ಕೊರೊನಾ ರೋಗ ಹರಡದಂತೆ ಎಲ್ಲರು ಲಸಿಕೆ ಕಾರ್ಯಕ್ರಮ ಯಶ್ವಸಿಗೆ ಶ್ರಮಿಸಿ: ತಹಸೀಲ್ದಾರ ನಾಗಮ್ಮಾ ಎಂ.ಕೆ

ಅಫಜಲಪುರ:ಮಾ.20: ಪಟ್ಟಣದ ತಾ.ಪಂ ಸಭಾಂಗಣದಲ್ಲಿ ತಾಲೂಕಾ ಅಧಿಕಾರಿಗಳ ಹಾಗೂ ಗ್ರಾಪಂ ಪಿಡಿಒ, ಮತ್ತು ಅಂಗನವಾಡಿ ಕಾರ್ಯಕರ್ತರ ಸಭೆ ನಡಿಸಿ ಮಾತನಾಡಿದ ಅವರು ಕೊರೊನಾ ಎರಡನೇ ಅಲೆ ಆರಂಭವಾಗಿದೆ ಎಲ್ಲೂರು ಎಚ್ಚರಿಕೆಯಿಂದ ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜೀಕ ಅಂತರ ಕಾಯ್ದು ಕೊಳ್ಳುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಾಲೂಕ ತಹಸೀಲ್ದಾರ ನಾಗಮ್ಮಾ.ಎಂ.ಕೆ ಅವರು ಹೇಳಿದರು.

ಅಂಗಡಿ, ಹೊಟೀಲಗಳು, ಬಜಾರಗಳಲ್ಲಿ ಹೆಚ್ಚಿನ ಜನ ಸೇರದಂತೆ ಹಾಗೂ ಕಾರ್ಯಕ್ರಮ ಸಭೆ ಸಮಾರಂಭಗಳಲ್ಲಿ ಎರಡನೂರಕಿಂತ ಹೆಚ್ಚಿನ ಜನ ಸೇರದಂತೆ ನೋಡಿಕೊಳ್ಳಬೇಕು ಎಂದ ಅವರು ಕಾರ್ಯಕ್ರಮಕ್ಕೆ ಪರವಾನಗೆ ಪಡೆಯಬೇಕು ನಿಯಮ ಉಲ್ಲಂಘಿಸಿದರೆ ಕ್ರಮ ಜರುಗಿಸಬೇಕೆಂದು ಹೇಳಿದರು.

ಡಾ. ಸುಶೀಲಕುಮಾರ ಅಂಬೂರೆ ಮಾತನಾಡಿ ಕೊರೊನಾ ತಡೆಯಲು ಈಗಾಗಲೇ ಸರಕಾರದ ಎಚ್ಚರಿಕೆ ಹೆಜ್ಜೆ ಇರಿಸಿದೆ ಈಗಾಗಲೇ ಲಸಿಕಾ ಅಭಿಯಾನ ಆರಂಭಿಸಿದ್ದು 12 ಕೇಂದ್ರಗಳನ್ನು ತೆರೆಯಲಾಗಿದೆ ದಿನ ನಿತ್ಯವು 250 ಜನರಿಗೆ ಲಸಿಕೆ ಹಾಕಲಾಗುತ್ತಿದೆ. 45 ರಿಂದ 60 ರ ವಯಸ್ಸಿನವರಿಗೆ ಲಸಿಕೆ ನೀಡಲಾಗುತ್ತಿದ್ದು 60 ವರ್ಷದ ದಾಟಿದವರಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಹಾಗೂ ಗ್ರಾಮೀಣ ಭಾಗದಲ್ಲಿ ಇನ್ನೂ ಲಸಿಕೆ ಪಡೆಯುವ ಬಗ್ಗೆ ಭಯ ಆತಂಕವಿದ್ದು ಜಾಗೃತಿ ಮೂಡಿಸಬೇಕು ಶೀಘ್ರದಲ್ಲಿ ಎಲ್ಲಾ ಪಿ.ಎಚ್.ಸಿ.ಮತ್ತು ಸಮುದಯ ಕೇಂದ್ರಗಳಲ್ಲಿ ದಿನ ನಿತ್ಯವೂ 100ರಿಂದ 150ರ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಾಪಂ ಇ.ಓ ನಬಿಲಾಲ, ಸಿ.ಪಿ.ಐ. ಜಗದೇವಪ್ಪ ಪಾಳಾ, ಪಿ.ಎಸ್.ಐ.ವಿಶ್ವನಾಥ ಮುದರೆಡ್ಡಿ, ಪುರಸಭೆ ಮುಖ್ಯಧಿಕಾರಿ ಬಾಬುರಾವ ನಡುವಿನಕೇರಿ, ಸಭೆಯಲ್ಲಿ ಮಾತನಾಡಿದರು. ತದನಂತರ ಕೊರೋನಾ ರೋಗದ ಕುರಿತು ಪಟ್ಟಣದಲ್ಲಿ ಎಲ್ಲ ಅಧಿಕಾರಿಗಳು ಪಾದಯಾತ್ರೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.