ಕೊರೊನಾ ಸೋಂಕಿತರಿಗೆ ಔಷಧಿ ಕೊರತೆ – ವೈದ್ಯ ಶಾಸಕ ಮೌನ

ಕಾಳಸಂತೆಯಲ್ಲಿ ಔಷಧಿ ಮಾರಾಟ – ತನಿಖೆಗೆ ಆಗ್ರಹ
ರಾಯಚೂರು.ಏ.೨೭- ಅಗತ್ಯ ಸೋಂಕಿತರಿಗೆ ರೆಮ್‌ಡಿಸಿವಿರ್ ಇಂಜಕ್ಷನ್ ಪೂರೈಸುವಲ್ಲಿ ಆಡಳಿತ ಸಂಪೂರ್ಣ ವಿಫಲವಾಗಿದೆಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಅವರು ಆರೋಪಿಸಿದರು.
ಅವರಿಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಹುಸೇನಪ್ಪ ಇವರು ಇಂಜಕ್ಷನ್ ಕೊರತೆಯಿಂದಾಗಿ ನಿಧನ ಹೊಂದಿದ್ದಾರೆ. ಅವರ ಕುಟುಂಬದವರು ನೇರವಾಗಿ ಆರೋಪಿಸಿದ್ದಾರೆ. ಒಂದು ಇಂಜಕ್ಷನ್ ನೀಡಿದ ನಂತರ ಇನ್ನೂ ಇಂಜಕ್ಷನ್ ನೀಡಬೇಕಾಗಿತ್ತು. ಆದರೆ, ರೆಮ್‌ಡಿಸಿವಿರ್ ಲಭ್ಯವಿಲ್ಲವೆಂದು ಹೇಳಲಾಗಿತ್ತು. ಅಲ್ಲದೇ, ಕಾಳಸಂತೆಯಲ್ಲಿ ಈ ಇಂಜಕ್ಷನ್ ಮಾರಾಟವಾಗುತ್ತಿದೆ ಎನ್ನುವ ಆರೋಪಗಳ ಬಗ್ಗೆ ತನಿಖೆ ನಡೆಯಬೇಕಾಗಿದೆ.
ಕೊರೊನಾ ಎರಡನೇ ಅಲೆ ದೇಶದಲ್ಲಿ ಹೆಚ್ಚಿದ್ದು, ಆಸ್ಪತ್ರೆಯಲ್ಲಿ ರೋಗಿಗಳಿಗೆ ಬೆಡ್ ದೊರೆಯುತ್ತಿಲ್ಲ. ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಪ್ರಕರಣಗಳು ಹೆಚ್ಚಿದರು ಚುನಾವಣಾ ಆಯೋಗ ಉಪಚುನಾವಣೆಗಳನ್ನು ನಡೆಸಿದ್ದಾರೆ.
ಉಪಚುನಾವಣೆಯಲ್ಲಿ ವಿವಿಧ ಪಕ್ಷಗಳು ಲಕ್ಷಾಂತರ ಜನರನ್ನು ಸೇರಿಸಿ ಚುನಾವಣಾ ಪ್ರಚಾರಗಳನ್ನು ನಡೆಸಿ ಕೊರೊನ ರೋಗವನ್ನು ಹೆಚ್ಚಿಗೆ ಮಾಡುವಲ್ಲಿ ಮುಂದಾಗಿದ್ದಾರೆ. ಕಳೆದ ವರ್ಷ ಲಾಕ್ ಡೌನ್ ನಿಂದಾಗಿ ಸಾಮಾನ್ಯ ಜನರು ಅಲವರು ಸಮಸ್ಯೆಗಳನ್ನು ಅನುವಾಸಿದ್ದರು. ಮತ್ತೆ ಈಗಿನ ಸರ್ಕಾರ ಉಪಚುನಾವಣೆಗಳು ಮುಗಿದ ನಂತರ ಲಾಕ್ ಡೌನ್ ಸಾಮಾನ್ಯ ಜನರಿಗೆ ತೊಂದರೆ ಉಂಟುಮಾಡಿದ್ದಾರೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಪ ಮುಖ್ಯಮಂತ್ರಿ ಲಕ್ಷ್ಮಣ ಸೌದಿ ಅವರು ವಿಡಿಯೋಕಾನ್ ಫ್ರೆಂಸ್ಸ್ ಮುಖಾಂತರ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ ಆದರೆ ನಗರದ ಸರಕಾರಿ ಆಸ್ಪತ್ರೆಯಲ್ಲಿ ರೆಮಿಡಿಸಿಎಲ್ ಔಷದಿಯು ಕಾಲಸಂತೆಯಲ್ಲಿ ಮಾರಾಟವಾಗುತ್ತಿದೆ ಈ ಔಷಧಿ ದೊರೆಯದೆ ಇತ್ತೀಚೆಗೆ ಒಂದೇ ದಿನಕ್ಕೆ ೬ ರಿಂದ ೮ ಜನ ಮೃತಪಟ್ಟಿದ್ದಾರೆ.
