ಕೊರೊನಾ ಸೋಂಕುತಡೆಗೆ ನಾನಾ ಕ್ರಮ

ಆನೇಕಲ್ಮೇ 3-ಇಡೀ ದೇಶದ್ಯಾಂತ ಮಹಾಮಾರಿ ಕೊರೋನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೊರೋನಾ ಸೋಂಕು ಹರಡದಂತೆ ತಡೆಯಲು ಸರ್ಕಾರಗಳು. ವೈದ್ಯರು, ಸಂಘ ಸಂಸ್ಥೆಗಳು ಎಲ್ಲೆಡೆ ನಾನಾ ರೀತಿಯಾದ ಕ್ರಮಗಳನ್ನು ಅನುಸರಿಸಲಾಗುತ್ತಿದೆ.
ಕೋವಿಡ್ ಎರಡನೇ ಅಲೆ ಉಲ್ಬಣ ಗೊಳ್ಳುತ್ತಿದ್ದು, ಕೊರೋನಾ ಸೋಂಕಿನಿಂದ ತಪ್ಪಿಸಿಕೊಳ್ಳಲು ಜನರು ನಾನಾ ಮಾರ್ಗಗಳನ್ನು ಕಂಡು ಕೊಂಡಿದ್ದು ವಿಶೇಷವಾಗಿ ಸರ್ಜಾಪುರ ಪೋಲಿಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಹರೀಶ್ ರೆಡ್ಡಿ ರವರು ಮಹಾಮಾರಿ ಕೋರೋನಾ ಸಂಧರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಸಾರ್ವಜನಿಕರ ರಕ್ಷಣೆಗೋಸ್ಕರ ಹಗಲು ರಾತ್ರಿ ಎನ್ನದೆ ದುಡಿಯುತ್ತಿರುವ ಪೋಲಿಸರು ಮತ್ತು ಅವರ ಕುಟುಂಬದವರ ಆರೋಗ್ಯವನ್ನು ಕಾಪಾಡುವ ಹಿತದೃಷ್ಠಿಯಿಂದ ಕುಕ್ಕರ್ ಸ್ಟೀಮ್ ಎಂಬ ವಿನೂತನ ಮಾರ್ಗವನ್ನು ರೂಪಿಸಿದ್ದಾರೆ.
ಈ ಕುರಿತು ಸರ್ಜಾಪುರ ಪೋಲಿಸ್ ಠಾಣೆಯ ಆರಕ್ಷಕ ಉಪನೀರಿಕ್ಷಕ ಹರೀಶ್ ರೆಡ್ಡಿ ಮಾತನಾಡಿ, ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸಿಗುವಂತಹ ತುಳಸಿ ಎಲೆ, ಬೇವಿನ ಎಲೆ, ನೀಲಗಿರಿ ಸೊಪ್ಪು, ನಿಂಬೆ ಮರದ ಎಲೆ ಹಾಗೂ ಏಳಿ ಕಾಯಿ ಮರದ ಎಲೆಗಳನ್ನು ಕುಕ್ಕರ್ ನಲ್ಲಿ ಬೇಯಿಸಿದಾಗ ಆ ಮೂಲಕ ಕುಕ್ಕರ್ ನಿಂದ ಹೊರ ಬರುವಂತಹ ಸ್ಟೀಮ್ ನ್ನು ಪ್ರತಿನಿತ್ಯಾ ಎರಡು ಭಾರಿ ತೆಗೆದು ಕೊಂಡಾಗ ಮಹಾಮಾರಿ ಕೊರೋನಾ ವೈರೆಸ್ ನಿಂದ ಆಗುವಂತಹ ತೊಂದರೆಗಳಿಂದ ತಪ್ಪಿಸಿಕೊಳ್ಳಬಹುದು ಎಂಬುವ ದೃಷ್ಠಿಕೋನದಲ್ಲಿ ನಮ್ಮ ಪೋಲಿಸ್ ಠಾಣೆ ಆವರಣದಲ್ಲಿ ಈ ಸ್ಟೀಮ್ ವ್ಯವಸ್ಥೆ ಮಾಡಲಾಗಿದ್ದು, ನಮ್ಮ ಸರ್ಜಾಪುರ ಪೋಲಿಸರು ಸಿಬ್ಬಂದಿಯು ಪ್ರತಿನಿತ್ಯ ಎರಡು ಬಾರಿ ಈ ಸ್ಟೀಮ್ ನ್ನು ತೆಗದು ಕೊಳಲಾಗುತ್ತಿದ್ದು ಇದುವರೆಗೆ ಯಾವುದೇ ಪೋಲಿಸರಿಗೂ ಕೊರೋನಾ ಸೋಂಕು ಹತ್ತಿರ ನುಸಳಿಲ್ಲ್ಲ ಎಂದು ಎಂದರು.
ಸಾರ್ವಜನಿಕರೂ ಕೂಡ ತಮ್ಮ ಮನೆ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಸಿಗುವಂತಹ ಔಷದಿ ಗುಣವುಳ್ಳ ಗಿಡಮೂಲಿಕೆಗಳನ್ನು ಬಳಕೆ ಮಾಡಿಕೊಂಡು ಪ್ರತಿ ನಿತ್ಯಾ ಸ್ಟೀಮ್ ನ್ನು ತೆಗೆದುಕೊಳ್ಳಿ ಜೊತೆಗೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಒಬ್ಬರಿಗೊಬ್ಬರು ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಿ ಮುಖ್ಯವಾಗಿ ಅನಾವಶ್ಯಕವಾಗಿ ಮನೆಯಿಂದ ಹೊರಗಡೆ ಬರಬೇಡಿ ಇದರಿಂದ ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಸಾಧ್ಯವಿದೆ ಎಂದು ತಿಳಿಸಿದರು.