ಕೊರೊನಾ ವಾರಿಯರ್ಸ್ ಗೆ ಸನ್ಮಾನ

ಹರಪನಹಳ್ಳಿ.ಸೆ.೧೬; ಜ್ಯೂನಿಯರ್ ಚೇಂಬರ್ ಇಂಟರ್ ನ್ಯಾಷನಲ್ನ ಜೆಸಿಐ ಹರಪನಹಳ್ಳಿ ಸ್ಪೂರ್ತಿ ಘಟಕದಿಂದ ಕೊರೊನಾ ವಾರಿಯರ್ಸ್ ಸನ್ಮಾನಿಸುವ ಮೂಲಕ ಏಳು ದಿನ ಹಮ್ಮಿಕೊಂಡಿದ್ದ ಜೆಸಿಐ ಸಪ್ತಾಹ ಮುಕ್ತಾಯಗೊಂಡಿತು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಟಿಎಚ್‌ಎಂ ಡಾ.ಶಿವಕುಮಾರ, ವೈದ್ಯರಾದ ಡಾ.ಶಂಕರನಾಯ್ಕ, ಡಾ.ವಿನೋದ್, ಡಾ.ನಾಗರಾಜ್ ನಾಯ್ಕ, ಶ್ರೀನಿವಾಸಲು, ಡಾ.ವಿನಯ್, ವೆಂಕಟೇಶ ಬಾಗಲಾರ, ಅಂಬುಲೆನ್ಸ್ ಸಿಬ್ಬಂದಿಗಳು ಸೇರಿ ಒಟ್ಟು ೪೦ಕ್ಕು ಹೆಚ್ಚು ಜನ ವಾರಿಯರ್ಸ್ಗಳನ್ನು ಸನ್ಮಾನಿಸಲಾಯಿತು. ಜೆಸಿ ಸಂಸ್ಥೆ ಅಧ್ಯಕ್ಷ ಡಿ.ವಿಶ್ವನಾಥ, ಕಾರ್ಯದರ್ಶಿ ಮಹೇಸ್, ಮೋರಿಗೇರೆ ಹೇಮಣ್ಣ, ನಾರಾಯಣ, ರವಿನಾಯ್ಕ, ಪಿ.ಟಿ.ನಾಗರಾಜ್, ಶರತ್ ಬಾಬು, ಸರ್ವೇಶ ಅವರೂ ಉಪಸ್ಥಿತರಿದ್ದರು.