ಕೊರೊನಾ ಸೊಂಕಿಗೆ ತತ್ತರಿಸಿ ಆಳಂಗಾ ಗ್ರಾಮ ಗ್ರಾಮದಲ್ಲಿ ಭಯದ ವಾತಾವರಣ ; ಲಾಕ್ ಆದ ಮನೆ ಅಂಗಡಿಗಳು

ಆಳಂದ ;ಎ.20: ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣದಿಂದ ಇಡಿ ಜಿಲ್ಲೆ ಅಕ್ಷರಸಹ ತತ್ತರಿಸಿ ಹೋಗಿದೆ ಪ್ರತಿನಿತ್ಯ ನೂರಾರು ಹೊಸ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಜನರಲ್ಲಿ ಆತಂಕ ಮನೆ ಮಾಡಿದೆ. ಆಳಂದ ತಾಲೂಕಿನ ಮಹಾರಾಷ್ಟ್ರದ ಗಡಿ ಗ್ರಾಮದವಾದ ಆಳಂಗಾದಲ್ಲಿ ಸುಮಾರು 60ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಕಂಡು ಬಂದಿದ್ದರಿಂದ ಇಡಿ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು ಅಲ್ಲಿನ ಜನರು ಸ್ವಂ ಪ್ರೇರಿತರಾಗಿ ತಮ್ಮ ಅಂಗಡಿ ಬಂದ ಮಾಡಿ ಗ್ರಾಮವನ್ನು ಸಿಲ್ ಡೌನ ಮಾಡಿದ್ದಾರೆ. ಗ್ರಾಮದಲ್ಲಿ ನಡೆದ ಒಂದು ಸಣ್ಣ ಧಾರ್ಮಿಕ ಕಾರ್ಯಕ್ರಮದಲ್ಲಿ ನೆರೆಯ ಮಹಾರಾಷ್ಟ್ರದ ಪುಣೆಯಿಂದ ಸ್ವಲ್ಪ ಜನರು ಭಾಗಿಯಾಗಿದ್ದಾರೆ ಅವರಿಂದ ಗ್ರಾಮದಲ್ಲಿ ಏಕಕಾಲಕ್ಕೆ ಇಷ್ಟೊಂದು ಕೊರೊನಾ ಪ್ರಕರಣ ಹರಡಲು ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.ಗ್ರಾಮದಲ್ಲಿ 5 ಸಾವಿರ ಜನಸಂಖ್ಯೆ ಇದ್ದು ಎಲ್ಲರನ್ನು ಕೊರೊನಾ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೊರೊನಾ ಪ್ರಕರಣ ಮತ್ತಷ್ಟು ಹೆಚ್ಚಾಗುತ್ತಿದೆ ಇದಕ್ಕೆ ಬ್ರೆಕ್ ಹಾಕಲು ಸ್ಥಳಿಯ ಗ್ರಾ.ಪಂ ಇಡಿ ಗ್ರಾಮವನ್ನು ಸ್ಯಾನಿಟೈಜರ್ ಮಾಡಿದ್ದು ಸೋಂಕಿಗೆ ಒಳಗಾಗಿದ್ದ ಕುಟುಂಬದ ಜನರು ಮನೆಯಿಂದ ಹೊರ ಬರದಂತೆ ತಿಳಿಸಿದ್ದು ಪ್ರತಿಯೊಬ್ಬರು ಕೂಡಾ ಸಾಮಾಜಿಕ ಅಂತರ ಕಾಪಾಡಿ ಕಡ್ಡಾಯವಾಗಿ ಮಾಸ್ಕ ಧರಿಸಿ ಕೈಗಳನ್ನು ಶುದ್ದವಾಗಿ ತೊಳೆದುಕೊಳ್ಳಬೇಕು ಎಂದು ಜನರಲ್ಲಿ ಜಾಗೃತಿ ಮೂಡಿಲಸಾಗುತ್ತಿದೆ ಎಂದು ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಸಿದ್ದರಾಮ ಬೆಡೊಂಳಿ ಮಾದ್ಯಮಗಳಿಗೆ ತಿಳಿಸಿದ್ದಾರೆ.

ಕೊರೊನಾ ಹೆಚ್ಚಳಕ್ಕೆ ಮಹಾರಾಷ್ಟ್ರದ ಜನರ ಓಡಾಟ

ಆಳಂಗಾ ಗ್ರಾಮದಲ್ಲಿ ಇಷ್ಟೊಂದು ಪ್ರಕರಣಗಳು ಕಂಡು ಬರಲು ನೆರೆಯ ಮಹಾರಾಷ್ಟರದ ಜನರ ಓಡಾಟ ಗ್ರಾಮದಲ್ಲಿ ಹೆಚ್ಚಾಗಿ ಕಂಡು ಬಂದಿದ್ದರಿಂದೆ ಎನ್ನಲಾಗುತ್ತಿದೆ.ಗಡಿಯಲ್ಲಿ ಯಾವುದೆ ಚಕ್ ಪೋಷ್ಟ ಇಲ್ಲ ವ್ಯಾಪಾರಕ್ಕೆ ಜನರು ಮಹಾರಾಷ್ರ್ಟವನ್ನೆ ನಂಬಿದ್ದಾರೆ.ಹೀಗಾಗಿ ಜನರು ಭಯವಿಲ್ಲದೆ ಕರ್ನಾಟಕವನ್ನು ಪ್ರವೇಶ ಮಾಡುತ್ತಿದ್ದಾರೆ. ಇದರಿಂದ ಗಡಿ ಭಾಗದ ಗ್ರಾಮಗಳಲ್ಲಿ ಆತಂಕ ಮನೆ ಮಾಡಿದೆ

