ಕೊರೊನಾ ವಿರುದ್ಧದ ಹೋರಾಟದಲ್ಲಿ ನೆರವಿನ ಹಸ್ತ ಚಾಚಿದ ಫರಹಾನ್ ಅಖ್ತರ್

ದೇಶದಲ್ಲಿ ಕೋವಿಡ್ ೧೯ ರ ೨ನೇ ಅಲೆಯಲ್ಲಿ ಸೋಂಕಿತರಿಗೆ ಆಕ್ಸಿಜನ್, ಔಷಧಿಗಳು ಮತ್ತು ಅಗತ್ಯವಿರುವ ವಸ್ತುಗಳ ಕೊರತೆಯನ್ನು ಎದುರಿಸುವಂತಾಗಿದೆ. ಈ ಕಷ್ಟದ ಸಮಯದಲ್ಲಿ ಬಾಲಿವುಡ್ ನಟ ನಟಿಯರಾದ ಅಕ್ಷಯ್ ಕುಮಾರ್, ಟ್ವಿಂಕಲ್ ಖನ್ನಾ, ಸುಶ್ಮಿತಾ ಸೇನ್, ಪ್ರಿಯಾಂಕಾ ಚೋಪ್ರಾ… ಸಹಿತ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ತಮ್ಮ ಕೊಡುಗೆಗಳನ್ನು ನೀಡುತ್ತಿದ್ದಾರೆ . ಈ ಸೂಚಿಗೆ
ಇದೀಗ ಫರ?ಹಾನ್ ಅಖ್ತರ್ ಹೆಸರೂ ಸೇರಿಸಲ್ಪಟ್ಟಿದೆ.


ಫರ?ಹಾನ್ ಅವರು ಇತ್ತೀಚೆಗೆ ತನ್ನ ಪ್ರೊಡಕ್ಷನ್ ಎಕ್ಸಲ್ ಮೂವೀಸ್ ಮೂಲಕ ಅನೇಕ ಎನ್ ಜಿ ಓ ಗಳಿಗೆ ಡೊನೇಷನ್ ನೀಡಿದ್ದಾರೆ. ಗ್ರೌಂಡ್ ಲೆವೆಲ್ ನಲ್ಲಿಯೂ ಅಗತ್ಯ ಜನರಿಗೆ ಆಕ್ಸಿಜನ್ ಮತ್ತು ಭೋಜನವನ್ನು ಉಪಲಬ್ಧ ಗೊಳಿಸುತ್ತಿದ್ದಾರೆ.
ಈ ಎನ್ ಜಿ ಓಗಳ ಮಾಹಿತಿ ಕೂಡ ಅವರು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
“ಎಕ್ಸಲ್ ಮೂವೀಸ್ ಕೊರೊನಾ ವಿರುದ್ಧದ ಹೋರಾಟದಲ್ಲಿ ಯಾವ ಎನ್ ಜಿ ಓಗಳಿಗೆ ಸಹಾಯ ಮಾಡಿದೆಯೋ ಅವುಗಳ ಸೂಚಿಯನ್ನು ಇಲ್ಲಿ ಶೇರ್ ಮಾಡಿದ್ದೇನೆ. ಆಕ್ಸಿಜನ್ ನಿಂದ ಹಿಡಿದು ಅಂಬುಲೆನ್ಸ್ ತನಕ ಮತ್ತು ಭೋಜನದ ತನಕ ಅಗತ್ಯ ಇರುವ ಜನಗಳಿಗೆ ನೆರವು ನೀಡಲಾಗುತ್ತಿದೆ. ನಾನು ನಿಮಗೂ ಇಂಥ ಕೊಡುಗೆಗಳನ್ನು ಅಗತ್ಯವಿದ್ದವರಿಗೆ ನೀಡುವಂತೆ ಪ್ರೋತ್ಸಾಹಿತಗೊಳಿಸುತ್ತಿದ್ದೇನೆ. ಪ್ರತೀ ರೂಪಾಯಿಗೂ ಮಹತ್ವವನ್ನು ಇರಿಸಿದ್ದೇನೆ.” ಎಂದಿದ್ದಾರೆ. ಫರ?ಹಾನ್ ಅಖ್ತರ್ ರಾಕೇಶ್ ಓಂಪ್ರಕಾಶರ ನಿರ್ದೇಶನದಲ್ಲಿ ತಯಾರಾಗಿರುವ ಫಿಲ್ಮ್ ’ತೂಫಾನ್’ ನಲ್ಲಿ ಕಂಡು ಬರಲಿದ್ದಾರೆ.

