ಕೊರೊನಾ ಸೋಂಕಿಗೆ ಬಸ್ ಕಂಡೆಕ್ಟರ್ ಸೇರಿ ಆಳಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಐವರ ಸಾವು

??????

ಆಳಂದ:ಮೇ.4: ಬೆಂಬೆತ್ತಿ ಕಾಡುತ್ತಿರುವ ಮಹಾಮಾರಿ ಕೊರೊನಾ ಸೋಂಕಿಗೆ ಸೋಲಾಪೂರ ಖಾಸಗಿ ಆಸ್ಪತ್ರೆಯಲ್ಲಿ ಸ್ಥಳೀಯ ಬಸ್ ಕಂಡೆಕ್ಟರ್ ಸೇರಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಲ್ವರು ಹೀಗೆ 24 ಗಂಟೆಯಲ್ಲಿ ಒಟ್ಟು ಐವರು ಮೃತಪಟ್ಟ ಘಟನೆ ಸೋಮವಾರ ವರದಿಯಾಗಿದೆ.

ಪಟ್ಟಣಸ ಸಾರ್ವಜನಿಕ ಆಸ್ಪತ್ರೆಯಲ್ಲಿ ಸ್ಥಳೀಯ ನಿವಾಸಿಗಳಾಗಿದ್ದ ಇಬ್ಬರು ಮಹಿಳೆಯರು, ಎಲೆನಾವದಗಿಯ ಓರ್ವ ಮಹಿಳೆ ಹಾಗೂ ಓರ್ವ ಸೋಂಕಿನ ಶಂಕಿತ ಪುರುಷ ಸೇರಿ ನಾಲ್ವಾರು ಮೃತಪಟ್ಟಿದ್ದಾರೆ.

ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಸ್ಥಳೀಯ ಬಸ್ ಘಟಕದ ನಿರ್ವಾಹಕರಾಗಿದ್ದ ಮಲ್ಲಿನಾಥ ಯಶ್ವಂತರಾಯ ಹೊನ್ನಳ್ಳಿ (40) ಎಂಬವರು ಮೃತದುರ್ದೈವಿಯಾಗಿದ್ದಾರೆ.

ನಾಲ್ಕು ದಿನಗಳ ಹಿಂದೆ ಕಂಡೆಕ್ಟರ್ ಅವರು ಕೋವಿಡ್ ವ್ಯಾಕ್ಸಿನ್ ಪಡೆದ ಬಳಿಕ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಸೋಲಾಪೂರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿಕೊಂಡಿವೆ.

ಮೃತರಿಗೆ ಪತ್ನಿ ಸೇರಿ ಮೂವರು ಗಂಡು ಮಕ್ಕಳು ಬಂದು ಬಳಗವನ್ನು ಅಗಲಿದ್ದಾರೆ. ಸೋಲಾಪೂರದಲ್ಲೇ ಕೋವಿಡ್ ನಿಯಮಾವಳಿಯಲ್ಲಿ ಸೋಮವಾರ ಅಂತ್ಯಕ್ರಿಯೆ ನೆರವೇರಿದೆ. ಸಾರಿಗೆ ಸಂಸ್ಥೆಯ ಸ್ಥಳೀಯ ನೌಕರರ ಸಂಘವು ಸಂತಾಪ ಸೂಚಿಸಿದೆ.

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೋಂಕಿನ ಚಿಕಿತ್ಸೆಗೆ ದಾಖಲಾಗಿದ್ದ ಎಲೆನಾವದಿ ಗ್ರಾಮದ 80 ವರ್ಷದ ಮಹಿಳೆ, ಪೂಜಾರಿ ಗಲ್ಲಿಯ 45 ವರ್ಷದ ಮಹಿಳೆ, ಬಾಹ್ಮಣಗಲಿಯ 48 ವರ್ಷದ ಮಹಿಳೆ ರವಿವಾರ ಮೃತರಾದರೆ, ಹಳ್ಳಿಸಲಗರ ಗ್ರಾಮದ 48 ವರ್ಷದ ಸೋಂಕಿನ ಶಂಕಿತ ಪುರುಷ ಸೋಮವಾರ ದಾಖಲಾಗಿ ಇದೇ ದಿನ ಆಸ್ಪತ್ರೆಯಲ್ಲೇ ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

26 ಹೊಸ ಪ್ರಕರಣ: ಪಟ್ಟಣ ಸೇರಿ ಗ್ರಾಮೀಣ ಭಾಗದಲ್ಲಿ ಕೋವಿಡ್-19 ತಪಸಣೆಗೆ ಒಳಗಾದವರ ಪೈಕಿ 26 ಮಂದಿಗೆ ಸೋಂಕು ಪತ್ತೆಯಾಗಿದೆ. ತಂಬಾಕವಾಡಿ 1, ನಿಂಬರಗಾ 2, ಸಂಗೋಳಗಿ ಸಿ. 2, ಲಿಂಗನವಾಡಿ 1, ಮಾದನಹಿಪ್ಪರಗಾ 1, ನಿಂಗದಳ್ಳಿ 1, ಮೋಘಾ ಕೆ. 1, ಜಮಗಾ ಜೆ 1, ಆಳಂಗಾ 1, ತೆಲಾಕುಣಿಯಲ್ಲಿ 1, ಧುತ್ತರಗಾಂವ 1, ಕೊಡಲಹಂಗರಗಾ 2, ಕೊರಳ್ಳಿ 1, ಮಾಡಿಯಾಳ 1, ತೀರ್ಥ 2, ಸಕ್ಕರಗಾ 1, ಸಾವಳೇಶ್ವರ 1, ತಡಕಲ್ 2, ಆಳಂದ ಪಟ್ಟಣದಲ್ಲಿ 4, ಹೀಗೆ ಒಟ್ಟು ಸೋಮವಾರ 26 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.