ಕೊರೊನಾ: ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಸಲಹೆ

ತುಮಕೂರು, ಸೆ. ೧೭- ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದರ ಜತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಡಾ. ಪ್ರಕಾಶ್ ಹೇಳಿದರು.
ನಗರದಲ್ಲಿ ಫ್ರಂಟ್ ಲೈನ್ ವಾರಿಯರ್ಸ್‌ಗಳಿಗೆ ರೋಟರಿ ತುಮಕೂರು ಮತ್ತು ಜಿಲ್ಲಾ ಆಯುರ್ವೇದ ಪದವೀಧರರ ಸಂಘದ ವತಿಯಿಂದ ಏರ್ಪಡಿಸಿದ್ದ ರೋಗ ನಿರೋಧಕ ಕಿಟ್‌ಗಳ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂತಹ ಸಮಯದಲ್ಲಿ ತಾವು ಹೆಚ್ಚು ಜಾಗರೂಕತೆಯಿಂದ ಕೆಲಸ ನಿರ್ವಹಿಸಬೇಕು ಹಾಗೂ ತಮ್ಮ ಸಂಸಾರದವರೆಗೂ ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರವನ್ನು ಉಪಯೋಗಿಸುವಂತೆ ತಿಳಿಸಬೇಕು ಎಂದರು.
ರೋಟರಿ ತುಮಕೂರು ಅಧ್ಯಕ್ಷ ಜಿ.ಎನ್. ಮಹೇಶ್ ಮಾತನಾಡಿ, ಕೊರೊನಾದಂತಹ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರುಗಳ ಕೆಲಸಕ್ಕೆ ನಾವೆಲ್ಲರೂ ಅಭಿನಂದನೆಗಳನ್ನು ಸಲ್ಲಿಸಬೇಕು. ಅವರುಗಳ ಆರೋಗ್ಯವನ್ನು ಕೂಡ ಯೋಚಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ನಾವು ಅವರ ಆರೋಗ್ಯದ ಹಿತದೃಷ್ಟಿಯಿಂದ ಒಂದು ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಆಯುರ್ವೇದಿಕ್ ಕಿಟ್ ವಿತರಿಸುತ್ತಿರುವುದು ಹಾಗೆಯೇ ಮುಂದಿನ ದಿನಗಳಲ್ಲಿ ಈ ಮಾರಕ ರೋಗವು ಕಡಿಮೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ಆದಷ್ಟು ಬೇಗ ಈ ರೋಗಕ್ಕೆ ಔಷಧಿ ಕಂಡು ಹಿಡಿಯಲಿ, ಸಾರ್ವಜನಿಕರಲ್ಲಿ ಎಚ್ಚರಿಕೆಯಿಂದ ಇರಲು ತಿಳಿಸಿ ಮತ್ತು ಭಯಭೀತಿಗೊಳ್ಳಬಾರದು. ಜಾಗೃತಿ ಮತ್ತು ಸಾಮಾಜಿಕ ಅಂತರವೇ ಕೊರೊನಾಗೆ ಮದ್ದು ಎಂದರು.
ಕೊರೊನಾದ ಫ್ರಂಟ್ ಲೈನ್ ವಾರಿಯರ್ಸ್‌ಗಳಾದಂತಹ ಮಹಾನಗರ ಪಾಲಿಕೆ ಪೌರ ಕಾರ್ಮಿಕರುಗಳಿಗೆ ರೋಟರಿ ತುಮಕೂರು, ರೋಟರಿ ತುಮಕೂರು ಈಸ್ಟ್ ಮತ್ತು ಜಿಲ್ಲಾ ಆಯುರ್ವೇದ ಪದವೀಧರರ ಸಂಘದ ವತಿಯಿಂದ ಆಯುರ್ವೇದಿಕ್ ರೋಗ ನಿರೋಧಕ ಕಿಟ್‌ಗಳನ್ನು ವಿತರಿಸಲಾಯಿತು.
ಇದೇ ಸಂದರ್ಭದಲ್ಲಿ ವೈದ್ಯರು, ಪಾಲಿಕೆ ಸದಸ್ಯರು ಹಾಗೂ ರೋಟರಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು.
ನೇತ್ರಾ ಸ್ವಾಗತಿಸಿದರು. ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷೆ ಸುಮಾ ಬಾಲಾಜಿ ಸ್ವಾಗತಿಸಿದರು. ಜನಾರ್ಧನ್ ವಂದಿಸಿದರು.