ಲಡ್ಡಾಖ್ ನಲ್ಲಿ ಲಾಲ್ ಸಿಂಗ್ ಚಡ್ಡಾ ಫಿಲ್ಮ್ ನ ಫೈನಲ್ ಶೆಡ್ಯೂಲ್: ಕೊರೊನಾದಿಂದ ರಿಕವರಿ ಆಗುತ್ತಲೇ ಅಮೀರ್ ಖಾನ್ ಶೂಟಿಂಗ್ ಗೆ ಹಾಜರ್

ಬಾಲಿವುಡ್ ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದು ಕರೆಸಿಕೊಂಡಿರುವ ಅಮೀರ್ ಖಾನ್ ಕೆಲವು ದಿನಗಳ ಮೊದಲು ಕೊರೊನಾ ಸೋಂಕು ರೋಗಕ್ಕೆ ಒಳಗಾಗಿದ್ದರು .ಇದೀಗ ಕೊರೊನಾದಿಂದ ರಿಕವರಿ ಆಗುತ್ತಲೇ ತಕ್ಷಣ ಅವರು ಯಾವುದೇ ಬ್ರೇಕ್ ಪಡೆಯದೆ ಶೂಟಿಂಗ್ ಗೆ ಹಾಜರಾಗಿದ್ದಾರೆ.


ಅಮೀರ್ ಖಾನ್ ರ ಫಿಲ್ಮ್ ’ಲಾಲ್ ಸಿಂಗ್ ಚಡ್ಡಾ’ ಇದರ ಉಳಿದಿರುವ ಶೂಟಿಂಗನ್ನು ಲಡ್ಡಾಖ್ ನಲ್ಲಿ ಚಿತ್ರೀಕರಿಸಲಾಗುತ್ತಿದೆ. ಅವರು ಈವಾಗ ಲಡ್ಡಾಖ್ ನಲ್ಲಿದ್ದು ಅಲ್ಲಿನ ಚಿತ್ರಗಳನ್ನು ಶೇರ್ ಮಾಡುತ್ತಿದ್ದಾರೆ.


ಲಡ್ಡಾಖ್ ನಲ್ಲಿ ಲಾಲ್ ಸಿಂಗ್ ಚಡ್ಡಾ ಫಿಲ್ಮ್ ನ ಫೈನಲ್ ಶೆಡ್ಯೂಲ್ ೪೫ ದಿನಗಳ ತನಕ ಜರಗಲಿದೆ. ಈ ಫಿಲ್ಮ್ ನಲ್ಲಿ ಮೊದಲು ವಿಜಯ್ ಸೇತುಪತಿ ಕೂಡ ಅಮೀರ್ ಖಾನ್ ರ ಜೊತೆ ಕಾಣಿಸಿಕೊಳ್ಳುವವರಿದ್ದರು. ಆದರೆ ಅವರ ಜಾಗಕ್ಕೆ ನಾಗ್ ಚೈತನ್ಯ ಬಂದಿದ್ದಾರೆ. ಶೀಘ್ರವೇ ನಾಗ್ ಚೈತನ್ಯ ಕೂಡ ಶೂಟಿಂಗ್ ಸಮಾಪ್ತಿ ಗೊಳಿಸಲು ಲಡ್ಡಾಖ್ ಗೆ ಬರುವವರಿದ್ದಾರೆ.

