ಕೊರೊನಾ ಸೊಂಕಿಗೆ ೯ ಬಲಿ, ವ್ಯಾಕ್ಸಿನ್‌ಗೆ ಜನರ ಪರದಾಟ

ಸಿಂಧನೂರು.ಏ.೨೯- ನಗರ ಹಾಗೂ ತಾಲೂಕಿನಲ್ಲಿ ಕೊರೊನಾ ಸೊಂಕಿಗೆ ಇಲ್ಲಿತನಕ ಖಾಸಗಿ ವೈದ್ಯರು ಸೇರಿದಂತೆ ಒಟ್ಟು ೯ ಜನ ಬಲಿಯಾಗಿದ್ದು ಕೊರೊನಾ ಸೊಂಕಿತರ ಸಂಖ್ಯೆ ಮಾತ್ರ ಕಡಿಮೆಯಾಗದೆ ಹೆಚ್ಚುತ್ತಲೆ ಹೋಗುತ್ತದೆ.
ನಗರಸಭೆ, ಪೋಲಿಸ್ ಇಲಾಖೆ, ಆರೋಗ್ಯ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಜನರಲ್ಲಿ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದರು ಸಹ ಕೇಳದೆ ವಿನಾ ಕಾರಣವಾಗಿ ರಸ್ತೆಯಲ್ಲಿ ಓಡಾಡುತ್ತಾ ಅಧಿಕಾರಿಗಳ ತಲೆ ಬಿಸಿ ಮಾಡುತ್ತಿದ್ದಾರೆ.
ಪ್ರತಿದಿನಕ್ಕೆ ೨೫೦೦ ಕೊವಿಡ್ ಪರೀಕ್ಷೆ ಜಿಲ್ಲೆಯಲ್ಲಿ ಮಾಡುತ್ತಿದ್ದು ಉಳಿದ ಜನರ ಪರೀಕ್ಷೆಯನ್ನು ಮರುದಿನ ಮಾಡಲಾಗುತ್ತದೆ ಇದರಿಂದ ಪಾಸಿಟಿವ್ ವರದಿ ವಿಳಂಬ ವಾಗುತ್ತಿರುವದು ಕಂಡುಬಂದಿದೆ.
ಸರ್ಕಾರ ಕೊವಿಡ್ ಸಿಡ್ ಹಾಗೂ ಕೊವಿಡ್ ವ್ಯಾಕ್ಸಿನ್ ಕೊರತೆ ಇಲ್ಲ ಜನ ಹಾಕಿಸಿ ಕೊಳ್ಳಲು ಮುಂದೆ ಬರುತ್ತಿಲ್ಲ ಎಂದು ಹೇಳುತ್ತಿದ್ದು ಆದರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಜನ ಭಯಬೀತರಾಗಿ ವ್ಯಾಕ್ಸಿನ್ ಕೊವಿಡ್ ಶಿಡ್ ಹಾಕಿಸಿ ಕೊಳ್ಳಲು ಬಂದರೆ ಯಾವುದೇ ತರಹ ವ್ಯಾಕ್ಸಿನ್‌ಗಳು ಲಭ್ಯ ಇಲ್ಲ ಆಸ್ಪತ್ರೆಯ ಸಿಬ್ಬಂದಿಗಳು ಮರಳಿ ಮನೆಗೆ ಕಳುಹಿಸುತ್ತಿದ್ದಾರೆ.
ಬೆಳಗಿನಿಂದ ವ್ಯಾಕ್ಸಿನ್ ಗಾಗಿ ಸಾಲುಗಟ್ಟಿ ನಿಂತಿದ್ದ ಜನ ವ್ಯಾಕ್ಸಿನ್ ಇಲ್ಲದಿರುವುದರಿಂದ ಸರ್ಕಾರ ಹಾಗೂ ಅಧಿಕಾರಿಗಳಿಗೆ ಇಡಿ ಶಾಪ ಹಾಕಿ ಮನೆಗೆ ಹೋಗುತ್ತಿರುವ ದೃಶ್ಯ ಸಾಮಾನ್ಯ ವಾಗಿದೆ.
