ಷಿಣ ಕನ್ನಡ – 21
  • ದಾವಣಗೆರೆ- 0
  • ಧಾರವಾಡ- 3
  • ಗದಗ- 0
  • ಹಾಸನ- 10
  • ಹಾವೇರಿ- 0
  • ಕಲಬುರಗಿ- 4
  • ಕೊಡಗು- 0
  • ಕೋಲಾರ- 12
  • ಕೊಪ್ಪಳ- 0
  • ಮಂಡ್ಯ- 5
  • ಮೈಸೂರು- 18
  • ರಾಯಚೂರು- 1
  • ರಾಮನಗರ – 2
  • ಶಿವಮೊಗ್ಗ- 0
  • ತುಮಕೂರು- 6
  • ಉಡುಪಿ- 4
  • ಉತ್ತರ ಕನ್ನಡ- 5
  • ವಿಜಯಪುರ – 1
  • ಯಾದಗಿರಿ- 0