ಕೊರೊನಾ ಸಮೀಕ್ಷೆ ಕಾರ್ಯ ಪರಿಶೀಲನೆ

ಬಾಗಲಕೋಟ,ಮೇ.28 : ತಾಲೂಕಿನ ಗುಂಡನಪಲ್ಲೇ ಗ್ರಾಮಕ್ಕೆ ತಾಲೂಕ ದಂಡಾಧಿಕಾರಿ (ತಶೀಲ್ದಾರ) ಗುರಸಿದ್ದಯ್ಯ ಹಿರೇಮಠ ಭೇಟಿ ಕೊಟ್ಟು ಕೊರೋನಾ ಸಮೀಕ್ಷೆ ಕಾರ್ಯ ಪರಿಶೀಲಿಸಿದರು.
ಶಿರೂರ ವಲಯದ ಬೆನಕಟ್ಟಿ ಉಪಕೇಂದ್ರಕ್ಕೆ ಬರುವ ಗ್ರಾಮಗಳಲ್ಲಿ ಕೊರೋನ ವಾರಿಯರ್ಸಗಳಿಗೆ ಪ್ರತಿಯೊಂದು ಮನೆ ಬಿಡದೆ ಕರೋನ ಸಮೀಕ್ಷೆ ಕೈಗೊಳ್ಳಿ ಕೊರೋನ ಎರಡನೇ ಅಲೆ ವೇಗವಾಗ ಹರಡುತ್ತಿದ್ದ ಕಾರಣದಿಂದ ಇದನ್ನು ನಿಯಂತ್ರಿಸಲು ಕರೋನ ರೋಗಿಯ ಮನೆಗೆ ದಿನಾಲೂ ಬೇಟಿ ನೀಡಿ ಅವರ ಆರೋಗ್ಯದ ಬಗ್ಗೆ ಮತ್ತು ರೋಗಿಗಳಿಗೆ ಹದಿನಾಲ್ಕು ದಿನ ಮನೆಯಲ್ಲಿ ಇರಲು ಹೇಳಿ ಇದರ ಮದ್ಯದಲ್ಲಿ ಹೋಗಿಗೆ ಆರೋಗ್ಯದಲ್ಲಿ ಅಸ್ತವ್ಯಸ್ತತೆ ಕಂಡು ಬಂದರೆ ಕೋವಿಡ್ ಕೇಂದ್ರಕ್ಕೆ ಕಳಿಸಿ.ಕೋರೋನ ಮುಂಜಾಗ್ರತಾ ಕ್ರಮಗಳಾದ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಸಾಮಾಜಿಕ ಅಂತರ ಪಾಲಿಸುವುದು ಸ್ಯಾನಿಟರ್ ಬಳಸಿ ಕೈಗಳನ್ನು ತೋಳೆಯುವದು ಲಸಿಕೆ ಹಾಕಿಸಿಕೊಳ್ಳಲು ಮನೆ ಮನೆಗೆ ತೆರಳಿ ಆರೋಗ್ಯದ ಬಗ್ಗೆ ಶಿಕ್ಷಣ ನೀಡಿ ಗ್ರಾಮದಲ್ಲಿ ಕೊರೋನ ಜನಜಾಗೃತಿ ಅರಿವು ಮೂಡಿಸಿ ಎಂದು ಹೇಳಿದರು.
ಸಮೀಕ್ಷೆ ಕಾರ್ಯದಲ್ಲಿ ಎಸ್ ನಿಜಲಿಂಗಪ್ಪ ವೈದ್ಯಕೀಯ ಕಾಲೇಜ್ ವೈದ್ಯರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಶಿರೂರು ವ್ಯಾಪ್ತಿಯ ಬೆನಕಟ್ಟಿ ಉಪೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾ ಮಹಿಳಾ ಅಧಿಕಾರಿ ಜಿ ಆರ್ ತಳವಾರ, ಆರೋಗ್ಯ ನಿರೀಕ್ಷಣಾ ಅಧಿಕಾರಿ ಎಸ್. ಎಸ್. ಅಂಗಡಿ, ಅಂಗನವಾಡಿ ಕಾರ್ಯಕರ್ತೆಯರಾದ ರತ್ನಾ ಬಬಲೇಶ್ವರ, ದುರ್ಗಾ ದೊಡಮನಿ, ಆಶಾ ಕಾರ್ಯಕರ್ತೆ ಗುಂಡಮ್ಮ ಮಡಿವಾಳರ ಇದ್ದರು.