ಗಡಿಯಲ್ಲಿ ಕಟ್ಟೆಚ್ಚರ ವಹಿಸಿದ ಪೋಲಿಸರು

ಆಳಂದ ತಾಲೂಕು ಮಹಾರಾಷ್ಟ್ರದ ರಾಜ್ಯಕ್ಕೆ ಅಂಟಿಕೊಂಡಿರುವುದರಿಂದ 3 ಚಕ್ ಪೋಷ್ಟ ಕೆಲಸ ಮಾಡುತ್ತಿವೆ ಹಿರೋಳಿ ನಿಂಬಾಳ ಖಜೂರಿ ಗ್ರಾಮದಲ್ಲಿ ಚಕ್ ಪೋಷ್ಟ ಸ್ಥಾಪಿಸಲಾಗಿದೆ. ಇಲ್ಲಿಯವರೆಗೂ ಚಕ್ ಪೋಷ್ಟಗಳು ನೆಪ ಮಾತ್ರವಾಗಿದ್ದು ಯಾವುದೆ ನಿಯಮಗಳು ಇಲ್ಲಿ ಪಾಲನೆಯಾಗುತ್ತಿರಲಿಲ್ಲ ಆದರೆ ಆಳಂಗಾ ಗ್ರಾಮದಲ್ಲಿ ಕೊರೊನಾ ಪ್ರಕರಣ ಕಂಡು ಬಂದಿದ್ದರಿಂದ ಗಡಿ ಚಕ್ ಪೋಷ್ಟಗಳು ಕಟ್ಟೆಚ್ಚರ ವಹಿಸಿವೆ.

ಆಳಂಗಾ ಗ್ರಾಮದ ಕೊರೊನಾ ಪ್ರಕರಣ ಕಂಡು ಬಂದಿದ್ದರಿಂದ ತಾಲೂಕು ಆಡಳಿತ ಆರೋಗ್ಯ ಇಲಾಖೆ ಎಚ್ಚತ್ತುಕೊಳ್ಳಬೇಕಿದೆ ಉಳಿದ ಗಡಿ ಗ್ರಾಮಗಳಲ್ಲಿ ಕೂಡಾ ಮುಂಜಾಗ್ರತ ಕ್ರಮಗಳನ್ನು ಅಳವಡಿಸಿಕೊಳ್ಳಲು ಜಾಗ್ರತಿ ಮೂಡಿಸಬೇಕಿದೆ ಇಲ್ಲದೆ ಹೋದರೆ ಇಡಿ ತಾಲೂಕು ಕೊರೊನಾ ಪ್ರಕರಣಗಳ ತಾಣವಾಗುವುದಲ್ಲಿ ಸಂದೇಹವಿಲ್ಲ.

ಅಂಬಿಕಾ ಸಮುದಾಯ ಆರೋಗ್ಯಾಧಿಕಾರಿ ಆಳಂಗಾ

ಗ್ರಾಮದಲ್ಲಿ ಕೊರೊನಾ ಪ್ರಕರಣಗಳು ಕಂಡು ಬಂದಿದ್ದರಿಂದ ಜನರಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಪಾಜಿಟಿವ್ ವ್ಯಕ್ತಿಗಳಿಗೆ ಈಗಾಲೆ ಮಾತ್ರೆಗಳನ್ನು ನೀಡಿದ್ದು ಹೋಮ ಐಶೂಲೆಶನನಲ್ಲಿ ಇಡಲಾಗಿದೆ.ಹೆಚ್ಚಿನ ನಿಗಾ ವಹಿಸಿದ್ದು ಅಗತ್ಯ ಬಿದ್ದರೆ ಅವರನ್ನು ಕೊವಿಡ್ ಆಸ್ಪತ್ರಗೆ ಕಳಿಸಿಕೊಡಲಾಗವುದು.

ಪ್ರಫುಲ್ ಮಾಣಿಕರಾವ ಗ್ರಾ.ಪಂ ಸದಸ್ಯ

ಗ್ರಾಮದಲ್ಲಿ ಇಷ್ಟೊಂದು ಕೊರೊನಾ ಪ್ರಕರಣ ಕಂಡು ಬಂದಿದ್ದರಿಂದ ಗ್ರಾಮದಲ್ಲಿ ಭಯ ಮೂಡಿದೆ ಗ್ರಾಮಕ್ಕೆ ಬರುವುದನ್ನು ನಿರ್ಭಂದಿಸಲಾಗಿದೆ. ತಾಲೂಕು ಆಡಳಿತ ಪೋಲಿಸ್ ಇಲಾಖೆ ಆರೋಗ್ಯ ಇಲಾಖೆ ನಮಗೆ ಸ್ಪಂದಿಸುತ್ತಿಲ್ಲ ಸಹಕಾರ ನಿಡುತ್ತಿಲ್ಲ