
ಭಾಲ್ಕಿ :ಮಾ.22: ತಾಲ್ಲೂಕಿನ ಧನ್ನೂರ (ಎಚ್), ಹಾಲಹಿಪ್ಪರ್ಗಾ ಹಾಗೂ ಹಲಬರ್ಗಾ ಗ್ರಾಮಗಳ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಭಾನುವಾರ ಉದ್ಯಮಿ ವೀರಶೆಟ್ಟಿ ಪಟ್ನೆ ಅಭಿಮಾನಿಗಳ ಬಳಗದ ಸದಸ್ಯರು ಕೋವಿಡ್ ಲಸಿಕೆ ಪಡೆದವರಿಗೆ ಹಣ್ಣು, ಹಂಪಲು, ಬಿಸ್ಕತ್ ಹಾಗೂ ಕುಡಿಯುವ ನೀರಿನ ಬಾಟಲ್ ವಿತರಿಸಿದರು.
ನಂತರ ಮಾತನಾಡಿದ ಬಳಗದ ಅವಿನಾಶ ಮುತ್ತಂಗೆ ,’ 60ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆಯನ್ನು ಪಡೆಯಲು ಹಿಂಜರಿಯಬಾರದು. ಇದರಿಂದ ಆರೋಗ್ಯದ ಮೇಲೆ ಯಾವುದೇ ರೀತಿಯ ದುಷ್ಪರಿಣಾಮ ಬೀರುವುದಿಲ್ಲ.ಆದ್ದರಿಂದ ಎಲ್ಲರೂ ಕಡ್ಡಾಯವಾಗಿ ಲಸಿಕೆಯನ್ನು ಪಡೆಯಬೇಕು ‘ ಎಂದು ಹೇಳಿದರು.
‘ ಕರೊನಾ ಎರಡನೇ ಅಲೆ ಪ್ರಾರಂಭವಾಗಿದೆ. ಎಲ್ಲರೂ ಜಾಗೃತಿಯಿಂದ ಹೆಜ್ಜೆಯಿಡಬೇಕು. ಪ್ರತಿಯೊಬ್ಬರು ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು’ ಎಂದು ತಿಳಿಸಿದರು.
ವೀರಶೆಟ್ಟಿ ಪಟ್ನೆ ಅಭಿಮಾನಿ ಬಳಗದ ಶಿಖರೇಶ ಜ್ಯಾಂತಿ, ಎಕನಾಥ ಮೇತ್ರೆ, ಬ್ರಿಜಪಾಲ ಸಿಂಗ್ ಠಾಕೂರ್, ಮಹೇಶ ಪಾಟೀಲ ಹಲಬರ್ಗಾ, ರಮೇಶ ಅರಳಿ ಧನ್ನೂರ, ಸಿದ್ದು ಬಿರಾದಾರ ಧನ್ನೂರ, ಅರುಣ ಮುತ್ತಂಗೆ, ಆನಂದ ಹೊನ್ನಾ ತರನಳ್ಳಿ, ರಾಮಶೆಟ್ಟಿ ತರನಳ್ಳಿ ಹಾಗೂ ಇನ್ನೀತರರು ಇದ್ದರು.