ಕೊರೊನಾ ಸೊಂಕಿತರಿಗೆ ಅಗತ್ಯ ವಸ್ತು ವಿತರಣೆ


ಅಳ್ನಾವರ,ಮೇ.2: ಕೋರೊನಾ ಸಂಕಷ್ಟದ ಸಮಯದಲ್ಲಿ ಜನರ ಸಂಕಷ್ಟ ನಿವಾರಣೆಗೆ ಸ್ಥಳಿಯ ಅರ್ಬನ್ ಕೋ ಆಫ್ ಬ್ಯಾಂಕ್ ಸದಾ ಮುಂದೆ ಇದೆ. ಸೋಂಕಿತರಿಗೆ ಅನುಕೂಲ ಆಗಲು ಅಗತ್ಯ ವಸ್ತುಗಳ ಕಿಟ್ ನೀಡಲಾಗಿದೆ ಅದನ್ನು ಬಳಕೆ ಮಾಡಿಕೊಂಡು ಸದೃಡ ಆರೋಗ್ಯ ಕಾಪಾಡಿಕೊಳ್ಳಿ ಎಂದು ಅರ್ಬನ್ ಬ್ಯಾಂಕ್ ಉಪಾಧ್ಯಕ್ಷೆ ರೂಪೇಶ ಗುಂಡಕಲ್ ಹೇಳಿದರು.
ಇಲ್ಲಿನ ಕಸ್ತೂರಭಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ತೆರೆದ ಕೋವಿಡ್ ಕೇರ್ ಸೇಂಟರ ನ ಸೋಂಕಿತರಿಗೆ ಕಿಟ್ ನೀಡಿ ಮಾತನಾಡಿದ ಅವರು. ಬ್ಯಾಂಕು ತನ್ನ ಆರ್ಥಿಕ ಚಟುವಟಿಕೆ ಜೊತೆಗೆ ಸಾಮಾಜಿಕ ಕಾರ್ಯದಲ್ಲಿ ಕೂಡಾ ಮುಂಚೂಣಿಯಲ್ಲಿದೆ ಎಂದರು.
ಕೊರೊನಾ ಸೋಂಕಿನ ಸರಪಳಿ ಕತ್ತರಿಸಲು ಸರ್ಕಾರ ಸೂಚಿಸಿದ ಎಲ್ಲ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ಜನರನ್ನು ಕೋರೊನಾ ಪರೀಕ್ಷೆಗೆ ಓಳಗಾಗಲು ಹಾಗೂ ಲಸಿಕೆ ಹಾಕಿಸಿಕೊಳ್ಳಲು ಜಾಗೃತಿ ಮೂಡಿಸಬೇಕು. ಸೋಂಕಿತರ ಮನ ಒಲಿಸಿ ಕೋವಿಡ್ ಕೇರ್ ಸೆಂಟರಗೆ ದಾಖಲಿಸಲು ಶ್ರಮಿಸುತ್ತಿರುವ ಕಾರ್ಯ ಪಡೆ ತಂಡದ ಕಾರ್ಯ ಶ್ಲಾಘನೀಯ. ಸೋಂಕು ತಡೆ ನಿರ್ವಹಣೆಯಲ್ಲಿನ ಶ್ರದ್ದೆ, ಅರ್ಪಣಾ ಮನೋಭಾವ ಹೀಗೆ ಇರಲಿ. ಈ ಕಂಟಕ ಸಮಾಜದಿಂದ ದೂರ ಆಗುವರೆಗೂ ನಿಮ್ಮ ಸೇವೆ ಇರಲಿ ನಿಮಗೆ ಎಲ್ಲ ಸಹಕಾರ ಇದೆ ಎಂದರು.
ಈ ಭಾಗದ ಸಮಸ್ಯೆ ಹಾಗೂ ಸವಾಲುಗಳನ್ನು ಅರಿತು ಸೋಂಕಿತರ ಪ್ರಮಾಣ ತಗ್ಗಿಸಲು ಕಾಯ್ ತಂತ್ರ ರೂಪಿಲಾಗಿದೆ. ಪಾಸಿಟಿವ್ ಬಂದ ಕುಟುಂಬ ಸದಸ್ಯರು ಹಾಗೂ ಸಂಪರ್ಕಿತರು ಕಡ್ಡಾಯವಾಗಿ ಕೋವಿಡ್ ತಪಾಸಣೆ ಮಾಡಲಾಗುತ್ತಿದೆ. ಸೋಂಕು ಹರಡದಂತೆ ಕರೆ ನೀಡಿದ ಲಾಕ್ ಡೌನ ಯಶಸ್ವಿಗೆ ಜನರು ಉತ್ತಮ ಸಹಕಾರ ನೀಡಿದ್ದಾರೆ. ಮಾಸ್ಕ್ , ಸಾಮಾಜಿಕ ಅಂತರ , ಸ್ಯಾನಿಟೈಜರ್ ಬಳಸುವಂತೆ ಪ್ರೇರೆಪಿಸುವ ಮೂಲಕ ಸೋಂಕು ನಿಯಂತ್ರಿಸಿ ಮರಣ ಪ್ರಮಾಣ ಕಡಿಮೆ ಮಾಡಲು ತಾಲ್ಲೂಕ ಆಡಳಿತ ಶ್ರಮಿಸುತ್ತಿದೆ ಎಂದು ತಹಶೀಲ್ದಾರ್ ಅಮರೇಶ ಪಮ್ಮಾರ ಹೇಳಿದರು.
