ಕೊರೊನಾ ಸೋಂಕಿಗಿಂತ ಚೇತರಿಕೆ ದ್ವಿಗುಣ

ಬೆಂಗಳೂರು, ಜೂ.7- ರಾಜ್ಯದಲ್ಲಿ ಕೊರೊನಾ ಸೋಂಕು ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದ್ದು ಚೇತರಿಕೆ ಪ್ರಮಾಣ ಹೆಚ್ಚಾಗುತ್ತಿದೆ.

ರಾಜ್ಯದಲ್ಲಿ ಇಂದು 11,958 ಮಂದಿಗೆ ಕೊರೊನಾ ಸೊಂಕು ಕಾಣಿಸಿಕೊಂಡಿದ್ದು 27,299 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಚೇತರಿಕೆ ಪ್ರಮಾಣ ಸೋಂಕಿಗಿಂತ ದ್ವಿಗುಣವಾಗಿದೆ.

ಕಳೆದ 24 ಗಂಟೆಯಲ್ಲಿ 340 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ‌ ಸೋಂಕಿನ ಸಂಖ್ಯೆ ಸೇರಿದಂತೆ ಇಲ್ಲಿಯ ತನಕ ಒಟ್ಟಾರೆ ಸೋಂಕಿನ ಸಂಖ್ಯೆ 27,07,481 ಕ್ಕೆ ಏರಿಕೆಯಾಗಿದೆ. 24,36,716 ಮಂದಿ ಇದುವರೆಗೂ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಜೊತೆಗೆ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 31,920ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ರಾಜ್ಯದಲ್ಲಿ ದಿನೇ ದಿನೇ ಸಕ್ರಿಯ ಪ್ರಕರಣಗಳ ಸಂಖ್ಯೆ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಒಟ್ಟಾರೆ ಸಕ್ರಿಯ ಪ್ರಕರಣಗಳ ಸಂಖ್ಯೆ 23,88,24,ಕ್ಕೆ ಕುಸಿದಿದೆ.

1,31ಲಕ್ಷ ಮಂದಿಗೆ ಪರೀಕ್ಷೆ

ರಾಜ್ಯದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 1,31553 ಮಂದಿಗೆ ಕೊರೊನಾ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದೆ ಈ ಮೂಲಕ ಇದುವರೆಗೂ ರಾಜ್ಯದಲ್ಲಿ 30,73,2,003 ಕ್ಕೇ ಎರಿಕೆಯಾಗಿದೆ.

ಇಂದಿನ ಸೋಂಕು

ಜಿಲ್ಲೆ ಎಷ್ಟು

 • ಬಾಗಲಕೋಟೆ- 112
 • ಬಳ್ಳಾರಿ – 267
 • ಬೆಳಗಾವಿ – 355
 • ಬೆಂಗಳೂರು ಗ್ರಾಮಾಂತರ- 292
 • ಬೆಂಗಳೂರು ನಗರ. – 1992
 • ಬೀದರ್ 13
 • ಚಾಮರಾಜನಗರ- 209
 • ಚಿಕ್ಕಬಳ್ಳಾಪುರ- 282
 • ಚಿಕ್ಕಮಗಳೂರು- 365
 • ಚಿತ್ರದುರ್ಗ- 294
 • ದಕ್ಷಿಣ ಕನ್ನಡ – 408
 • ದಾವಣಗೆರೆ- 380
 • ಧಾರವಾಡ- 313
 • ಗದಗ- 141
 • ಹಾಸನ- 1108
 • ಹಾವೇರಿ- 179
 • ಕಲಬುರಗಿ- 67
 • ಕೊಡಗು- 230
 • ಕೋಲಾರ- 298
 • ಕೊಪ್ಪಳ- 155
 • ಮಂಡ್ಯ- 597
 • ಮೈಸೂರು- 1213
 • ರಾಯಚೂರು- 64
 • ರಾಮನಗರ – 48
 • ಶಿವಮೊಗ್ಗ- 1224
 • ತುಮಕೂರು- 420
 • ಉಡುಪಿ- 394
 • ಉತ್ತರ ಕನ್ನಡ- 364
 • ವಿಜಯಪುರ – 137
 • ಯಾದಗಿರಿ- 37