ಕೊರೊನಾ ವಾರಿಯರ್ಸಗಳಿಗೆ ಡ್ರಾಯ್‍ಫುಡ್ಸ್ ವಿತರಣೆ

ಕಲಬುರಗಿ,ಮೇ.29- ಕೋವಿಡ್ ಎರಡನೆ ಅಲೆಯ ಸಂಕಷ್ಟದ ಈ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸಮಾಜದ ಶ್ರೇಯೋಭಿವೃದ್ಧಿಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಕೊರೊನಾ ವಾರಿಯರ್ಸ್ ಗಳಿಗೆ ಜಿಲ್ಲಾ ವಿಶ್ವಕರ್ಮ ಹೋರಾಟ ಸಮಿತಿ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ಅವರು, ಸ್ವಯಂ ಪ್ರೇರಣೆಯಿಂದ ಡ್ರಾಯ್ ಫುಡ್ಸ್, ಮಾಸ್ಕ್ ಮತ್ತು ನೀರಿನ ಬಾಟಲಿಗಳನ್ನು ಹಂಚಿಕೆ ಮಾಡುವ ಮೂಲಕ ವಿಶೇಷ ಗಮನ ಸೆಳೆದರು.
ಮಹಾಮಾರಿ ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟು ನಿಟ್ಟಿನಲ್ಲಿ ಸರ್ಕಾರ ಲಾಕ್‍ಡೌನ್ ಘೋಷಿಸಿದೆ, ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಲು ಕೊರೊನಾ ವಾರಿಯರ್ಸಗಳಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಅವರಿರುವ ಸ್ಥಳಕ್ಕೆ ಭೇಟಿನೀಡಿ ಮಾಸ್ಕ್, ಡ್ರಾಯ್ ಫುಡ್ಸ್ ಗಳನ್ನು ಅವರು ವಿತರಿಸಿದರು.
ಈ ಸಂದರ್ಭದಲ್ಲಿ ಸಾಂಸ್ಕøತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಸುರೇಶ ಬಡಿಗೇರ, ಸಿದ್ಧಾರೂಢ ಕಲ್ಲೂರ, ಓಂಕಾರ ಕಲ್ಲೂರ, ಶಿವಲಿಂಗ ಹಳಿಮನಿ ಸೇರಿದಂತೆ ಹಲವರಿದ್ದರು.