ಕೊರೊನಾ ಲಸಿಕೆ ಪಡೆಯಲು ಕರೆ

ಹೊನ್ನಾಳಿ.ಏ.೨ ;ಯಾವುದೇ ಮಾರಕ ಖಾಯಿಲೆಗಳಿರಲಿ ಅಥವಾ ಇರದೇ ಇರಲಿ 45 ವರ್ಷ ಮೇಲ್ಪಟ್ಟ ಎಲ್ಲರೂ ಕೊರೋನಾ ಲಸಿಕೆ ಹಾಕಿಸಿಕೊಳ್ಳಲಿಕ್ಕೆ ಯಾವುದೇ ಅಭ್ಯಂತರ ಇಲ್ಲ ಎಂದು ತಹಶೀಲ್ದಾರ್ ಬಸನಗೌಡ ಕೋಟುರ ತಿಳಿಸಿದರು.ನಗರದ ಕಿತ್ತೂರುರಾಣಿ ಚೆನ್ನಮ್ಮ ಸಮುದಾಯ ಭವನದಲ್ಲಿ 45 ವರ್ಷ ಮೇಲ್ಪಟ್ಟ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಜನವರಿ 1, 1977 ಕಿತ ಮೊದಲು ಹುಟ್ಟಿದ ಎಲ್ಲರು ಕೊರೋನಾ ಲಸಿಕೆ ಪಡೆಯಲು ಅರ್ಹರಾಗಿರುತ್ತಾರೆ ಹಾಗೂ ಲಸಿಕೆ ನೀಡುವ ಅಭಿಯಾನವನ್ನು ಸರಳಗೊಳಿಸಲು ಸಹ ಖಾಯಿಲೆಗಳ ಷರತ್ತನ್ನು ತೆಗೆದು ಹಾಕಲಾಗಿದೆ ಎಂದು ತಿಳಿಸಿದರು.ತಾಲೂಕು ವೈಧ್ಯಾಧಿಕಾರಿ ಡಾ.ಕೆಂಚಪ್ಪ ಮಾತನಾಡಿ, ಏ 1 ರಿಂದ ಕೋವಿಡ್‌ನಲ್ಲಿ ಹೆಸರು ನೊಂದಾಯಿಸಿಕೊಳ್ಳಲು,ಯಾರು ನೊಂದಣಿ ಮಾಡಿಸಿಕೊಳ್ಳಲ್ಲು ನಿರ್ಧಾರ ಮಾಡಿದ್ದಾರೋ ಅಂತಹವರು ಸ್ಥಳಿಯ ಸಮುದಾಐ ಆಸ್ಪತ್ರೆಗಳಲ್ಲೂ ತಮ್ಮ ಹೆಸರನ್ನು ನೊ0ದಾಯಿಸಿಕೊಳ್ಳಬಹುದು ಎಂದು ವಿವರಿಸಿದರು.ಜ್ವರ,ತಲೆನೋವು,ನೆಗಡಿ,ಕೆಮ್ಮು,ಉಸಿರಾಟ ಹಾಗೂ ಅತೀಸಾರ ಬೇದಿ, ಕರೋನಾ ರೋಗದ ಲಕ್ಷಣಗಳಾಗಿರುವುದರಿಂದ ಯಾರಲ್ಲಿ ಇಂತಹ ಲಕ್ಷಣಗಳು ಕಂಡು ಬಂದರೆ ಕೂಡಲೆ ತಮ್ಮ ಹತ್ತಿರದ ಆಸ್ಪತ್ರೆಗೆ ಬೇಟಿ ನೀಡಿ ರೋಗದ ಬಗ್ಗೆ ಪರಿಕ್ಷೆೆ ಮಾಡಿಸಿಕೊಳ್ಳಿ ಎಂದು ಅವರು ಮನವಿ ಮಾಡಿದರು.ತಾ.ಪಂ. ಇಒ ಗಂಗಾಧರಮೂರ್ತಿ ಮಾತನಾಡಿ, ಕರೋನಾ ಬಗ್ಗೆ ಯಾರು ಆತಂಕ ಪಡುವ ಅಟಗತ್ಯ ಇಲ್ಲಾ ಆದರೆ ಅತೀ ಜಾಗೃತಿ ಮುಖ್ಯ ಎಲ್ಲರೂ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಇದರಿಂದ ಕರೋನಾ ಬಾರದಂತೆ ತಡೆಯಬಹುದು ಮತ್ತು ಭಾರತದಲ್ಲಿ ಎಲ್ಲಾ ದೇಶಗಳಿಗಿಂತ ಮುಂಚೆ ಲಸಿಕೆ ಕಂಡು ಹಿಡಿದಿರುವುದರಿಂದ 45 ವರ್ಷ ಮೇಲ್ಪಟ್ಟವರು ಸಹ ಉಚಿತವಾಗಿ ಲಸಿಕೆ ಹಾಕಿಸಿಕೊಳ್ಳಬಹುದು ಎಂದರು.ಪುರಸಭೆ ಅಧ್ಯಕ್ಷ ಕೆ.ವಿ.ಶ್ರೀಧರ್,ಇಂಜಿನಿಯರ್ ದೇವರಾಜ್,ನಾಗೇಶ್,ವೈದ್ಯರಾದ ಗುರುರಾಜ್,ಕೋಡೆಹಳ್ಳಿ ಜಗದೀಶ್,ಮಧು,ಭಾಗ್ಯಶ್ರೀ,ನಾಗರತ್ನಮ್ಮ,ಸಾಮಾಜಿಕ ಹೋರಾಟಗಾರ ಕತ್ತಿಗೆ ನಾಗರಾಜ್ ಇದ್ದರು.