ಕೋವಿಡ್ ಕೇರ್ ಸೆಂಟರ ಹಾಗೂ ಗ್ರಾಮೀಣ ಭಾಗದ ಕೋವಿಡ್ ಕಾಳಜಿ ಕೇಂದ್ರಗಳಿಗೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ಸೋಂಕಿತರಿಗೆ ಆತ್ಮ ಮನೋಬಲ ಹೆಚ್ಚಿಸಲು ವಿವಿಧ ಆಟಿಕೆಗಳ ಪರಿಕರ ನೀಡಲಾಗಿದೆ. ಮನರಂಜನೆ ಕಾರ್ಯಕ್ರಮ ಕೂಡಾ ಆಯೋಜಿಸಲಾಗಿದೆ. ಸೋಂಕಿತರು ಭಯ ಪಡದೆ ಮುಕ್ತವಾಗಿ ಇರುವ ವಾತಾವರಣ ಕಲ್ಪಿಸಲಾಗಿದೆ. ತಾಲ್ಲೂಕ ಆಡಳಿತ, ಪಟ್ಟಣ ಪಂಚಾಯ್ತಿ, ಪೋಲಿಸ್ ಇಲಾಖೆ , ಸಾರ್ವಜನಿಕರು ಹಾಗೂ ಸ್ಥಳಿಯ ಸಂಘ ,ಸಂಸ್ಥೆಗಳು ನಮ್ಮ ಜೊತೆ ಕೈಜೊಡಿಸಿವೆ.ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಪೀಡುಗು ನಿಯಂತ್ರಿಸಿ, ಪಾಸಿಟಿವಿಟಿ ದರ ಹಾಗೂ ಮರಣ ಪ್ರಮಾಣ ತಗ್ಗಿಸಲು ತಾಲ್ಲೂಕಾಡಳಿತ ಶ್ರಮಿಸುತ್ತಿದೆ ಎಂದರು.
ಪಟ್ಟಣ ಪಂಚಾಯ್ತಿ ವತಿಯಿಂದ ಸೋಕಿತರಿಗೆ ಹಣ್ಣು, ನೀರಿನ ಬಾಟಲಿ ಸೇರದಂತೆ ಅಗತ್ಯ ವಸ್ತುಗಳ ಕಿಟ್ ಗಳನ್ನು ಅಧ್ಯಕ್ಷೆ ಮಂಗಲಾ ರವಳಪ್ಪನವರ ಹಾಗೂ ಉಪಾಧ್ಯಕ್ಷ ನದೀಮ ಕಾಂಟ್ರ್ಯಾಕ್ಟರ್ ವಿತರಿಸಿದರು.ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಪಿ.ಕೆ. ಗುಡದಾರಿ, ಅಮೂಲ ಗುಂಜೀಕರ, ಛಗನಲಾಲ ಪಟೇಲ, ಮಧು ಬಡಸ್ಕರ್, ಡಾ. ಬಸವರಾಜ ಮೂಡಬಾಗಿಲ್, ಭಾಗ್ಯವತಿ ಕುರುಬರ, ಜೈಲಾನಿ ಸುದರ್ಜಿ, ರಾಜು ಯಲಕಪಾಟಿ, ನೇತ್ರಾವತಿ ಕಡಕೋಳ, ಶಾಲೆಟ್ ಬೆರೆಟ್ಟೊ, ಯಲ್ಲಪ್ಪ ಹೂಲಿ, ಗೋರಿ, ಅರ್ಬನ ಬ್ಯಾಂಕ್ ಮ್ಯಾನೇಜರ ರವಿ ಪಟ್ಟಣ, ಪ್ರವೀಣ ಪವಾರ, ಡಾ. ಸಂಜಯ ಚಂದರಗಿಮಠ, ಬೆಣಚಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಂದೀಪ ಪಾಟೀಲ, ವೆಂಕಟೇಶ ಜಳಗೇಕರ ಇದ್ದರು.