ಕೊರೊನಾ ಸುರಕ್ಷತಾ ಸಾಧನ ಬಿಡುಗಡೆ

ಬೆಂಗಳೂರು,ಮಾ,೨೭- ಮೇಕ್ ಇನ್ ಇಂಡಿಯಾ ಹಾಗೂ ಸ್ವಾವಲಂಬಿ ಭಾರತದ ಅಭಿಯಾನದ ಯೋಜನೆಯಡಿ ಕೊರೊನಾ ಸುರಕ್ಷತಾ ಸಾಧನ ಶೈಕೋಕ್ಯಾನ್ ಸೋಂಕು ಪತ್ತೆ ಹಚ್ಚುವ ಮೊಬೈಲ್ ಆ?ಯಪ್ ಅನಾವರಣ ಮಾಡಲಾಗಿದೆ.
ಸೆಂಟರ್ ಫಾರ್ ಅಡ್ವಾನ್ಸ್ಡ್ ರಿಸರ್ಚ್ ಆಂಡ್ ಡೆವಲಪ್ ಮೆಂಟ್ ಮತ್ತು ಆರ್ಗನೈಸೇಷನ್ ಡಿ ಸ್ಕಲೀನ್ ಫೌಂಡೇಷನ್ ಸಂಸ್ಥೆ ಮೀಟೆರ್ ಸಮೂಹದ ಸಹಭಾಗಿತ್ವದಲ್ಲಿ ಶೈಕೋಝೋನ್ ಬಿಡುಗಡೆ ಮಾಡಿದೆ
ರೆಸ್ಟಾರೆಂಟ್, ಜಿಮ್, ಥಿಯೇಟರ್, ಶಾಲೆಗಳು ಮತ್ತು ಕಾಲೇಜುಗಳು, ಆಸ್ಪತ್ರೆ, ಮಾಲ್, ಹೋಟೆಲ್ ಇತ್ಯಾದಿಗಳನ್ನು ಆಯ್ಕೆ ಮಾಡಿಕೊಂಡರೆ ಸಾಕು, ಆ ನಿರ್ದಿಷ್ಟ ಪ್ರದೇಶದಲ್ಲಿ ಸುರಕ್ಷಿತ ಸೈಕೋ ಝೋನ್ ಗಳು ಎಲ್ಲಿವೆ ಎಂಬುದನ್ನು ನಮೊಬೈಲ್ ಆ?ಯಪ್ ತೋರಿಸಿಕೊಡುತ್ತದೆ.
ಈ ಕಾರ್ಯಕ್ರಮದಲ್ಲಿ ಆರ್ಗನೈಜೇಷನ್ ಡಿ ಸ್ಕಲೀನ್ ಫೌಂಡೇಷನ್ನ ಮುಖ್ಯಸ್ಥ ಡಾ. ರಾಜೇಶ್ ವಿಜಯ ಕುಮಾರ್ ಮತ್ತು ಮೀಟರ್ ಸಮೂಹದ ಕಾರ್ಯಕಾರಿ ನಿರ್ದೇಶಕರಾದ ನಿಶ್ಚಯ್ ಮೀಟರ್ ಉಪಸ್ಥಿತರಿದ್ದರು
ಈ ಕುರಿತು ಮಾತನಾಡಿದ ಆರ್ಗನೈಜೇಷನ್ ಡಿ ಸ್ಕಲೀನ್ ಸಂಸ್ಥೆಯ ಮುಖ್ಯಸ್ಥ ಡಾ. ರಾಜೇಶ್ ವಿಜಯ್ ಕುಮಾರ್, “ವಿಶ್ವ ದರ್ಜೆಯ ಕ್ರಾಂತಿಕಾರಿ ತಂತ್ರಜ್ಞಾನ ಶೈಕೋಕ್ಯಾನ್- ಕೊರೊನಾ ಸೋಂಕು ಹಾಗೂ ಸೀಸನಲ್ ಇನ್ ಫ್ಲುಯೆನ್ಝಾದಂತಹ ಗಾಳಿಯ ಮೂಲಕ ಹರಡುವ ಇತರೆ ಸೋಂಕುಗಳ ವಿರುದ್ಧದ ಜಾಗತಿಕ ಹೋರಾಟದಲ್ಲಿ ಗೇಮ್ ಚೇಂಜರ್ ಆಗಿ ಹೊರಹೊಮ್ಮಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.