ಕೊರೊನಾ ಸಂಕಷ್ಟದಿಂದ ನೊಂದ ಕುಟುಂಬದ ಮಕ್ಕಳಿಗೆ ಉಚಿತ ಶಿಕ್ಷಣ

ಮುದ್ದೇಬಿಹಾಳ:ಮೇ.29: ಕಳೇದ ಎರಡು ವರ್ಷದಿಂದ ಕೋರೊನಾ ಎನ್ನುವ ಮಹಾ ರೋಗ ಬಂದು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದಲ್ಲದೇ ಬಡವರು ಕೂಲಿ ಕಾರ್ಮಿಕರು, ಮದ್ಯಮವರ್ಗದ ಜನರು ತೀವೃ ಸಂಕಷ್ಟವನ್ನು ಅನುಭವಿಸುವಂತಾಗಿದೆ ಈ ನಿಟ್ಟಿನಲ್ಲಿ ಕೊರೊನಾ ಸಂಕಷ್ಟದಿಂದ ತೊಂದರೆಗೀಡಾಗಿರುವ ಯಾವೂದೇ ಜಾತಿ ಮತ ಪಂಥ ಎನ್ನದೇ ಎಲ್ಲರೂ ಒಂದೇ ಎನ್ನುವ ಭಾವನೆಯೊಂದಿಗೆ ಎಲ್ಲ ವರ್ಗದವರ ಕುಟುಂಬಗಳ ಮಕ್ಕಳಿಗೆ ಎಲ್ ಕೆ ಜಿ ಯಿಂದ ಹತ್ತನೇ ತರಗತಿವರೆಗೆ ಸಂಪೂರ್ಣ ಉಚಿತ ಶಿಕ್ಷಣ ನೀಡಲು ಅಹಿಲ್ಯಾದೇವಿ ಹೋಳ್ಕರ್ ಶೈಕ್ಷಣಿಕ ಸಂಸ್ಥೆ ತಿರ್ಮಾನಿಸಿದೇ ಎಂದು ಅಹಿಲ್ಯಾದೇವಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಮಲ್ಲಿಕಾರ್ಜುನ ಮದರಿ ಹೇಳಿದರು.

ಶುಕ್ರವಾರ ಇಲ್ಲಿನ ಅಭ್ಯೂದಯ ಸೈನ್ಸ್ ಪಿಯು ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಧ್ಯ ವಿವಿಧ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಕೊರೊನಾ ಸಂಕಷ್ಟದಲ್ಲಿ ಊಟ, ಆಹಾರ ಕಿಟ್ ಕೊಟ್ಟು ನೆರವಿಗೆ ನಿಂತು ಮಾನವಿಯತೆ ಮರೆಯುತ್ತಿದ್ದಾರೆ. ಈ ವೇಳೆ ನಾವೂ ಕೂಡ ನಮ್ಮ ಸಂಸ್ಥೆ ವತಿಯಿಂದ ಕೈಲಾದಷ್ಟು ಸಹಾಯ ಮಾಡಬೇಕು ಎಂದು ಉದ್ದೇಶಿಸಿ ಯೋಚಿಸಿದಾಗಿ ಕೊನೆಗೆ ನಮ್ಮ ಸಂಸ್ಥೆಯ ಈ ಯೋಜನೆಯಡಿ ಮುದ್ದೇಬಿಹಾಳ, ಅಡವಿ ಸೋಮನಾಳ, ಕೋಳೂರ ಭಾಗದಲ್ಲಿ ಸ್ವಂತ ಕಟ್ಟಡ ಹೊಂದಿರುವ ಅತ್ಯಾಧುನಿಕ ಸೌಲಭ್ಯಗಳ ಶಾಲೆಗಳಲ್ಲಿ ಆಯಾ ಭಾಗದ ಮಕ್ಕಳನ್ನು 2021-22ನೇ ಸಾಲಿಗೆ ಉಚಿತ ಪ್ರವೇಶ ನೀಡಲು ನಿರ್ಧರಿಸಲಾಗಿದೆ.

ಪ್ರಸಕ್ತ ಶೈಕ್ಷಣಿಕ ವರ್ಷದ ಅಂತ್ಯದವರೆಗೂ ಶುಲ್ಕ ಪಡೆಯುವುದಿಲ್ಲ. ಯಾರು ಬೇಕಾದರೂ ಈ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬಹುದು ಎಂದು ಘೋಷಿಸಿದರು. ಸಂಸ್ತೆಯಡಿ ಈಗಾಗಲೇ ಪಿಯು ಸೈನ್ಸ್ ಕಾಲೇಜು ನಡೆಯುತ್ತಿದೆ. 2019-20 ರಲ್ಲೆ ಪೂರ್ವ ಪ್ರಾಥಮಿಕ, ಪ್ರಾಥಮಿಕ, ಪ್ರೌಢಶಾಲೆ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ. ಆದರೆ ಕೋವಿಡ್ ಮಹಾಮಾರಿ ಕಾರಣಕ್ಕೆ ಪ್ರವೇಶ ಪ್ರಾರಂಭಿಸಿರಲಿಲ್ಲ. ಕೋವಿಡ್ ನಿವಾರಣೆಯಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಉಚಿತ ಶಿಕ್ಷಣದ ಮೂಲಕ ಶಾಲೆ ಪ್ರಾರಂಭಿಸಲು ಮುಂದಾಗಬೇಕಾಯಿತು ಎಂದರು.

ಕನ್ನಡ ಮತ್ತು ಇಂಗ್ಲೀಷ ಮಾಧ್ಯಮದಲ್ಲಿ ಶಿಕ್ಷಣ ಪಡೆಯುವ ಸೌಲಭ್ಯ ಇದೆ. ಕಾರವಾರ, ಮಂಗಳೂರು, ಕೇರಳ ಭಾಗದ ನುರಿತ ಶಿಕ್ಷಕರಿದ್ದಾರೆ. ಪ್ರತಿ ಶಾಲೆಯಲ್ಲಿ 2000 ಮಕ್ಕಳವರೆಗೂ ದಾಖಲಾತಿ ಸೌಲಭ್ಯ ಇದೆ.. ನಾವು ಉಚಿತ ಶಿಕ್ಷಣದ ಮೂಲಕ ನೆರವಿಗೆ ಮುಂದಾಗಿದ್ದೇವೆ. ಈ ಬಗ್ಗೆ ಈಗಾಗಲೇ ಎಲ್ಲಾ ಕಡೆ ಪ್ರಚಾರ ಪ್ರಾರಂಭಿಸಲಾಗಿದೆ. ಮುದ್ದೇಬಿಹಾಳ ತಾಲೂಕಿನವರಿಗೆ ಉಚಿತ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಲಾಗುತ್ತದೆ. ಅಗತ್ಯ ಬಿದ್ದರೆ ಈ ತಾಲುಕಿಗೆ ಹೊಂದಿಕೊಂಡಿರುವ ಅಕ್ಕಪಕ್ಕದ ತಾಲೂಕಿನ ಬಡವರಿಗೂ ಸೌಲಭ್ಯ ವಿಸ್ತರಿಸಲಾಗುತ್ತದೆ ಎಂದರು. ಸಂಸ್ಥೆಯ ರವಿ ಜಗಲಿ, ವೈ.ಕೆ.ಹೊಸಮನಿ, ವಿ.ಸಿ.ನಾಯ್ಕೋಡಿ ಸೇರಿದಂತೆ ಮತ್ತಿತರರು ಇದ್ದರು.