ಕೊರೊನಾ: ಸಂಕಷ್ಟದಲ್ಲಿ ರೈತ

ಲಕ್ಷ್ಮೇಶ್ವರ, ಮೇ 31: ಸತತ ಎರಡನೇ ಬಾರಿ ಕೊರೋನಾದ ಅಲೆ ಅಪ್ಪಳಿಸಿದ್ದು ಮಾರ್ಚ್ ಮತ್ತು ಏಪ್ರಿಲ್ ತಿಂಗಳು ರೈತರ ಪಾಲಿಗೆ ಉರುಳಾಗಿ ಪರಿಣಮಿಸುತ್ತಿದೆ. ಹೋದೆಯಾ ಪಿಶಾಚಿ ಎಂದರೆ ಬಂದೆ ಗವಾಕ್ಷಿ ಅನ್ನುವಂತೆ ರೈತರನ್ನು ಕೊರೋನಾ ಸೋಂಕು ಹಿಗ್ಗಾಮುಗ್ಗಾ ಮಾಡಿದೆ.
ಕಳೆದ ವರ್ಷ ಲಾಕ್ ಡೌನ್ ಘೋಷಿಸಿದ್ದ ಸಂದರ್ಭದಲ್ಲಿ ಮಾರುಕಟ್ಟೆಯಲ್ಲಿ ರೈತರು ತಂದ ಮಾಲುಗಳನ್ನು ವ್ಯಾಪಾರಸ್ಥರು ಖರೀದಿ ಮಾಡಿದ್ದರು. ಆದರೆ ಈ ಬಾರಿ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಭೀತಿಗೊಳಗಾಗಿ ಖರೀದಿ ಪ್ರಕ್ರಿಯೆಯಲ್ಲಿ ನಿಲ್ಲಿಸಿದ್ದರಿಂದ ಬೇಸಿಗೆಯ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರು ಅಸಹಾಯಕರಾಗಿ ಕುಳಿತಿದ್ದಾರೆ.
ಕೃಷಿ ಇಲಾಖೆಯ ಮೂಲಗಳಿಂದ ಲಭ್ಯವಾಗಿರುವ ಮಾಹಿತಿಯ ಪ್ರಕಾರ ತಾಲೂಕಿನಲ್ಲಿ 14 75 ಬೇಸಿಗೆ ಶೇಂಗಾ ಮತ್ತು 4.50 ಅಲಸಂದಿ ಬೆಳೆ ಬೆಳೆದಿದ್ದು ಈಗ ಉತ್ಪನ್ನ ಕೈಸೇರಿದ್ದು ಆದರೆ ಮಾರುಕಟ್ಟೆ ಬಂದ್ ಇರುವುದರಿಂದ ಮುಂದೇನು ಎಂದು ಚಿಂತೆಗೊಳಗಾಗಿದ್ದಾರೆ.
ಇದೀಗ ಮುಂಗಾರು ಆರಂಭವಾಗಿದ್ದು ಬಿತ್ತನೆಗಾಗಿ ಬೀಜ ಗೊಬ್ಬರ ಖರೀದಿಸಬೇಕಾಗಿದ್ದು ರೈತರು ಬೇಸಿಗೆಯ ಶೇಂಗಾ ಮತ್ತು ಅಲಸಂದೆಯನ್ನು ಮಾರಾಟ ಮಾಡಿ ಮುಂಗಾರನ್ನು ಸಾಗಿಸಬೇಕಾಗಿದೆ. ಒಂದು ಕಡೆ ರೈತರು ಸಂಕಷ್ಟಕ್ಕೊಳ ಗಾಗಿದ್ದಾರೆ ವ್ಯಾಪಾರಸ್ಥರು ಉಭಯ ಸಂಕಟದಲ್ಲಿ ಸಿಲುಕಿದ್ದಾರೆ ರೈತರ ಉತ್ಪನ್ನಗಳನ್ನು ಖರೀದಿಸಬೇಕೆಂಬ ಇರಾದೆ ಇದ್ದರೂ ಮಾರುಕಟ್ಟೆಯಲ್ಲಿ ಗ್ರಾಮೀಣ ಪ್ರದೇಶದಿಂದ ರೈತರು ಬರುವುದರಿಂದ ಎಲ್ಲಿ ಸೋಂಕು ಮನೆ ಮಾಡುತ್ತದೆ ಎಂಬ ಭೀತಿಯಲ್ಲಿ ಇರುವುದರಿಂದ ಆತ್ತ ದರಿ ಇತ್ತ ಪುಲಿ ಎನ್ನುವಂತಾಗಿದೆ.
ಲಾಕ್ ಡೌನ್ ದ ವೇಳೆ ವಿಭಿನ್ನ ಆಗುತ್ತಿರುವುದರಿಂದ ರೈತರು ಸಹ ಗೊಂದಲದಲ್ಲಿ ಸಿಲುಕಿದ್ದು ಎಲ್ಲಿ ಪೆÇಲೀಸರು ತಮ್ಮನ್ನು ತಡೆಗಟ್ಟುತ್ತಾರೆ ಎಂಬ ಭೀತಿಯೂ ಮನೆ ಮಾಡಿದ್ದ ಬೆಳೆದ ಫಸಲು ಮಾರಾಟ ಆಗದೆ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ.
ಈ ಕುರಿತು ಸಮೃದ್ಧಿ ರೈತ ಹೋರಾಟ ಸಂಘದ ಅಧ್ಯಕ್ಷರಾದ ಚಂಬಣ್ಣ ಬಾಳಿಕಾಯಿ ಮತ್ತು ಸೋಮಣ್ಣ ಮುಳುಗುಂದ ಅವರು ಪ್ರತಿಕ್ರಿಯೆ ನೀಡಿ ಇಂತಹ ಸಂಕಷ್ಟದ ಸಮಯದಲ್ಲಿ ಸರ್ಕಾರವೇ ಬೆಂಬಲ ಬೆಲೆಯಲ್ಲಿ ಶೇಂಗಾ ಮತ್ತು ಅಲಸಂದೆಯನ್ನು ಖರೀದಿ ಮಾಡಬೇಕು ಎಂದೂ ಒತ್ತಾಯಿಸಿದರು. ಸೂರಣಗಿ ಗ್ರಾಮದ ಯುವ ಮುಖಂಡ ಶರಣಪ್ಪ ಇಚ್ಚಂಗಿ ಅವರು ಮಾತನಾಡಿ ಲಾಕ್ ಡೌನ್ ನಿನ ಕ್ಲಿಷ್ಟಕ ಸನ್ನಿವೇಶದಲ್ಲಿ ಸರ್ಕಾರವೇ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.