ಕೊರೊನಾ ಸೋಂಕು ಇಂದು ಗಣನೀಯ ಇಳಿಕೆ

ಬೆಂಗಳೂರು ನ.7-ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾಗುತ್ತಿದೆ ಇಂದುನಿನ್ನೆಗಿಂತ ಸೋಂಕು ಪ್ರಕರಣಗಳು ಇಳಿಮುಖವಾಗಿದೆ. ಸಾವಿನ ಸಂಖ್ಯೆ ಕೂಡ ಕಡಿಮೆಯಾಗಿರುವುದು ನಿರಾಳತೆ ತಂದಿದೆ ಆದರೆ ಗುಣಮುಖರಾಗುವ ಸಂಖ್ಯೆ ಕಡಿಮೆ ಇದೆ, ಇಂದು ರಾಜ್ಯದಲ್ಲಿ 2258 ಜನರಿಗೆಸೊಂಕು ದೃಢ ಪಟ್ಟಿದೆ.


ಇಂದು2235 ಸೋಂಕಿತರು ಗುಣಮುಖರಾಗಿದ್ದಾರೆ ಹಾಗೆಯೇ ಸೋಂಕಿಗೆ 22 ಸೋಂಕಿತರು ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ844147 ಕ್ಕೆ ಏರಿಕೆಯಾಗಿದೆ.
ರಾಜ್ಯದಲ್ಲಿ ಒಟ್ಟು799439 ಕೋವಿಡ್ ಸೊಂಕಿತರು ಚೇತರಿಸಿಕೊಂಡಿದ್ದಾರೆ. ಮತ್ತು ಸದ್ಯಕ್ಕೆ ರಾಜ್ಯದಲ್ಲಿ ಒಟ್ಟು 33320 ಸಕ್ರಿಯ ಸೋಂಕು ಪ್ರಕರಣಗಳಿವೆ. ಸೋಂಕಿನಿಂದ ಈವರೆಗೆ 11369ಜನ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ 887ಸೋಂಕಿತರು ತುರ್ತು ನಿಗಾ ಘಟಕದಲ್ಲಿ ದಾಖಲುಗೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಕಳೆದ 24 ಗಂಟೆಯಲ್ಲಿ 1046ಮಂದಿಗೆ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿನ ಸಂಖ್ಯೆ 347748ಕ್ಕೆ ಏರಿಕೆಯಾಗಿದೆ. ನಗರದಲ್ಲು ಕಳೆದ24ಗಂಟೆಗಳಲ್ಲಿ ಸೊಂಕಿಗೆ 07ಮಂದಿಬಲಿಯಾಗಿದ್ದು , ಒಟ್ಟಾರೆ ಸಾವಿನ ಸಂಖ್ಯೆ 3945ಕ್ಕೆ ಏರಿಕೆಯಾಗಿದೆ. ಇಂದು 502 ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ ಬೆಂಗಳೂರುನಲ್ಲಿ ಒಟ್ಟು17978 ಸಕ್ರಿಯ ಪ್ರಕರಣಗಳಿವೆ

ಜಿಲ್ಲಾ ವಾರು ಸೊಂಕಿತರ ವಿವರ

ಬಾಗಲಕೋಟೆ 24ಬಳ್ಳಾರಿ 55 ಬೆಳಗಾವಿ19ಬೆಂಗಳೂರು ಗ್ರಾಮಾಂತರ 70ಬೀದರ್02 ಚಾಮರಾಜನಗರ 13 ಚಿಕ್ಕಬಳ್ಳಾಪುರ 56ಚಿಕ್ಕಮಗಳೂರು 63ಚಿತ್ರದುರ್ಗ 98ದಕ್ಷಿಣ ಕನ್ನಡ 72ದಾವಣಗೆರೆ 44ಧಾರವಾಡ 12 ಗದಗ 07ಹಾಸನ 83ಹಾವೇರಿ 26ಕಲಬುರಗಿ 24ಕೊಡಗು 18ಕೋಲಾರ 19ಕೊಪ್ಪಳ 22ಮಂಡ್ಯ 68ಮೈಸೂರು 79ರಾಯಚೂರು 08ರಾಮನಗರ 28ಶಿವಮೊಗ್ಗ 24ತುಮಕೂರು 165ಉಡುಪಿ 18ಉತ್ತರ ಕನ್ನಡ 29ವಿಜಯಪುರ 58ಯಾದಗಿರಿ 08