ಕೊರೊನಾ ವೈರಸ್ ಪ್ರತ್ಯಕ್ಷ…..

ದಾವಣಗೆರೆ.ಜೂ.೯; ದಾವಣಗೆರೆಯ ಕೆ.ಆರ್. ಮಾರ್ಕೆಟ್‌ನಲ್ಲಿ ಇಂದು ಬೆಳಗ್ಗೆ ಕೊರೊನಾ ವೈರಸ್ ಪ್ರತ್ಯಕ್ಷವಾಗಿತ್ತು…ಜೊತೆಗೆ ಮಾಸ್ಕ್ ಬಗ್ಗೆ ಸಾಮಾಜಿ ಅಂತರದ ಬಗ್ಗೆಯೂ ಜಾಗೃತಿ ಮೂಡಿಸಿತ್ತು..ಈ ವಿಶೇಷತೆಯನ್ನು ಸಾರ್ವಜನಿಕರು ಕೂತೂಹಲದಿಂದ ವೀಕ್ಷಿಸಿದರು.ಹೌದು ದಾವಣಗೆರೆ ಭಾರತ್ ಕಾಲೊನಿಯ ಯುವಕ ರಾಕೇಶ್ ಸೊಮ್ಲಿ ಅವರು ಕೊರೊನ ಜಾಗ್ರತಿ ಅಭಿಯಾನ ಕೈಗೊಂಡಿದ್ದಾರೆ. ಅದಕ್ಕಾಗಿಯೇ ಕೊರೊನಾ ವೈರಸ್ ನ ವೇಷಧರಿಸಿ ಸಾರ್ವಜನಿಕರಲ್ಲಿಮಾಸ್ಕ್ ಧಾರಣೆ, ಸಾಮಾಜಿಕ ಅಂತರದ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.ಅವರ ಈ ವಿನೂತನ ಪ್ರಯತ್ನಕ್ಕೆ ಸ್ಥಳದಲ್ಲಿದ್ದವರು ಮೆಚ್ಚುಗೆ ವ್ಯಕ್ತಡಿಸಿದ್ದಾರೆ.