ಕೊರೊನಾ ಸೋಂಕಿತರಿಗೆ ಯಾವುದೇ ಕೊರತೆ ಆಗದಿರಲಿ: ಭೈರತಿ ಬಸವರಾಜ್

ದಾವಣಗೆರೆ,ಏ.28: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಅಲೆಗೆ ತುತ್ತಾಗಿರುವ ಸೋಂಕಿತರಿಗೆ ಯಾವುದೇ ತೊಂದರೆ ಆಗದಂತೆ ಅಗತ್ಯ ಕ್ರಮ ಕೈಗೊಂಡು, ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಸೋಂಕು ನಿಯಂತ್ರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಭರತಿ ಬಸವರಾಜ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಕೋವಿಡ್-19 ನಿಯಂತ್ರಣ ಸಂಬAಧ ಜಿಲ್ಲೆಯ ಅಧಿಕಾರಿಗಳೊಂದಿಗೆ ವರ್ಚ್ಯುಯಲ್ ವಿಡಿಯೋ ಕಾನ್ಫರೆನ್ಸ್ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೇಕಾದ ರೆಮಡಿ ಸಿವಿಯರ್, ಆಕಸಿಜನ್, ವೆಂಟಿಲೇಟರ್‌ಗಳ ಕೊರತೆ ಇದ್ದರೆ ನನ್ನ ಗಮನಕ್ಕೆ ತನ್ನಿ, ನಾನು ಇಂದು ಆರೋಗ್ಯ ಸಚಿವರೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಮುಖ್ಯಮಂತ್ರಿಗಳೊAದಿಗೆ ಮಾತನಾಡಿ ಯಾವುದೇ ಕೊರತೆ ಆಗದಂತೆ ಕ್ರಮ ಕೈಗೊಳ್ಳುತ್ತೇನೆ ಎಂದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗಾಗಿ 2,425 ಹಾಸಿಗೆ ವ್ಯವಸ್ಥೆ ಮಾಡಲಾಗಿದ್ದು, ಈ ಪೈಕಿ 517 ಬೆಡ್‌ಗಳಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, 1908 ಬೆಡ್‌ಗಳು ಖಾಲಿ ಇವೆ. 181 ವೆಂಟಿಲೇಷನ್ ಬೆಡ್‌ಗಳಿದ್ದು, ಎಸ್‌ಎಸ್ ಹೈಟೆಕ್ ಮತ್ತು ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ 16 ಜನ ವೆಂಟಿಲೇಟರ್ ಮೇಲಿದ್ದಾರೆ. 282 ಜನ ಆಕ್ಸಿಜನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 189 ಜನ ಹಾಸ್ಟಿಟಲ್ ಮತ್ತು 937 ಜನ ಮನೆಯಲ್ಲಿ ಐಸೋಲೇಷನ್ ಇದ್ದಾರೆ. ಈ ಪೈಕಿ 636 ಜನರು ದಾವಣಗೆರೆ ನಗರವೊಂದರಲ್ಲಿಯೇ ಇದ್ದಾರೆ ಎಂದು ಮಾಹಿತಿ ನೀಡಿದರು.ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ರೆಮ್ ಡಿಸಿವಿರ್ ಒಂದೇ ಔಷಧವಿಲ್ಲ. ಸೋಂಕಿನ ಲಕ್ಷಣದ ಮೇಲೆ ಬೇರೆ, ಬೇರೆ ಔಷಧಗಳನ್ನು ಉಪಯೋಗಿಸಿಯು ಚಿಕಿತ್ಸೆ ನೀಡಬೇಕಾಗುತ್ತದೆ. ಆದ್ದರಿಂದ ಆ ಔಷಧಗಳ ಪೂರೈಕೆಗೆ ಮತ್ತು ಲಸಕೀಕರಣ ಚುರುಕಾಗಿ ನಡೆಯುತ್ತಿದ್ದು, ಪ್ರಸ್ತುತ ಜಿಲ್ಲೆಯಲ್ಲಿ ನಿತ್ಯ 13 ಸಾವಿರ ಜನರಿಗೆ ಲಸಿಕೆ ನೀಡಲು ಗುರಿ ನೀಡಲಾಗಿದೆ. ಆದರೆ, ಲಸಕೀಕರಣಕ್ಕೆ ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ದಿನಕ್ಕೆ 20 ಸಾವಿರ ಡೋಸ್ ವಾಕ್ಸಿನ್ ಕೊಡಿಸಬೇಕೆಂದು ಮನವಿ ಮಾಡಿದರು.ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಮಾತನಾಡಿ, ಕೊರೊನಾ ನಿಯಂತ್ರಣಕ್ಕಾಗಿ ಅಧಿಕಾರಿಗಳು ಮೈಮರೆಯದೆ ಎಚ್ಚರ ವಹಿಸಿ ಕಾರ್ಯನಿರ್ವಹಿಸಬೇಕು. ಸೋಂಕಿತರಿಗೆ ಬೆಡ್ ಮತ್ತು ಚಿಕಿತ್ಸೆ ಸಿಗದೆ ಅಲೆದಾಡುವುದನ್ನು ತಪ್ಪಿಸಬೇಕು. ಒಂದು ವೇಳೆ ಇವು ಸಿಗದೆ ಸೋಂಕಿತರು ತೊಂದರೆಗೆ ಒಳಗಾದರೆ, ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.ಕೊರೊನಾ ನಿಯಂತ್ರಣಕ್ಕೆ ಸರ್ಕಾರ ಕಠಿಣ ಕರ್ಫ್ಯೂ ವಿಧಿಸಿ, ಹೊರಡಿಸಿರುವ ಮಾರ್ಗಸೂಚಿಗಳು ಕಟ್ಟು ನಿಟ್ಟಾಗಿ ಪಾಲಿಸಬೇಕು. ಎಲ್ಲರೂ ಜನರು ಗುಂಪು, ಗುಂಪಾಗಿ ಸೇರಿದಂತೆ ನೋಡಿಕೊಳ್ಳಬೇಕು. ಕೋವಿಡ್ ನಿಯಮಾವಳಿ ಉಲ್ಲಂಘಿಸುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದುಜ ಸೂಚನೆ ನೀಡಿದರು.ಕೃಷಿ ಚಟುವಟಿಕೆಗೆ ಮತ್ತು ಕೃಷಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದAತೆ ಕ್ರಮ ಕೈಗೊಳ್ಳಬೇಕು. ತಕ್ಷಣವೇ ರೈತರಿಗೆ ಗ್ರೀನ್ ಪಾಸ್ ವಿತರಿಸಬೇಕು ಎಂದು ಹೇಳಿದರು.ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, 14 ದಿನಗಳು ವಿಧಿಸಿರುವ ಕರ್ಫ್ಯೂನ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ, ಜಿಲ್ಲೆಯಲ್ಲಿ ಸೋಂಕಿನ ಸರಪಳಿ ಮುರಿದು, ಕೋವಿಡ್ ನಿಯಂತ್ರಿಸಲು ನಾನು ಮತ್ತು ಅಧಿಕಾರಿಗಳ ತಂಡ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತಯರಾಯ, ಡಿಎಚ್‌ಓ ಡಾ.ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಜಿಲ್ಲಾಸ್ಪತ್ರೆ ಅಧೀಕ್ಷಕ ಡಾ.ಜಯಪ್ರಕಾಶ್, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ತಹಶೀಲ್ದಾರ್ ಗಿರೀಶ್ ಮತ್ತಿತರರು ಹಾಜರಿದ್ದರು.