ಕೊರೊನಾ ವೈರಸ್ ತಡೆಗಟ್ಟಲು ಲಸಿಕೆ ಪಡೆದುಕೊಳ್ಳಿ : ಹೊಸಮನಿ

ಕೆಂಭಾವಿ:ಎ.28:ಕೊರೊನಾ ವೈರಸ್ ತಡೆಗಟ್ಟಲು ಪ್ರತಿಯೊಬ್ಬರೂ ಆರೋಗ್ಯದ ದೃಷ್ಟಿಯಿಂದ ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಬಸನಗೌಡ ಹೊಸಮನಿ ಹೇಳಿದರು.

ಪಟ್ಟಣ ಸಮೀಪದ ಯಾಳಗಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ಕೋವಿಡ್ ಲಸಿಕೆ ಪಡೆದು ಮಾತನಾಡಿದ ಅವರು ರಾಜ್ಯದಲ್ಲಿ ಕೊರೊನಾ ಸೊಂಕು ವ್ಯಾಪಕವಾಗಿ ಹರಡುತ್ತಿದೆ. ಎಲ್ಲರೂ ಮಾಸ್ಕ್ ಸ್ಯಾನಿಟೈಸರ್ ಬಳಸಿ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ನಾಗರಿಕರೆಲ್ಲರೂ ಲಸಿಕೆಯನ್ನು ಪಡೆದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಂಗನಗೌಡ ಹೊಸಮನಿ, ಮಲ್ಕಣ್ಣ ಮಾಣಸುಣಗಿ, ಶಿವನಗೌಡ ದೇವರಡ್ಡಿ, ವೈದ್ಯಾಧಿಕಾರಿ ಸಂಗಮೇಶ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗುರಬಸಯ್ಯ ಸ್ವಾಮಿ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಇದ್ದರು.