ಸತ್ಯಜೀತ್ ರೇ ಅವರ ಜನ್ಮಶತಾಬ್ದಿ : ಶ್ವೇತಾ ಬಸು ಪ್ರಸಾದ್ ಅವರು ಕೋವಿಡ್-೧೯ ರೋಗಿಗಳ ನೆರವಿಗೆ ತನ್ನ ಪೈಂಟಿಂಗ್ ಹರಾಜು ಹಾಕಿದ್ದಾರೆ

ನಟಿ ಶ್ವೇತಾ ಬಸು ಪ್ರಸಾದ್ ಸೋಶಿಯಲ್ ಮೀಡಿಯಾದಲ್ಲಿ ತಾನು ರಚಿಸಿದ ಪೈಂಟಿಂಗ್ ಅನ್ನು ಹರಾಜು ಹಾಕಿದ್ದಾರೆ. ಹರಾಜಿನ ಹಣ .೬೦ ಸಾವಿರದಿಂದ ಆರಂಭಿಸಿದ್ದಾರೆ.
ಪ್ರಸಿದ್ಧ ಫಿಲ್ಮ್ ಕಾರ್ ನಿರ್ದೇಶಕ ಸತ್ಯಜಿತ್ ರೇ ಅವರ ಜನ್ಮಶತಾಬ್ದಿಯ ಪ್ರಯುಕ್ತ ರಚಿಸಿದ ಈ ಪೈಂಟಿಂಗ್ ಹರಾಜಿನಿಂದ ಬರುವ ಹಣವನ್ನು ಕೋವಿಡ್ ರೋಗಿಗಳ ನೆರವಿಗೆ ನೀಡುವುದಾಗಿ ತಿಳಿಸಿದ್ದಾರೆ. ಇದು ಕ್ಯಾನ್ವಾಸಿನಲ್ಲಿ ರಚಿಸಿದ ಪೈಂಟಿಂಗ್.


“ನನ್ನ ಪ್ರಯತ್ನವನ್ನು ನೋಡಿರಿ.ನಾನೊಬ್ಬಳು ಕಲಾವಿದೆ. ನಾನು ಮನೆಯಲ್ಲಿ ಕೂತು ಜನರಿಗೆ ಸಹಾಯ ಮಾಡಲು ಬೇರೆ ದಾರಿ ಇರಲಿಲ್ಲ. ಆದರೂ ನಾನು ಸಹಾಯ ಮಾಡಲು ಇಚ್ಚಿಸಿದ್ದೇನೆ .ಹ್ಯಾಪಿ ಬರ್ತಡೇ ಸತ್ಯಜಿತ್ ರೇ” ಎಂದಿದ್ದಾರೆ.
ಫಿಲ್ಮ್ ಇಂಡಸ್ಟ್ರಿಯಲ್ಲಿ ಸತ್ಯಜಿತ್ ರೇ ಅವರ ಹೆಸರು ಬಹಳ ಗೌರವದ ಸ್ಥಾನವನ್ನು ಪಡೆದಿದೆ. ಮೇ ಎರಡು ಅವರ ಜನ್ಮದಿನ. ನಿನ್ನೆಗೆ ನೂರು ವರ್ಷ ಪೂರ್ಣಗೊಂಡಿದೆ.
“ಸತ್ಯಜೀತ್ ರೇ ಕಥೆ ಬರೆದವರು. ಜನರಿಗಾಗಿ ಫಿಲ್ಮ್ ತಂದವರು. ಇಂದು ( ಮೇ ೨)ಅವರ ಜನ್ಮಶತಾಬ್ದಿ . ಈ ಹರಾಜು ಮೂರು ದಿನಗಳಕಾಲ ನಡೆಯಲಿದೆ.ಈ ಪೈಂಟಿಂಗ್ ನ ಕಾಪಿರೈಟ್ ರಿಸರ್ವ್ಡ್’ ಎಂದು ಶ್ವೇತಾ ತಿಳಿಸಿದ್ದಾರೆ. ಇದನ್ನು ಮೇ ೨ರಂದು ರಚಿಸಿದ್ದಾರೆ.
ಶ್ವೇತಾ ಅವರು ಮಕಡೀ, ಮಕಬೂಲ್, ದ ತಾಶ್ಕಂದ್ ಫಯ್ಲ್ಸ್ …… ಇಂತಹ ಫಿಲ್ಮ್ ಗಳಲ್ಲಿ ಅಭಿನಯಿಸಿದ್ದರು.