ಕೊರೊನಾ ಲಸಿಕೆ ಪಡೆಯಲು ಮನವಿ

ರಾಯಚೂರು.ಮಾ.೩೧- ಕೊರೊನಾ ಲಸಿಕೆ ನಿರ್ಬಂಧ ಲಸಿಕೆ ಪಡೆಯುವ ಮೂಲಕ ಎರಡನೇ ಅಲೆಯನ್ನು ನಿಯಂತ್ರಿಸಲು ಸಾರ್ವಜನಿಕರು ಸಂಪೂರ್ಣವಾಗಿ ಸಹಕರಿಸುವಂತೆ ಕಾಂಗ್ರೆಸ್ ಹಿರಿಯ ಮುಖಂಡರು ಹಾಗೂ ಸುಪ್ರೀಂಕೋರ್ಟ್ ನ್ಯಾಯವಾದಿಗಳಾದ ದೇವಣ್ಣ ನಾಯಕ ಅವರು ಮನವಿ ಮಾಡಿದ್ದಾರೆ.
ಅವರಿಂದು ರಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-೧೯ ಲಸಿಕೆ ಪಡೆದ ನಂತರ, ತಮ್ಮ ಅಭಿಪ್ರಾಯ ಹೇಳಿಕೊಂಡರು. ಮಹಾಮಾರಿ ಕಳೆದ ಒಂದು ವರ್ಷದಿಂದ ಅನೇಕರ ಪ್ರಾಣಹಾನಿಗೆ ಕಾರಣವಾಗಿದೆ. ಕೊರೊನಾದ ವಿರುದ್ಧ ಭಾರತದಲ್ಲಿ ಉತ್ಪಾದಿತಗೊಂಡ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿವೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಲಸಿಕೆ ಹಾಕಿಸಿಕೊಳ್ಳುವ ಬಗ್ಗೆ ನಿರ್ಲಕ್ಷ್ಯಿಸಿದೆ. ಲಸಿಕೆಯನ್ನು ಪಡೆದು ಆರೋಗ್ಯ ಜೀವನ ನಿರ್ವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ. ಈಗಾಗಲೇ ದೇಶದಲ್ಲಿ ಎರಡನೇ ಕೊರೊನಾ ಅಲೆ ವ್ಯಾಪಾಕವಾಗಿದೆ. ಹೆಚ್ಚಿನ ಜೀವಹಾನಿಯಾಗದಂತೆ ಮತ್ತು ಜನರು ಲಸಿಕೆ ಪಡೆದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮಹಾಮಾರಿ ಕೊರೊನಾವನ್ನು ಹಿಮ್ಮೆಟ್ಟಿಸಲು ಅವರು ಕೋರಿದ್ದಾರೆ.