ಕೊರೊನಾ ವಾರಿಯರ್ಸ ಘೋಷಿಸಲು ಒತ್ತಾಯ


ಬಾಗಲಕೋಟೆ : ಮೇ 13 : ಕೊರೊನಾ ವೈರಸ್ ಪ್ರಾರಂಭದ ಹಂತದಿಂದಲೂ ಸರಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು & ಕಾರ್ಯಕರ್ತರುಗಳು ಜಾಗೃತಿ, ಮಾಸ್ಕ, ಆಹಾರವಿತರಣೆ, ಧನ ಸಹಾಯ, ತರಬೇತಿ ವಲಸೆ ಕಾರ್ಮಿಕರಿಗೆ ಕ್ವಾರಟೈನ್ ಕೇಂದ್ರ & ಮಕ್ಕಳಿಗೆ ಸಂಬಂಧಿಸಿದ ತುರ್ತು ಸೇವೆಗಳಿಗೆ ಸಹಾಯ ಹಸ್ತ ಚಾಚಿರುವ ಕಾರ್ಯಕರ್ತರರುಗಳನ್ನು ಕೊರೊನಾ ವಾರಿಯರ್ಸ ಎಂದು ಘೊಷಣೆ ಮಾಡಬೇಕು. ನಗರ ಹಾಗೂ ಗ್ರಾಮಗಳ ಸಮುದಾಯಗಳಿಗೆ, ಕೃಷಿ, ಪರಿಸರ, ಎಫ್‍ಪಿಓ, ಸಮುದಾಯ ಆಧಾರಿತ ಕಾರ್ಯಕ್ರಮಗಳು, ಜಲಾನಯನ, ಸಮುದಾಯ ಸಂಘಟನೆ, ಮಹಿಳೆ & ಮಕ್ಕಳ ಅಭಿವೃದ್ಧಿ, ಅಂಗವಿಕಲರಿಗೆ ಸಹಾಯ ಮಾಡುತ್ತಿರುವ ಸ್ವಯಂ ಸೇವಾ ಸಂಸ್ಥೆಗಳು ತಮ್ಮದೇ ಆದ ಸೇವೆಯನ್ನು ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲಾ, ತಾಲೂಕು & ಗ್ರಾಮ ಪಂಚಾಯತಿ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿವೆ. ಸರಕಾರವು ತೆಗೆದುಕೊಳ್ಳುವ ಯೋಜನೆಗಳ ಅನುಷ್ಠಾನ, ಶಿಕ್ಷಣ, ಆರೋಗ್ಯ ಮೂಢನಂಬಿಕೆ ಪಿಡುಗುಗಳ ಜಾಗೃತಿ & ಪ್ರಸಾರ ಕಾರ್ಯಕ್ರಮಗಳಲ್ಲಿ ಸಂಪೂರ್ಣವಾಗಿ ತಮ್ಮನ್ನು ತಾವು ತೋಡಗಿಸಿಕೊಂಡು ಜೀವದ ಹಂಗು ತೊರೆದು ಕೈ ಜೋಡಿಸುವಲ್ಲಿ ಮುಂಚೂಣಿಯಲ್ಲಿವೆ.
ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಸ್ವಯಂ ಸೇವಾ ಸಂಸ್ಥೆಗಳ ಕಾರ್ಯಕರ್ತರನ್ನು ಕೊರೊನಾ ವಾರಿಯರ್ಸ ಎಂದು ಘೋಷಣೆ ಮಾಡಬೇಕು ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ತೊಡಗಿರುವ ಸ್ವಯಂ ಸೇವಾ ಸಂಸ್ಥೆಗಳಿಗೆ ಸರಕಾರವು ಸೂಕ್ತ ಸಾಮಾಜಿಕ & ಆರೋಗ್ಯ ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕೇಂದು ಕರ್ನಾಟಕ ನಗರ ಹಾಗೂ ಗ್ರಾಮಾಭ್ಯುದಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ (ಫೆವಾರ್ಡ-ಕ) ಪ್ರಧಾನ ಕಾರ್ಯದರ್ಶಿ ಮಹಾಂತೇಶ ಅಗಸಿಮುಂದಿನ ಒತ್ತಾಯಿಸಿದ್ದಾರೆ.