ಕೊರೊನಾ ವಿರುದ್ಧ ಹೋರಾಟಕ್ಕೆ ಆಂದೋಲನ

ಬೆಂಗಳೂರು,ಜ೫-ಕೋವಿಡ್ ೧೯ ಪಿಡುಗಿನ ಮಧ್ಯೆ ಆರೋಗ್ಯ ಮತ್ತು ಸುರಕ್ಷತೆಯನ್ನು ಪ್ರೋತ್ಸಾಹಿಸಲು , ಬಜಾವ್ ಮೇನೈ ಸಮಾಜಧಾರಿ ಹೈ ಎಂಬ ಆಂದೋಲನವನ್ನು ಆರಂಭಿಸಿದೆ. ಆರ್ ಎಸ್ ಪಿಎಲ್ ಗ್ರೂಪ್ ದೇಶದ ಅಗ್ರ ಡಿಟರ್ಜೆಂಟ್ ಪುಡಿಘಡಿಯ ಉತ್ಪಾದಕರು ಮತ್ತು ಮಾರಾಟಗಾರರು. ತನ್ನ ಪ್ಯಾಕೇಜಿಂಗ್ ಮೂಲಕ ಜಾಗೃತಿ ಮೂಡಿಸಲು ಯತ್ನಿಸಿದ ಮೊದಲ ಭಾರತದ ಸಂಸ್ಥೆಯಾಗಿದೆ. ದೇಶದ ೧೦ ಕೋಟಿ ಜನರು ತಲುಪಿ ಅವರು ಮುಖದ ಮಾಸ್ಕ್ ದಿನವೂ ಧರಿಸಲು ಮತ್ತು ಸಾರ್ವಜನಿಕ ಸುರಕ್ಷತೆಯ ಬಗ್ಗೆ ಹೆಚ್ಚು ಜವಾಬ್ದಾರರಾಗಿರಲು ಪ್ರಚೋದಿಸಲಾಗುತ್ತದೆ. ಈ ಉಪಕ್ರಮವನ್ನುಘಡಿಡಿಟರ್ಜೆಂಟ್ ಪ್ಯಾಕೆಟ್‌ನ ಮೇಲೆ ಪ್ರದರ್ಶಿಸಲಾಗುತ್ತದೆ, ಮತ್ತುಅದರ ವಾಸ್ತವಿಕ ಲೋಗೊವನ್ನು ಮುದ್ರಿತ ಮಾಸ್ಕ್ ನಲ್ಲಿ ಮುಚ್ಚಲಾಗುತ್ತದೆ. ಪ್ಯಾಕ್ ಮೇಲೆ ಸಂದೇಶದಜೊತೆಗೆ, ಘಡಿಡಿಟರ್ಜೆಂಟ್‌ತನ್ನ ವಿತರಕರಅಗಾಧಜಾಲವನ್ನೂ ಸಕ್ರಿಯಗೊಳಿಸಿದ್ದು, ಈ ಸಂದೇಶವನ್ನು ಸಾರಲು ತಮ್ಮ ರಿಟೇಲ್ ಪಾಲುದಾರರನ್ನೂಕೋರಿದೆ ಎಂದು ಜಂಟಿ ನಿರ್ವಾಹಕ ನಿರ್ದೇಶಕ ರಾಹುಲ್‌ಗ್ಯಾಂಚಂದಾನಿ ತಿಳಿಸಿದ್ದಾರೆ.