ಕೊರೊನಾ ಸೊಂಕು:ಮೃತಪಟ್ಟ ಸಿಬ್ಬಂದಿಗಳಿಗೆ ಮೌನಚರಣೆ


ರಾಯಚೂರು.ಜೂ.೦೧-ಕೊರೊನಾ ರೋಗಕ್ಕೆ ನಾವು ಆತ್ಮಸ್ಥೈರ್ಯದಿಂದ ವಾರಿಯರ್ಸ್ ಆಗಿ ಕಾರ್ಯ ನಿವಾಹಿಸೋಣ ಎಂದು ಜಿಲ್ಲಾ ಸತ್ರ ಹೆಚ್ಚುವರಿ ನ್ಯಾಯಾಲಯ ನ್ಯಾಯಾಧೀಶರಾದ ಕೆ.ಆರ್. ನಾಗರಾಜ ಅವರು ಹೇಳಿದರು.
ಅವರಿಂದು ಜಿಲ್ಲಾ ನ್ಯಾಯಾಲಯದಲ್ಲಿ ಅಮ್ಮಿಕೊಂಡಿದ್ದ ಕೊರೋನಾ ಸೋಂಕಿನಿಂದ ಮೃತರಾದ ನ್ಯಾಯಾಲಯದ ಸಿಬ್ಬಂದಿ ಮತ್ತು ವಕೀಲರ ಆತ್ಮಕ್ಕೆ ಶಾಂತಿ ಕೋರಿ ಸಂತಾಪ ಸೂಚಕ ಸಭೆ ಉದ್ದೇಶಿಸಿ ಮಾತನಾಡಿದ ಅವರು ಕೊರೋನ ರೋಗ ಸಂಕಷ್ಟ ಸಮಯದಲ್ಲಿ ನ್ಯಾಯಾಲಯ ಕಲಾಪದಲ್ಲಿ ಭಾಗವಹಿಸಿ ವಕೀಲರು, ನ್ಯಾಯಾಂಗ ನೌಕರರ ಮೃತಪಟ್ಟದ್ದಾರೆ ಇವರು ಕುಟುಂಬದವರ ಜೊತೆ ಸದಾ ನಾವು ಇದ್ದವೇ ಎಂದು ಈ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲಲ್ಲಿ ನ್ಯಾಯಾಲಯದಲ್ಲಿ ಕಾರ್ಯ ನಿರ್ವಹಿಸುವಸಲು ಕೊರೊನ ರೋಗದೊಂದಿಗೆ ನಾವು ಕೊರೊನ ವಾರಿಯರ್ಸ್ ಯಾಗಿ ಕೆಲಸ ಮಾಡಬೇಕಾಗಿದೆ ನಾವು ಆತ್ಮಸ್ಥೈರ್ಯ ದಿಂದ ಕೆಲಸ ಮಾಡೋಣ,ಹೈಕೋರ್ಟ್ ಈ ಶ್ರದ್ಧಾಂಜಲಿ ಸಭೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದ ಅದಕಾರಣ ಇಂದು ಕರ್ನಾಟಕದಾದ್ಯಂತ ಎಲ್ಲ ನ್ಯಾಯಾಲಯಗಳಲ್ಲಿ ಹಮ್ಮಿಕೊಳ್ಳಲಾಗಿದೆ ತಾವು ಎಲ್ಲರೂ ಕರೋನ ನಿಯಮಗಳನ್ನು ತಪ್ಪದೇ ಪಾಲಿಸಿ ಕಲಾಪದಲ್ಲಿ ಭಾಗವಹಿಸುವಬೇಕೇಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಬಸವರಾಜ ಅವರು ಮೃತಪಟ್ಟ ವಕೀಲರ ವಿವರ ನೀಡಿದರು ನ್ಯಾಯಾಂಗ ಇಲಾಖೆಯ ನೌಕರರ ಬಸವರಾಜ ಶಿವಂಗಿ ಮೃತಪಟ್ಟ ನೌಕರರ ಬಗೆ ಮಾತನಾಡಿದರು ಮೃತಪಟ್ಟ ವಕೀಲರ ಮತ್ತು ನೌಕರರ ಆತ್ಮಕ್ಕೆ ಶಾಂತಿ ಸಿಗಲೆಂದು ಎರಡು ನಿಮಿಷ ಮೌನ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನ್ಯಾಯಾಧೀಶರಗಳಾದ ಹೇಮ ಪಸ್ತಪೂರ್,ಈಶ್ವರಪ್ಪ,ಶ್ರೀ ನರಸಿಂಹ ಮೂರ್ತಿ, ಶ್ರೀ ಅವಿನಾಶ ಘಾಳೆ,ಸುರೇಶ್ ವಾಗಣ್ಣ,ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಶಿವಕುಮಾರ ನಾಯಕ, ಹಿರಿಯ ವಕೀಲರಾದ ನಾಗರಾಜ ಮಸ್ಕಿ, ಭಾನುರಾಜ್, ಸಿ.ಬಿ.ಪಾಟೀಲ ಶಿವಶಂಕರ, ದೊಡ್ಡಪ್ಪ, ವೆಂಕಟೇಶ, ಮುನ್ನ ಕುಮಾರ ಸರ್ಕಾರಿ ವಕೀಲರು ರಾಘವೇಂದ್ರ ಮತ್ತು ಅನೇಕ ವಕೀಲರು ಮತ್ತು ನ್ಯಾಯಾಂಗ ಇಲಾಖೆಯ ನೌಕರರು ಭಾಗವಹಿಸಿದ್ದರು