ಕೊರೊನಾ ಸಂಕಷ್ಟ-ಪರಿಹಾರ ಧನಕ್ಕೆ ಅಡುಗೆ ಕಾರ್ಮಿಕರ ಒತ್ತಾಯ

ಕೋಲಾರ.ಏ.೨೪:ಕರೋನಾದಿಂದ ಅಡುಗೆ ಕಾರ್ಮಿಕರಿಗೆ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವುದರಿಂದ ಮುಖ್ಯಮಂತ್ರಿಗಳ ಪರಿಹಾರ ಧನ ೧೦.೦೦೦ ರೂ ತಕ್ಷಣವೇ ಬಿಡುಗಡೆಗೊಳಿಸಬೇಕು. ಸರ್ಕಾರದಿಂದ ಅಡುಗೆ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ಅಡುಗೆ ಕೆಲಸಗಾರರ ಹಾಗೂ ಸಹಾಯಕ ಕಾರ್ಮಿಕರ ಕ್ಷೇಮಾಭಿವೃದ್ಧಿ ಯೂನಿಯನ್ ವತಿಯಿಂದ ಅಪರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
೨ನೇ ಬಾರಿ ಕೊರೋನಾ ಸುನಾಮಿಯಿಂದಾಗಿ ಸರ್ಕಾರದ ಕಠಿಣ ನಿಲುವಿನಿಂದಾಗಿ ಮದುವೆ ಮುಂಜಿ ಮತ್ತಿತರ ಶುಭ ಕಾರ್ಯಗಳಿಗೆ ತಡೆ ನೀಡಿರುವುದರಿಂದ ಕಳೆದ ಬಾರಿಯ ಹೊಡೆತದಿಂದಾಗಿ ಹೊಟ್ಟೆಯ ಮೇಲೆ ತಣ್ಣೀರ ಬಟ್ಟೆ ಇನ್ನೂ ಚೇತರಿಕೆ ಕಂಡಿಲ್ಲದೆ ಅಡುಗೆ ಕಾರ್ಮಿಕರ ಜೀವನ ಮೂರಾ ಬಟ್ಟೆಯಾಗಿದೆ. ಕರೋನಾದಿಂದ ಅಡುಗೆ ಕಾರ್ಮಿಕರಿಗೆ ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವುದರಿಂದ ಮುಖ್ಯಮಂತ್ರಿಗಳ ಪರಿಹಾರ ಧನ ೧೦.೦೦೦ ರೂ ತಕ್ಷಣವೇ ಬಿಡುಗಡೆಗೊಳಿಸಬೇಕು. ಸರ್ಕಾರದಿಂದ ಅಡುಗೆ ಕಾರ್ಮಿಕರಿಗೆ ಗುರುತಿನ ಚೀಟಿಯನ್ನು ನೀಡುವಂತೆ ಒತ್ತಾಯಿಸಿದರು.
ನಿಯೋಗದಲ್ಲಿ ಅಸಂಘಟಿತ ಕಾರ್ಮಿಕ ಪರಿಷ್ ಅಧ್ಯಕ್ಷ ಹಾಗೂ ಯೂನಿಯನ್ ಗೌರವಾಧ್ಯಕ್ಷ ಕೆ.ವಿ ಸುರೇಶ್‌ಕುಮಾರ್, ಯೂನಿಯನ್ ಸಂಸ್ಥಾಪಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಎಸ್ ರಮೇಶ್‌ಬಾಬು, ಕೋಲಾರ ಜಿಲ್ಲಾಧ್ಯಕ್ಷ ಡಿ.ಎಂ ಚನ್ನಯ್ಯ, ಕೋಲಾರ ತಾಲೂಕು ಅಧ್ಯಕ್ಷ ಶ್ಯಾಮ್‌ಕುಮಾರ್, ಬಂಗಾರಪೇಟೆ ತಾಲೂಕು ಅಧ್ಯಕ್ಷ ಬಾಲಾಜಿಸಿಂಗ್, ಶ್ರೀನಿವಾಸಪುರ ತಾಲೂಕು ಅಧ್ಯಕ್ಷ ಮಂಜುನಾಥ್‌ಸಿಂಗ್, ಕೆ.ಜಿ.ಎಫ್ ತಾಲೂಕು ಅಧ್ಯಕ್ಷ ವಿಕ್ಟರ್ ಟಾಮೂ, ಕೋಲಾರ ತಾಲೂಕು ಉಪಾಧ್ಯಕ್ಷ ಸಂಪತ್ ಕುಮಾರ್, ಬಂಗಾರಪೇಟೆ ತಾಲೂಕು ಉಪಾಧ್ಯಕ್ಷ ವೆಂಕಟೇಶ್ ಉಪಸ್ಥಿತರಿದ್ದರು.