ಕೊರೊನಾ ವಾರಿಯರ್ಸ್‍ನವರಿಗೆ ರಕ್ಷಣೆಯೇ ಇಲ್ಲದಂತಾಗಿದೆ – ಹೊನ್ನೂರಸ್ವಾಮಿ

ಸಂಡೂರು ಸೆ16: ದಿವ್ಯ ಫಾರ್ಮಸಿ ಪತಾಂಜಲಿಯವರ ಗೋಧನ್ ಅರಕ್‍ನ್ನು ವೀರನಗೌಡ ಪಾಟೀಲ, ಅರಳಿ ಕುಮಾರಸ್ವಾಮಿ, ವಿ.ಎಂ. ನಾಗಭೂಷಣ, ಬಣಕಾರ ಬಸವರಾಜ, ಬಸವರಾಜ ಭುಜಂಗನಗರ ಈ ಎಲ್ಲಾ ಪತ್ರಕರ್ತರಿಗೆ ಝಿರೆಕ್ಸ್ ಅಂಗಡಿಯ ಮಾಲೀಕ ಹೊನ್ನೂರಸ್ವಾಮಿಯವರು ವಿತರಿಸಿ ಕೆಮ್ಮು, ಅಸ್ತಮಾ ನಂತಹ ಹಲವಾರು ರೋಗಗಳು ಕಾಡುತ್ತಿದ್ದು ನನಗೆ ಸರಕಾರಿ ಆಸ್ಪತ್ರೆಯ ತೋರಣಗಲ್ಲಿನ ಡಾ|| ಫಣಿಂದರ್ ರವರು ನನಗೆ ಉಚಿತವಾಗಿ ಕೊಡಿಸಿ ನೀನು ಈ ಔಷಧಿಯನ್ನು ಸ್ವೀಕರಿಸು ತದನಂತರ ಫಲಿತಾಂಶ ನನಗೆ ತಿಳಿಸು ಎಂದು ಹೇಳಿದ ನಂತರ ಅವರ ಮಾರ್ಗದರ್ಶನದಂತೆ ನಾನು ನಡೆದುಕೊಂಡು ಔಷಧಿಯನ್ನು ತೆಗೆದುಕೊಂಡೆ. ನಾನಿ ನಿರ್ಗಳವಾಗಿ ಮಾತನಾಡುತ್ತೇನೆ, ಯಾವ ಕೆಮ್ಮು ರೋಗಗಳಿಲ್ಲ ಅದರ ಪ್ರಯುಕ್ತ ನಾನು ನಿಮಗೆ ನೀಡುತ್ತಿದ್ದೇನೆ ಎಂದು ಪತ್ರಕರ್ತರಿಗೆ ಉಚಿತವಾಗಿ ನೀಡಿ ಹೊನ್ನೂರಸ್ವಾಮಿ ಮಾತನಾಡಿದರು.
ರಾಜಕಾರಣಿಗಳಲ್ಲಾಗಲೀ, ಅಧಿಕಾರಿಗಳಾಗಲೀ ಪತ್ರಕರ್ತರನ್ನು ಬಳಸಿಕೊಳ್ಳುತ್ತಾರೆ. ಆದರೆ ಯಾರು ಫಿ ಪಾಕೇಟ್ ನೀಡಿಲ್ಲ. ಒಂದು ಟಾನಿಕ್ ಬೆಲೆ 40 ರೂ. ಎಂಟು ಜನ ಪತ್ರಕರ್ತರಿಗೆ ನೀಡುತ್ತಿದ್ದೇನೆ. ನನ್ನ ಜೆರಾಕ್ಸ್ ಅಂಗಡಿಯಲ್ಲಿ ಬಂದ ಲಾಭದಿಂ ಪತ್ರಕರ್ತರಿಗೂ ಉಪಯೋಗವಾಗಿ ನನ್ನಿಂಧೇ ಆಗಲೀ ಎನ್ನುವ ಉದ್ದೇಶ. ಕರೋನಾದಿಂದ ನೌಕರರು ತೀರಿಕೊಂಡರೆ ಕೇಂದ್ರ ಸರ್ಕಾರ 50 ಲಕ್ಷ ರೂ. ರಾಜ್ಯ ಸರ್ಕಾರ 30 ಲಕ್ಷ ರೂ. ನೀಡುತ್ತಿದ್ದಾರೆ. ಕೇಂದ್ರ ಮತ್ತು ರಆಜ್ಯ ಸರ್ಕಾರದ ಪಾಲಿಗೆ ಪತ್ರಕರ್ತರು ತ್ಯಾಜ್ಯವಸ್ತುವಾಗಿ ಪರಿಗಣಿಸುತ್ತಿರುವುದು ನೋವಿನ ಸಂಗತಿ. ಸರಕಾರೇತರ ಕೆಲಸ ಮಾಡುವವರಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ನೊಂದು ಮಾತನಾಡಿದರು.