ಕೊರೊನಾ ಲಸಿಕೆ ಪಡೆಯಲು ಸಾರ್ವಜನಿಕರಿಗೆ ಮೀನಾಕ್ಷಿ ಪಾಟೀಲ ಮನವಿ

ಆಳಂದ: ಎ.21:ಮಹಾಮಾರಿ ಕೊರೊನಾ ಮುಕ್ತಗೊಳಿಸಲು ಪ್ರತಿಯೊಬ್ಬರು ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕಡ್ಡಾಯವಾಗಿ ಲಸಿಕೆ ಪಡೆದುಕೊಂಡು ಮುಂಜಾಗೃತೆ ಕ್ರಮ ವಹಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯೆ ಮೀನಾಕ್ಷಿ ಗುರುಶರಣ ಪಾಟೀಲ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ತಾಲೂಕಿನ ಕೊರಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಕೊರೊನಾ ಲಸಿಕೆ ಪಡೆದ ಬಳಿಕ ಅವರು ಮಾತನಾಡಿದರು. ಲಸಿಕೆ ಪಡೆಯುವುದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಅನಾವಶಕ ಗೊಂದಲಕ್ಕೆ ಒಳಗಾಗಬಾರದು. ಲಸಿಕೆ ಪಡೆದ ಮೇಲೆ ಸೋಂಕು ತಗಲಿದರು ಸಹ ಸಾವು ನಿಯಂತ್ರಿಸುವ ಶಕ್ತಿ ಅಡಗಿರುತ್ತದೆ. ಪ್ರತಿಯೊಬ್ಬರು ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಹಾಗೂ ಸ್ಯಾನಿಟೈಜರ್ ಬಳಸುವುದು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಹೇಳಿದರು.

ಕೃಷಿಕ ಸಮಾಜದ ಅಧ್ಯಕ್ಷ ಗುರುಶರಣ ಪಾಟೀಲ ಕೊರಳ್ಳಿ, ಶ್ರೀಕಾಂತ ವಾರದ ಗ್ರಾಪಂ ಬಿಲ್ ಕಲೆಕ್ಟೇರ್ ಹಣಮಂತರಾವ್ ಮದಗುಣಕಿ ಇನ್ನಿತರ ಲಸಿಕೆ ಪಡೆದ ಮೇಲೆ ಅನೇಕರು ಲಸಿಕೆಗೆ ಪಡೆದರು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಮಲ್ಲಾರಾವ್ ಕುಲಕರ್ಣಿ, ಸಮುದಾಯ ಆರೋಗ್ಯ ಅಧಿಕಾರಿ ಮಹೇಶ ಲೋಹಾರ, ಸ್ಟಾಪ್‍ನರ್ಸ್ ವಿಜಯಲಕ್ಷ್ಮೀ ಬಿರಾದಾರ, ಸುಹಾಸನಿ ಸ್ವಾಮಿ, ಔಷಧ ತಜ್ಞ ಸುನೀಲ ಕೋರೆ ಮತ್ತಿತರು ಇದ್ದರು.

ಕೋವಿಡ್ ರೋಗಿಗಳ ತುರ್ತು ಚಿಕಿತ್ಸೆಗಾಗಿ ವೆಂಟಿಲೆಟರ್, ಆಕ್ಸಿಜನ್ ಒದಗಿಸಿ, ಆಧುನಿಕ ಸೌಲಭ್ಯವುಳ್ಳ ಬೆಡ್‍ಗಳನ್ನು ಹೆಚ್ಚಿಸಿ ಹೆಚ್ಚುವರಿ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಕೂಡಲೇ ನೇಮಿಸುವಂತೆ ಮನವಿ ಮಾಡಿದ್ದಾರೆ.

ಆಳಂದನಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭ: ಆಳಂದ ಪಟ್ಟಣದ ಡಾ| ಬಿ.ಆರ್.ಅಂಬೇಡ್ಕರ ಬಾಲಕೀಯರ ವಸತಿ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗಿದೆ ಎಂದು ತಹಸೀಲ್ದಾರ ಎಲ್ಲಪ್ಪ ಸುಬೆದಾರ ತಿಳಿಸಿದ್ದಾರೆ.ರೋಗ ಲಕ್ಷಣವಿಲ್ಲದ ಸೋಂಕಿತರಿಗೆ ಹೋಂ ಐಸೋಲೇಷನ್‍ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇನ್ನು ಅವಶ್ಯಕತೆವಿದ್ದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಲಾಗುವುದು ಎಂದು ಅವರು ತಿಳಿಸಿದರು.