ಕೊರೊನಾ ವಿರುದ್ದ ಜಾಗೃತಿ ಜಾಥ

ಕಾರಟಗಿ :ಮೇ:04: ಸಮೀಪದ ಬೂದಗುಂಪ ಗ್ರಾಮ ಪಂಚಾಯತ್ ವತಿಯಿಂದ ಕೋವಿಡ್ 19 ಅಲೆಯಿಂದ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮನೆಯಿಂದ ಹೊರಬಾರದಂತೆ ಮತ್ತು ಮಾಸ್ಕ್ ಇಲ್ಲದಂತೆ ಹೊರಗಡೆ ಕೂರಬಾರದೆಂದು ಜನರಿಗೆ ಮನವರಿಕೆಯಾಗುವಂತೆ ಧ್ವನಿವರ್ಧಕ ಮುಖಾಂತರ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಮಾಡಲಾಯಿತು,
ಗ್ರಾಮ ಪಂಚಾಯತ್ ಸಿಬ್ಬಂದಿ ಬಸವರಾಜ್ ಜಂತಕಲ್, ರಾಮಣ್ಣ ಭಜಂತ್ರಿ, ಗ್ರಾಮ ಪಂಚಾಯತ್ ಸದಸ್ಯ ಮಹಮದ್ ಸೇರಿ ಇನ್ನಿತರ ಜಾಗೃತಿ ಮೂಡಿಸಿದರು