ಕೊರೊನಾ ಸೇನಾನಿಗಳಿಗೆ ದಿನಸಿ ವಿತರಣೆ

ಬೆಂಗಳೂರು, ಜೂ.೫- ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಜಯ ಕರ್ನಾಟಕ ಜನಪರ ವೇದಿಕೆ ಹಾಗೂ ಐ ಕೇರ್ ಬ್ರಿಗೇಡ್ ಸಂಸ್ಥೆಯ ಸಹಯೋಗ ಕರ್ನಾಟಕ ಜನಪರ ವೇದಿಕೆ ಯುವ ಸಂಸ್ಥಾಪಕ ಅಧ್ಯಕ್ಷ ಬಿ. ಗುಣರಂಜನ್ ಶೆಟ್ಟಿ ನೇತೃತ್ವದಲ್ಲಿ ’ಮನೆಗೊಂದು ಮರ, ಊರಿಗೊಂದು ಕೆರೆ ಮತ್ತು ನಮ್ಮ ನಡೆ ನಿಸರ್ಗದ ಕಡೆ’ ಎಂಬ ಶೀರ್ಷಿಕೆಯಡಿಯಲ್ಲಿ ಹುಣಸಮಾರನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೋಡಗಲಹಟ್ಟಿ ಕೆರೆ ದತ್ತು ಪಡೆಯುವ ಕಾರ್ಯಕ್ರಮ ಹಾಗೂ ಕೊರೋನ ವಾರಿಯರ್ಸಗಳಿಗೆ ದಿನಸಿ ವಿತರಣೆ ಮಾಡಲಾಯಿತು.
ಈ ವೇಳೆ ಜಯಕರ್ನಾಟಕ ಜನಪರ ವೇದಿಕೆ ಯುವ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ಮಾತನಾಡಿ, ವಿಶ್ವಪರಿಸರ ದಿನ ಅಂಗವಾಗಿ ಪ್ರತಿ ವರ್ಷ ಕೆರೆ ಅಭಿವೃದ್ಧಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ. ಕೆರೆಯ ಮಹತ್ವ ತಿಳಿಸುವ ನಿಟ್ಟಿನಲ್ಲಿ ಐಕೇರ್ ಸಹಭಾಗಿತ್ವದಲ್ಲಿ ಕೊಡಗಲಹಟ್ಟಿ ಕೆರೆ ದತ್ತುಪಡೆಯಲಾಗಿದೆ. ಕೆರೆಯನ್ನು ಮೂಲ ರೀತಿಯಲ್ಲಿ ಯಾವುದೇ ರಾಸಾಯನಿಕ ಬಳಸದೇ ನೈಸರ್ಗಿಕವಾಗಿ ಇರುವಂತೆ ಅಗತ್ಯವಿರುವ ಮೂಲ ಸೌಕರ್ಯ ಒದಗಿಸಿ ಕೆರೆ ನೀರು ಶುದ್ಧೀಕರಿಸಲಾಗುವುದು.
ಕೆರೆಗಳ ಸಂರಕ್ಷಕರು ಮತ್ತು ಪರಿಸರವಾದಿ ಆನಂದ್ ಮಲ್ಲಿಗವಾಡ ಮಾತನಾಡಿ, ನೆಲಜಲವನ್ನು ನಾವಿರುವ ಜಾಗದಲ್ಲೆ ಸಂರಂಕ್ಷಿಸಿ ವಿದೇಶಿ ಗಿಡಮರಗಳನ್ನು ನೆಡದೆ ನಮ್ಮಲ್ಲೆ ಸಿಗುವ ಮರಗಳನ್ನು ನೆಡುತ್ತಿದ್ದೆವೆ. ಕೆರೆಗೆ ಕಲ್ಲು ಕಟ್ಟದೆ ಗಿಡ ನೆಟ್ಟು ಕೆರೆಯ ಏರಿಗಳನ್ನು ಸಂರಕ್ಷಿಸಲಾಗುವುದು. ನೀರಿನಲ್ಲಿ ಜೀವಿಗಳಿದ್ದರೆ ಪಕ್ಷಿಗಳ ಸಂಕುಲ ವಾಸಿಸುತ್ತದೆ. ನೈಸರ್ಗಿಕ ಪ್ರಕ್ರಿಯೆಯಲ್ಲಿ ಕಲುಷಿತ ನೀರನ್ನು ನೈಸರ್ಗಿಕ ವಿದಾನದಲ್ಲೆ ಶುದ್ದೀಕರಿಸಲು ವ್ಯವಸ್ಥೆ ಮಾಡಲಾಗುವುದು. ಗಿಡ ನೆಟ್ಟರೆ ಸಾಲದು ಅವುಗಳನ್ಮು ಪೋಷಿಸಬೇಕಿದೆ ಎಂದರು.
ವೇದಿಕೆಯ ಬೆಂ.ನಗರ ಜಿಲ್ಲಾಧ್ಯಕ್ಷ ಜೆ.ಶ್ರೀನಿವಾಸ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಆಮ್ಲಜನಕದ ಏರುಪೇರಿನಿಂದಾಗಿ ಹಲವಾರು ಸಮಸ್ಯೆಗಳು ತಲೆದೋರುತ್ತಿವೆ.೨.೫ಸಾವಿರ ಗಿಡನೆಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಜತೆಗೆ ಪ್ರತಿಯೊಬ್ಬರಿಗೂ ಮರಗಿಡಗಳು ಹಾಗೂ ಆಮ್ಲಜನಕದ ಮಹತ್ವ ತಿಳಿಸುವುದು ನಮ್ಮ ಉದ್ದೇಶವಾಗಿದೆ.ಈ ಕಾರ್ಯಕ್ರಮಕ್ಕೆ ಇಂದಿನಿಂದ ಚಾಲನೆ ನೀಡಿದ್ದೇವೆ ಎಂದು ಹೇಳಿದರು.
ಈ ವೇಳೆ ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ಆರ್.ಚಂದ್ರಪ್ಪ, ಉಪಾಧ್ಯಕ್ಷ ಉದಯ್ ಶೆಟ್ಟಿ, ಆತ್ಮಾನಂದ್, ರಾಜ್ಯ ಮಹಾ ಪ್ರಧಾನ ಸಂಚಾಲಕ ಶೇ.ಬೋ.ರಾಧಾಕೃಷ್ಣ, ಸಂಘಟನಾ ಕಾರ್ಯದರ್ಶಿ ಯೋಗೇಶ್ ಬಾಬು, ಬಾಲಚಂದರ್, ಐಕೇರ್ ಬ್ರಿಗೇಡ್ ನ ಪೂರ್ಣಿಮ ಪ್ರಸಾದ್, ಶಿಲ್ಪಾಸ್ಫೂರ್ತಿ,ಯಲಹಂಕ ತಾಲೂಕು ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಶ್ರೀನಿವಾಸ್, ಪಿಡಿಓ ಮಮತಾ.ಬಿ, ಸೇರಿದಂತೆ ಇನ್ನಿತರರಿದ್ದರು.