ಏಪ್ರಿಲ್ ೨೩ ರಂದು ಕೊರೊನಾ ಸೊಂಕಿತರು ೧೩೭ ,೨೪ ರಂದು ೧೨೭, ೨೫ ರಂದು ೪೦ ,೨೬ ರಂದು ೧೯೯, ೨೭ ರಂದು ೧೦೨ ,೨೮ ರಂದು ೯೯, ೨೯ ರಂದು ೪೭ ನಗರ ಹಾಗೂ ತಾಲೂಕಿನಲ್ಲಿ ಬಂದ ಸೊಂಕಿತರ ಸಂಖ್ಯೆ ಯಾಗಿದೆ.ಬಳಗಾನೂರ – ೧ ,ಅಲಬನೂರು – ೧,ದೇವಿ ಕ್ಯಾಂಪ್ – ೧ ,ನಗರದ ನಟರಾಜ ಕಾಲೋನಿ – ೧ ,ಆದರ್ಶ ಕಾಲೋನಿ – ೧, ಗಾಂಧಿನಗರ – ೧ ,ಉಮಲೂಟಿ – ೧ ,ಕಾನಿಹಾಳ – ೧ ಒಟ್ಟು ಇಲ್ಲಿತನಕ ಒಂಬತ್ತು ಜನ ಕೊರೊನಾ ಸೊಂಕಿಗೆ ಬಲಿಯಾಗಿದ್ದಾರೆಂದು ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.
ಸಾರ್ವಜನಿಕ ಆಸ್ಪತ್ರೆಯ ೨೪ ಬೆಡ್ ಗಳಲ್ಲಿ ೧೮ ಜನ ಕೊವಿಡ್ ಕೇರ್ ಸೆಂಟರ್ ಶಿವಜ್ಯೋತಿ ನಗರ ನಲ್ಲಿ ೧೧೭ ಬೆಡ್ ಗಳಲ್ಲಿ ೧೭ ಜನ ಕೊರೊನಾ ಸೊಂಕಿತರನ್ನು ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತದೆ. ಜನ ಭಯಬೀತರಾಗಿ ಕೊವಿಡ್ ಲಸಿಕೆ ಹಾಕಿಸಿ ಕೊಳ್ಳಲು ಆಸ್ಪತ್ರೆಯಲ್ಲಿ ವ್ಯಾಕ್ಸಿನ್ ಕೊರತೆಯಿಂದ ಜನ ಆತಂಕಕ್ಕೆ ಒಳಗಾಗಿದ್ದು ಸರ್ಕಾರ ಮಾತ್ರ ಯಾವುದೇ ವ್ಯಾಕ್ಸಿನ್ ಕೊರತೆ ಇಲ್ಲ ಎಂದು ಹೇಳುತ್ತಿರುವದು ಜನರಲ್ಲಿ ಅನುಮಾನ ಬರುವಂತೆ ಮಾಡಿದೆ.
ನಗರದ ಖಾಸಗಿ ವೈದ್ಯರೊಬ್ಬರು ಕೊರೊನಾ ಗೆ ಬಲಿಯಾಗಿದ್ದು ನಗರದ ನ್ಯಾಯಧೀಶರೊಬ್ಬರಿಗೆ ಪಾಸಿಟಿವ್ ಬಂದಿದ್ದು ತಾಲುಕ ಆಡಳಿತ ಎಷ್ಟೇ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡರು ಸಹ ಜನ ಮಾತ್ರ ಮನೆಯಲ್ಲಿ ಇರದೆ ಹೊರಗೆ ಬಂದು ಮಾಸ್ಕ ಧರಿಸದೆ, ಸಾಮಾಜಿಕ ಅಂತರ ಕಾಪಾಡದೆ , ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆಗಳಲ್ಲಿ ಗುಂಪು ಗುಂಪಾಗಿ ತಿರುಗುತ್ತಾ ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತಿರುವದು ಕಂಡುಬಂದಿದೆ.