ಕೊರೊನಾ ಸಂಕಷ್ಟದಲ್ಲಿ ಅನ್ನದಾನಕ್ಕೆ ನಿಂತಿದೆ ಲೋಕಿಕೆರೆ ನಾಗರಾಜ್ ಅಭಿಮಾನಿ ಬಳಗ

ದಾವಣಗೆರೆ,ಜೂ.2: ಕೊರೊನಾ ಮಹಾಮಾರಿ ನಿಯಂತ್ರಣ ಕ್ರಮವಾಗಿ ಘೋಷಣೆಯಾಗಿರುವ ಲಾಕ್‌ಡೌನ್ ಪರಿಣಾಮ ಹೋಟೆಲ್‌ಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ಕೋವಿಡ್ ವಾರಿಯರ್ಸ್ ಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಹಾಗೂ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಮತ್ತವರ ಕಡೆಯವರಿಗೆ ಲೋಕಿಕೆರೆ ನಾಗರಾಜ್ ಅಭಿಮಾನಿ ಬಳಗದಿಂದ ಊಚಿತ ಉಪಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗುತ್ತಿದೆ.ಲಾಕ್‌ಡೌನ್ ಹಿನ್ನೆಲೆಯಲ್ಲಿ ಹೋಟೆಲ್‌ಗಳು ಬಂದ್ ಆಗಿರುವುದರಿಂದ ಕೊರೊನಾ ವಾರಿಯ್ಸ್ಗಳಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಪೊಲೀಸರು, ಔಷಧ ವಿತರಕರು ಮತ್ತು ಆಸ್ಪತ್ರೆಗೆ ಬರುವ ರೋಗಿಗಳು ಮತ್ತವರ ಕಡೆಯವರು ಹಾಗೂ ಎಪಿಎಂಸಿ ಮಾರುಕಟ್ಟೆಗೆ ಬರುವ ಅನ್ನದಾತರಿಗೆ ಊಟದ ಸಮಸ್ಯೆ ಆಗಬಾರದೆಂಬ ಕಾರಣಕ್ಕೆ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಅವರ ಹೆಸರಿನಲ್ಲಿ ಅಭಿಮಾನಿ ಬಳಗ ಕಟ್ಟಿಕೊಂಡು ನಿತ್ಯವೂ 200ರಿಂದ 250 ಜನರಿಗೆ ಉಪಹಾರ, ಊಟ ವಿತರಿಸುವ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿದ್ದಾರೆ.

ಉಚಿತ ಆಟೋ ಸೇವೆ:
ಇನ್ನೂ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಟೋ, ಬಸ್ ಸಂಚಾರ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ಬರು ರೋಗಿಗಳಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಹತ್ತು ಆಟೋಗಳನ್ನು ಇಟ್ಟು ಉಚಿತ ಆಟೋ ಸೇವೆಯನ್ನು ಸಹ ಅಭಿಮಾನಿ ಬಳಗ ನೀಡುತ್ತಿದ್ದು, ಆಟೋ ಅವಶ್ಯಕತೆ ಬಗ್ಗೆ ಲೋಕಿಕೆರೆ ನಾಗರಾಜ್ ಗಮನಕ್ಕೆ ಬರುತ್ತಿದ್ದಂತೆ ಕೆಲವೇ ನಿಮಿಷಗಳಲ್ಲಿ ಆಟೋ ಕಳುಹಿಸಿ, ಆಸ್ಪತ್ರೆಗೆ ರೋಗಿಗಳು ಬರಲು ಅನುವು ಮಾಡಿಕೊಡುತ್ತಿದ್ದಾರೆ.
ರಕ್ತದಾನ ಶಿಬಿರ:
ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ಸ್ವಯಂ ಪ್ರೇರಿತವಾಗಿ ರಕ್ತ ದಾನ ಮಾಡುವವರ ಸಂಖ್ಯೆಯು ವಿರಳವಾಗಿದೆ. ಹೀಗಾಗಿ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ರಕ್ತದ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಯಾವುದೇ ರೀತಿಯ ತೊಂದರೆ ಆಗಬಾರದು ಎಂಬ ಕಾರಣಕ್ಕೆ ಲೈಫ್‌ಲೈನ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರ ಸಹ ನಡೆಸಿ, ಅವಶ್ಯಕತೆ ಇರುವವರಿಗೆ ಅಮೂಲ್ಯ ರಕ್ತದ ವ್ಯವಸ್ಥೆ ಮಾಡುವ ಮೂಲಕ ಜೀವ ಉಳಿಸಲು ಅಭಿಮಾನಿ ಬಳಗ ಮುಂದಾಗಿರುವುದರ ಬಗ್ಗೆ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇನ್ನೂ ರೈತರಿಗೆ ಪಿಎಂಜಿಜಿವೈಯಡಿ ಆರೋಗ್ಯ ವಿಮೆ ಸಹ ಮಾಡಿಸಲು ಮುಂದಾಗಿದ್ದು, ಕೋವಿಡ್ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ನೆರವು ನೀಡಲು ಲೋಕಿಕೆರೆ ನಾಗರಾಜ್ ಅಭಿಮಾನಿಗಳ ಬಳಗ ಹಗಲು-ರಾತ್ರಿ ಎನ್ನದೆ ಶ್ರಮಿಸುತ್ತಿರುವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.