ಕೊರೊನಾ ವೈರಸ್ ಬಗ್ಗೆ ಭಯ ಬೇಡಾ ಎಚ್ಚರಿಕೆ ಇರಲಿ: ಸುರೇಶ

ಸೈದಾಪುರ:ಜೂ.9: ಕೊರೊನಾ ವೈರಸ್‍ದಿಂದ ಎಲ್ಲರೂ ತೊಂದರೆ ಅನುಭವಿಸುವಂತಾಗಿದೆ. ಅದರಲ್ಲಿ ನಿತ್ಯಾ ಕೂಲಿ ಮಾಡಿ ಬದುಕುವವರಿಗೆ ಆದಾಯ ಇಲ್ಲದೆ ಜೀವನಕ್ಕೆ ಸಮಸ್ಯೆಯಾಗಿದೆ. ಆದರೆ ಕೊರೊನಾ ವೈರಸ್ ಬಗ್ಗೆ ಭಯ ಬೇಡಾ ಎಚ್ಚರ ಇರಲ್ಲಿ ಎಂದು ಸಂಘದ ಪ್ರಮುಖ ಸುರೇಶ ಮಾಗನೂರು ಹೇಳಿದರು.

ಇಲ್ಲಿಗೆ ಸಮೀಪದ ಮಾಧ್ವರ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ಸಂಕಷ್ಟದಲ್ಲಿರುವ ಕೊಲಿ ಕಾರ್ಮಿಕರು ಸೇರಿದಂತೆ ನಿರ್ಗತಿಕರಿಗೆ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಿ ಮಾತನಾಡಿದರು. ಕೊರೊನಾ ವೈರಸ ಬಗಗೆ ಭಯ ಪಡದೆ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಸಾಮಾಜಿಕ ಅಂತರ ಸೇರಿದಂತೆ ಸ್ವಚ್ಛತೆಗೆ ಹೆಚ್ಚಿನ ಮಹತ್ವ ನೀಡಬೇಕು. ಆರೋಗ್ಯ ಇಲಾಖೆ ಹಾಗೂ ಸರಕಾರ ಸೂಚಿಸಿದ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕು ಎಂದು ಹೇಳಿದರು. ನಮ್ಮ ಗ್ರಾಮೀಣ ಭಾಗದ ಯುವಕರು ವೈರಸ್‍ನ ಮುಂಜಾಗೃತೆ ನಿಯಮಗಳನ್ನು ಪಾಲಿಸುವದರ ಜತೆ ಇತರರಿಗೆ ತಿಳಿಸಬೇಕಾದ ಅನಿವಾರ್ಯವಿದೆ. ಅದನ್ನು ಪ್ರತಿಯೊಬ್ಬರು ಮಾಡಿದಾಗ ಮಾತ್ರ ನಮ್ಮ ದೇಶದಿಂದ ಕೊರೊನಾ ತೊಲಗಿಸಲು ಸಾಧ್ಯ ಎಂದು ತಿಳಿಸಿದರು. ಈ ವೇಳೆ ರಾಜು ಬಾಗ್ಲಿ, ಅನಂತರಡ್ಡಿ ಸೇರಿದಂತೆ ಇತರರಿದ್ದರು.