ರೆಮ್‌ಡಿಸಿವಿರ್ ಇಂಜಕ್ಷನ್ ಕಾಳಸಂತೆಯಲ್ಲಿ ೧೫ ರಿಂದ ೨೦ ಸಾವಿರ ರೂ.ಗೆ ಮಾರಾಟ ಮಾಡಲಾಗುತ್ತಿದೆಂದು ಆರೋಪಿಸಿದ ಅವರು, ಸೋಂಕಿತರಿಗೆ ಅಜಿತ್ರಾಮೈಸ್ ಔಷಧಿ ದೊರೆಯದೇ, ತೊಂದರೆ ಎದುರಿಸುತ್ತಿದ್ದಾರೆ. ನಗರ ಶಾಸಕ ಡಾ.ಶಿವರಾಜ ಪಾಟೀಲ್ ಅವರು ಸ್ವತಃ ಒಬ್ಬ ವೈದ್ಯರಾಗಿದ್ದಾರೆ. ಯಾವ ರೀತಿಯಲ್ಲಿ ಚಿಕಿತ್ಸೆ ನೀಡಬಹುದೆಂದು ಸಂಪೂರ್ಣ ಜ್ಞಾನ ಹೊಂದಿದವರಾಗಿದ್ದಾರೆ. ಆದರೆ, ಇದುವರೆಗೂ ಅವರು ಜಿಲ್ಲಾಡಳಿತ ಜೊತೆ ಯಾವುದೇ ಸಭೆ ನಡೆಸಿಲ್ಲ. ಕಾಳಸಂತೆಯಲ್ಲಿ ಔಷಧಿ ಮಾರಾಟವಾಗುತ್ತಿದ್ದರೂ, ಚಕಾರವೆತ್ತುತ್ತಿಲ್ಲ. ತಾವೊಬ್ಬ ಅತ್ಯುತ್ತಮ ಶಾಸಕರು ಎಂದು ಹೇಳುತ್ತಾರೆ. ಆದರೆ, ತಮ್ಮ ಕ್ಷೇತ್ರದ ವಿಫಲತೆ ಬಗ್ಗೆ ಮೌನವಾಗಿದ್ದು, ಅವರನ್ನು ಜನ ಸಂಶಯದಿಂದ ನೋಡುವಂತೆ ಮಾಡಿದೆ.
ಈಗಾಗಲೇ ಕಾಳ ಸಂತೆಯಲ್ಲಿ ಮಾರಾಟ ಮಾಡಿದ ರೀಮ್ಸ್ ವಾಹನ ಚಾಲಕ ಬಂಡೆಪ್ಪ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ ನಮಗೆ ಬಂಡೆಪ್ಪಗೆ ಔಷಧಿಯನ್ನು ನೀಡಿದ ವೈದ್ಯರು ಯಾರು ಎನ್ನುವದು ತಿಳಿಸಬೇಕಾಗಿದೆ ಈ ಕುರಿತು ರೀಮ್ಸ್ ಡೀನ್ ಡಾ.ಬಸವರಾಜ ಪಿರಪುರು ಅವರನ್ನು ವಿಚಾರಿಸಿದಾಗ ಅವರು ನಮಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದರು.
ಕೋವಿಡ್ ೧೯ ರೋಗವು ಅಧಿಕಾರಿಗಳಿಗೆ ಲಾಭದಾಯಕವಾಗಿದೆ ಕೋವಿಡ್ ಸೋಂಕು ಹರಡಿದ ರೋಗಿವು ಆಸ್ಪತ್ರೆಗೆ ದಾಖಲಾಗಿದ್ದವರೆಗೆ ಕನಿಕರ ತೋರುತ್ತಿಲ್ಲ ನಗರದಲ್ಲಿ ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದರು ನಗರ ಶಾಸಕ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಯೂಸುಫ್ ಖಾನ್, ಶಿವಶಂಕರ ವಕೀಲ, ವಿಶ್ವನಾಥ ಪಟ್ಟಿ, ರಾಮಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.