ಕೊರೊನಾ ಲಾಕ್ ಡೌನ್ ಗೂ ಬುದ್ದಿ ಕಲಿಯದ ಕೋಟೆನಾಡಿನ ಜನ

ಚಿತ್ರದುರ್ಗ, ಏ.28: ಕೊರೊನಾ‌ ಮಹಾಮಾರಿಯಿಂದ ಇನ್ನೂ ಬುದ್ದಿ ಕಲಿಯದ ಕೋಟೆನಾಡಿನ ಜನ ತರಕಾರಿ ಹಾಗೂ ದಿನಸಿ ಸಾಮಗ್ರಿ ಕೊಳ್ಳಲು ಸಾಮಾಜಿಕ ಅಂತರ ಹಾಗೂ ಮಾಸ್ಕ್ ಧರಿಸದೆ ಮುಗಿಬಿದ್ದಿರುವುದು ಜಿಲ್ಲೆಯ ಜನರನ್ನು ಮತ್ತಷ್ಟು ಆತಂಕಕ್ಕೆ ಸಿಲುಕಿಸಿದೆ.
ಹೌದು ಕೊರೊನಾ ಮಹಾಮಾರಿಯಿಂದ ಈಡೀ ಜಗತ್ತೇ ನಲುಗಿ ಹೋಗಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ರಾಜ್ಯಾಧ್ಯಂತ (ಲಾಕ್ ಡೌನ್) ಜನತಾ ಕರ್ಫ್ಯೂ ಜಾರಿ ಮಾಡಿ, ಜನರು ಸುಖಸುಮ್ಮನೆ ಮನೆಯಿಂದ ಹೊರ ಬರಬಾರದು ಎಂದು ಆದೇಶ ಹೊರಡಿಸಿದೆ. ತುರ್ತು ಕೆಲಸದ ಮೇಲೆ ಮನೆಯಿಂದ ಹೊರ ಬಂದರೂ ಕೂಡ ಮಾಸ್ಕ್ ಧರಿಸಿ, ಸಾಮಾಜಿಕ ಅಂತರಾ ಕಾಪಾಡಬೇಕು ಎಂದು ಆದೇಶವನ್ನು ಹೊರಡಿಸಿದೆ. ಆದರೂ ಕೂಡ ಕೋಟೆನಾಡು ಚಿತ್ರದುರ್ಗದ ಜನತೆ ಮಾತ್ರ ಕೊರೊನಾಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ನಗರದ ಸೈನ್ಸ್ ಕಾಲೇಜ್ ಗ್ರೌಂಡ್ ನಲ್ಲಿ ನಿರ್ಮಾಣ ಮಾಡಿರುವ ಮಾರುಕಟ್ಟೆಯಲ್ಲಿ ಕೊರೊನಾ ರೂಲ್ಸ್ ಬ್ರೇಕ್ ಮಾಡಿದ ಜನರು ತರಕಾರಿ ಹಾಗೂ ದಿನಸಿ ವಸ್ತುಗಳನ್ನು ಕೊಳ್ಳಲು ಮಾಸ್ಕ್ ಧರಿಸದೆ ಹಾಗೂ ಸಾಮಾಜಿಕ ಅಂತರಾ ಕಾಪಾಡಿಕೊಳ್ಳದೆ ಮುಗಿ ಬಿಳುತ್ತಿದ್ದಾರೆ. ಇದನ್ನು ಕೇಳಿದರೆ ವಸ್ತುಗಳು ಸಿಗುತ್ತವೋ ಇಲ್ಲವೋ ಆದ್ದರಿಂದ ಬೇಗ ನಾವು ತೆಗೆದುಕೊಳ್ಳಬೇಕು ಎಂದು ಆತಂಕ ರಹಿತ, ಬೇಜಾವಬ್ದಾರಿ ಉತ್ತರಗಳನ್ನು ನೀಡುತ್ತಾರೆ.
ಸರ್ಕಾರ ಪ್ರತಿನಿತ್ಯ ಬೆಳಗ್ಗೆ ೬ ರಿಂದ ೧೦ ಗಂಟೆ ವರೆಗೆ ತರಕಾರಿ ಹಾಗೂ ದಿನಸಿ ಸಾಮಗ್ರಿಗಳನ್ನು ಕೊಳ್ಳಲು ಅವಕಾಶ ಕೊಟ್ಟಿದ್ರು ಸಹ ಜನರು ಮಾತ್ರ ತರಕಾರಿಗಾಗಿ ಜನ ದುಂಬಾಲು ಬಿಳುತ್ತಿದ್ದಾರೆ.
ಜಿಲ್ಲೆಯಲ್ಲಿ ಪ್ರತಿನಿತ್ಯ ಕೊರೊನಾ ಕೇಸ್ ಗಳು ಶತಕ ದಾಟುತ್ತಿವೆ. ಆದರೂ ಕೂಡ ಜನರು ಮಾತ್ರ ಡೋಂಟ್ ಕೇರ್ ಎನ್ನುತ್ತಿಲ್ಲ.
ಪೊಲೀಸರು ಒಂದೆಡೆ ಜಾಗೃತಿ ಮೂಡಿಸುತ್ತಿದ್ದಾರೆ. ಇದಕ್ಕೆ ಜಗ್ಗದ ಕಾರಣ ಕೇಸುಗಳನ್ನು ಹಾಕಿ, ದಂಡವನ್ನು ಹಾಕುತ್ತಿದ್ದಾರೆ ಆದರೂ ಕೋಟೆನಾಡಿನ ಜನ ಮಾತ್ರ ಯಾವುದಕ್ಕೂ ಕೇರ್ ಮಾಡುತ್ತಿಲ್ಲ. ಸರ್ಕಾರ ಕೊರೊನಾ ರೋಗದ ಬಗ್ಗೆ ಎಷ್ಟೇ ಅರಿವು ಮೂಡಿಸಿ, ಏನೇಲ್ಲಾ ಕ್ರಮ ಕೈಗೊಂಡರೂ ಕೂಡ ಜನರ ಮನಸ್ಥಿತಿ ಬದಲಾಗದ ಹೊರತು ಕೊರೊನಾ ರೋಗವನ್ನು ತಡೆಯಲು ಸಾಧ್ಯವಿಲ್ಲ.
——————-