ಕೊರೊನಾ ವಿರುದ್ದ ಹೋರಾಟ: ದೆಹಲಿ ಸರ್ಕಾರದ ವಿನೂತನ ಯೋಜನೆ

ನವದೆಹಲಿ, ನ.20- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೊರೋನಾ ಸೋಂಕು ಗಣನೀಯವಾಗಿ ಹೆಚ್ಚಳವಾಗುತ್ತಿದ್ದು ಇದರ ತಡೆಗೆ ದೆಹಲಿ ಸರ್ಕಾರ ವಿನೂತನವಾದ ಕಾರ್ಯಕ್ರಮ ರೂಪಿಸಿದೆ‌.

ಕೊರೋನಾ ಸೋಂಕು ವಿರುದ್ಧ ಹೋರಾಡಲು ದೆಹಲಿ ಸರ್ಕಾರ ಸೂಪರ್ ಮ್ಯಾನ್ ಮತ್ತು ಬ್ಯಾಟ್ ಮ್ಯಾನ್ ಕರೆ ತಂದಿದೆ. ಬ್ಯಾಟ್ ಮನ್ ಸಂಪೂರ್ಣ ಮಾಸ್ಕ್ ಧರಿಸಿದ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್, ಹೀರೋಗಳು ಯಾವಾಗಲೂ ಧರಿಸುತ್ತಾರೆ . ಮಾಸ್ಕ್ ಧರಿಸುವ ಮೂಲಕ ಸಾವಿರಾರು ಮಂದಿಯ ಜೀವ ಉಳಿಸಿ ಎಂದು ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಮತ್ತೊಂದು ಪೊಸ್ಟ್ ನಲ್ಲಿ ಯಾವ ರೀತಿ ಮಾಸ್ಕ್ ಧರಿಸಬೇಕು ಎನ್ನುವ ಕುರಿತು ಅದರ ಚಿತ್ರಗಳನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಅವರು ಪ್ರಕಟಿಸಿದ್ದಾರೆ.

ಜನರು ಕೇವಲ ನೆಪಮಾತ್ರಕ್ಕೆ ಮಾಸ್ಕ್ ಹಾಕಿಕೊಂಡಿರುತ್ತಾರೆ. ಅದನ್ನು ಸರಿಯಾಗಿ ಮೂಗು ಮತ್ತು ಬಾಯಿ ಮುಚ್ಚಿ ಕೊಳ್ಳುವುದಿಲ್ಲ ಎನ್ನುವುದನ್ನು ತಿಳಿಸುವ ಪೋಸ್ಟರ್ ಇದಾಗಿದೆ.

2 ಸಾವಿರಕ್ಕೆ ದಂಡ ಹೆಚ್ಚಳ:

ದೆಹಲಿಯಲ್ಲಿ ಸೋಂಕು ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಡ್ಡಾಯವಾಗಿ ಧರಿಸಲು ಸರಕಾರ ಆದೇಶಿಸಿದೆ.

ಜೊತೆಗೆ ಧರಿಸದ ಮಂದಿಗೆ 500 ರೂಪಾಯಿ ಇದ್ದ ದಂಡದ ಮೊತ್ತವನ್ನು 2 ಸಾವಿರ ರೂಪಾಯಿಗೆ ಹೆಚ್ಚಳ ಮಾಡಿದೆ.ದೆಹಲಿಯಲ್ಲಿ ಸೋಂಕು ಮತ್ತು ಸಾವಿನ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ ಹಿನ್ನೆಲೆಯಲ್ಲಿ ಸರ್ಕಾರ ಇಂತಹದೊಂದು ಕ್ರಮ ಕೈಗೊಂಡಿದೆ.

5.10 ಲಕ್ಷ ಸೋಂಕು:
ದೆಹಲಿಯಲ್ಲಿ ಇದುವರೆಗೂ 5 ಲಕ್ಷದ 10 ಸಾವಿರ ಮಂದಿಗೆ ಒಟ್ಟಾರೆ ಸೋಂಕು ತಗುಲಿದೆ. 8041 ಮಂದಿ ಈ ವರೆಗೆ ಮೃತಪಟ್ಟಿದ್ದಾರೆ.

ಕರೋನಾ ಸೋಂಕು ತಡೆಯುವಲ್ಲಿ ಲಾಕ್ ಡೌನ್ ಪರಿಣಾಮಕಾರಿಯಾಗಿತ್ತು ಜೊತೆಗೆ ಇನ್ನೂ ಸೋಂಕು ಬಾರದಂತೆ ತಡೆಯಲು ಕಡ್ಡಾಯವಾಗಿ ಮೊಬೈಲ್ ಧರಿಸುವುದು ಅಗತ್ಯವಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಜನರಿಗೆ ಮನವಿ ಮಾಡಿದ್ದಾರೆ