ಕೊರೊನಾ ವಾರಿಯರ್ಸ್ ಆರೋಗ್ಯ ಕಾಳಜಿ ಬಹುಮುಖ್ಯ: ದರ್ಶನಾಪುರ

ಶಹಾಪುರ:ನ.6:ಕೋವಿಡ್-19 ಸೋಂಕಿನಿಂದ ಇಡೀ ದೇಶವೇ ಸಾಕಷ್ಟು ತೊಂದರೆ ಅನುಭವಿಸಿ ಹಲವರು ಪ್ರಾಣವನ್ನೆ ಕಳೆದುಕೊಂಡು ಆತಂಕ ಸ್ಥಿತಿ ಉಂಟಾದ ಸಂದರ್ಭದಲ್ಲಿ, ಆರೋಗ್ಯ ಸೇವೆಗೆ ರಕ್ಷಾಕವಚವಾಗಿ ಹಗಲಿರುಳು ಪರಿಶ್ರಮ ವಹಿಸಿದ ಹೆಚ್ಚಿನ ಸಂಖ್ಯೆಯಲ್ಲಿ ಆರೋಗ್ಯ ಕಾಪಾಡಿದ ವೈದ್ಯರು, ಅಂಗನವಾಡಿ ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂಧಿಗಳು, ಪೌರಕಾರ್ಮಿಗಳು, ಸೇರಿದಂತೆ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಸಿಬ್ಬಂಧಿಗಳು ತಮ್ಮ ಪ್ರಾಣದ ಹಂಗು ತೊರೆದು ಜನರನ್ನು ರಕ್ಷಿಸುತ್ತಿದ್ದಾರೆ ಅವರ ಕಾರ್ಯ ಶ್ಲಾಘನೀಯ ಎಂದು ಶಾಸಕ ಶರಣಬಸಪ್ಪಗೌಡ ದರ್ಶನಾಪುರ ತಿಳಿಸಿದರು.

 ಕೆಪಿಸಿಸಿ ವತಿಯಿಂದ ಆರೋಗ್ಯಹಸ್ತ ಕಾರ್ಯಕ್ರಮದಡಿ ಕೊರೊನಾ ವಾರಿಯರ್ಸ್‍ಗೆ ತಾಲೂಕಿನ  ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತ್, ನಗರಸಭೆಗಳಲ್ಲಿ  ಆರೋಗ್ಯ ವಸ್ತುಗಳುÀ( ಮಾಸ್ಕ್, ಸ್ಯಾನಿಟೈಸರ್, ಪಿಪಿಇ ಕಿಟ್, ಥರ್ಮಲ್ ಸ್ಕ್ಯಾನಿಂಗ್ ಒಳಗೊಂಡ ಕಿಟ್‍ನ್ನು ವಿತರಿಸಿ ಮಾತನಾಡಿ ಸೋಂಕು ಇನ್ನು ವ್ಯಾಪಕವಾಗಿದ್ದು, ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂಧಿಗಳು ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಳ್ಳಬೇಕು ಮಾಸ್ಕ್‍ನ್ನು ಧರಿಸುವದರೊಂದಿಗೆ ಸಾಮಾಜಿಕ ಅಂತರದ ಬಗ್ಗೆ ಹೆಚ್ಚು ಗಮನ ನೀಡಬೇಕು ಎಂದರು.

ಕೆಪಿಸಿಸಿ ಯುವ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ಯ ಉಸ್ತುವಾರಿ ಅನೀಲ ಕುಮಾರ ಯಾದವ ಮಾತನಾಡಿ ಕೊರೊನಾ ವೈರಸ್ ಆತಂಕ ಎಲ್ಲೆಡೆ ತೀವ್ರಗೊಂಡಿದ್ದು, ವೈರಸ್ ಸೋಂಕಿಗೆ ಸಾವಿರಾರು ಜನರು ತುತ್ತಾಗಿದ್ದಾರೆ.  ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ವಿವಿಧ ಇಲಾಖೆಯ ಸಿಬ್ಬಂದಿಗಳು ಜವಬ್ದಾರಿಯುತ ಕೆಲಸ ನಿರ್ವಹಿಸುತ್ತಿದ್ದಾರೆ. ಹಾಗೂ ಸರ್ಕಾರಗಳ ಸೂಚನೆಗಳ ಪ್ರಕಾರ ಸೋಂಕು ಹರಡದಂತೆ ತಡೆಯಲು ನೆರವಾಗಬೇಕು, ಕೆಪಿಸಿಸಿ ವತಿಯಿಂದ ಪ್ರತಿ ಪಂಚಾಯತ್‍ಗಳಲ್ಲಿ ಇಬ್ಬರು ಸಿಬ್ಬಂಧಿಗಳನ್ನು   ನೇಮಿಸಲಾಗಿದ್ದು , ಗ್ರಾಮಸ್ಥರಿಗೆ ಮತ್ತು ಸಿಬ್ಬಂಧಿಗಳಿಗೆ ತಪಾಸಣೆ ಮಾಡಲಾಗುವುದೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಮರಿಗೌಡ ಹುಲ್ಕಲ್, ಶಿವಮಹಾಂತ ಚಂದಾಪುರ, ಚೇತನಗೌಡ ನಾಯಕ, ಕುಮಾರ ನಾಯಕ ಡಾ.ಬಸವರಾಜ ಇಜೇರಿ,  ಮೌನೇಶ ನಾಟೇಕಾರ,  ಶಾಂತು ಪಾಟೀಲ, ಬಸವರಾಜ ಸಾಹು, ಅಜೀಮ್, ಮಂಜುನಾಥ ಚಟ್ಟಿ, ಚನ್ನಬಸಪ್ಪಗೌಡ ಹೊಸ್ಕೇರಾ,  ರಾಘವೇಂದ್ರ ಮಾನಸಗಲ್,  ಸಂಗಮೇಶ್ವರ, ಮಹೇಶ್ ಕುಮಾರ, ಸಿದ್ದಪ್ಪ ಸಗರ, ರಾಜು ಪೂಜಾರಿ,  ಭೀಮರಾಯ ಜುನ್ನಾ, ರಾಮಣ್ಣ ಸಾದ್ಯಾಪುರ, ಮಲ್ಲಯ್ಯ ಸ್ವಾಮಿ ಇಟಗಿ, ಮಲ್ಲಿನಾಥ ಹೊಸ್ಮನಿ,  ಸೇರಿದಂತೆ ಕೆಪಿಸಿಸಿ ಮುಖಂಡರು, ಕಾರ್ಯಕರ್ತರು , ಯುವಕರು ಇದ್ದರು.