ಕೊರೊನಾ ರೋಗಿಗಳ ಸಹಾಯಕ್ಕಾಗಿ ಮತ್ತೊಮ್ಮೆ ಮುಂದೆ ಬಂದ ಅಕ್ಷಯ್ ಕುಮಾರ್: ಗೌತಮ್ ಗಂಭೀರ್ ಫೌಂಡೇಶನ್ ಗೆ ನೀಡಿದರು ಒಂದು ಕೋಟಿ ರೂಪಾಯಿ

ಕೊರೊನಾ ಮಹಾಮಾರಿಯ ಎರಡನೇ ಅಲೆಯ ತೀವ್ರತೆಯನ್ನು ಗಮನಿಸಿದ ಸೂಪರ್ ಸ್ಟಾರ್ ಅಕ್ಷಯ್ ಕುಮಾರ್ ಮತ್ತೊಮ್ನೆ ಸಹಾಯ ಹಸ್ತವನ್ನು ಚಾಚಲು ಮುಂದೆ ಬಂದಿದ್ದಾರೆ .
ಅವರು ಕ್ರಿಕೆಟ್ ಜಗತ್ತಿನಿಂದ ರಾಜಕೀಯಕ್ಕೆ ಬಂದಿರುವ ಗೌತಮ್ ಗಂಭೀರ್ ಅವರ ಫೌಂಡೇಶನ್ ಗೆ ಒಂದು ಕೋಟಿ ರೂಪಾಯಿ ದಾನ ನೀಡಿದ್ದಾರೆ.ಅಗತ್ಯವಿರುವ ಕೊರೊನಾ ರೋಗಿಗಳಿಗೆ ಸಹಾಯ ನೀಡುವಲ್ಲಿ ಈ ಹಣವನ್ನು ವಿನಿಯೋಗಿಸಲು ಹೇಳಿದ್ದಾರೆ .ಈ ಮಾಹಿತಿಯನ್ನು ಗೌತಮ್ ಗಂಭೀರ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.


ಅಲ್ಲಿ ಗೌತಮ್ ಬರೆಯುತ್ತಾ – “ಈ ನಿರಾಶಾ ಸಮಯದಲ್ಲೂ ಪ್ರತಿಯೊಬ್ಬರೂ ಸಹಾಯದ ಉಮೇದು ಇರಿಸಿ ಬರುತ್ತಿದ್ದಾರೆ.ಅಂತಹ ಜನರಿಗೆ ಭೋಜನ ,ಔಷಧಿ ಮತ್ತು ಆಕ್ಸಿಜನ್ ಗಾಗಿ ಗೌತಮ್ ಗಂಭೀರ್ ಫೌಂಡೇಶನ್ ಗೆ ಒಂದು ಕೋಟಿ ರೂಪಾಯಿ ನೀಡಿರುವುದಕ್ಕಾಗಿ ತಮಗೆ ಬಹಳ ಧನ್ಯವಾದಗಳು ಅಕ್ಷಯ ಕುಮಾರ್ ಅವರೇ. ದೇವರು ನಿಮಗೆ ಒಳ್ಳೆಯದನ್ನು ಮಾಡಲಿ” ಎಂದಿದ್ದಾರೆ.
ಗೌತಮ್ ಅವರ ಪೋಸ್ಟ್ ಗೆ ಉತ್ತರಿಸಿದ ಅಕ್ಷಯ ಕುಮಾರ್-
“ಗೌತಮ್ ಗಂಭೀರ್, ಇದು ಬಹಳ ಸಂಕಷ್ಟದ ಕಾಲ. ಇಂತಹ ಸಮಯದಲ್ಲಿ ಒಂದಿಷ್ಟಾದರೂ ಸಹಾಯ ಮಾಡುವುದಕ್ಕೆ ನನಗೆ ಖುಷಿಯಾಗಿದೆ.ಈ ಸಂಕಷ್ಟದಿಂದ ಬೇಗನೆ ನಾವೆಲ್ಲ ಹೊರಗೆ ಬರುತ್ತೇವೆ ಎಂಬ ನಂಬಿಕೆ ನನಗಿದೆ” ಎಂದಿದ್ದಾರೆ. ದೇಶದಲ್ಲಿ ಕೊರೊನಾದ ಮೊದಲ ಅಲೆ ಕಾಣಿಸಿದಾಗ ಅಕ್ಷಯ್ ಕುಮಾರ್ ಪ್ರಧಾನಮಂತ್ರಿಯವರ ಪಿ.ಎಂ. ಕೇರ್ಸ್ ಫಂಡ್ ಗೆ ೨೫ ಕೋಟಿ ರೂಪಾಯಿಯನ್ನು ನೀಡಿದ್ದರು. ಆನಂತರ ಬ್ರಹನ್ ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಗೆ ಪಿಪಿಇ ಕಿಟ್ಸ್ ಖರೀದಿಸಲು ಮೂರು ಕೋಟಿ ರೂಪಾಯಿ ನೀಡಿದ್ದರು .ಮುಂಬೈ ಪೊಲೀಸರ ಸಹಾಯಕ್ಕಾಗಿ ಅವರು ಎರಡು ಕೋಟಿ ರೂಪಾಯಿ ದಾನ ಮಾಡಿದ್ದರು. ಅವರು ದಿನಗೂಲಿ ನೌಕರರರಿಂದ ಹಿಡಿದು ಇಂಡಸ್ಟ್ರಿಯ ಫೋಟೋಗ್ರಾಫರ್ಸ್ ತನಕ ಆರ್ಥಿಕ ಸಹಾಯವನ್ನು ತಲುಪಿಸಿದ್ದಾರೆ.

’೮೩’ ರ ನಿರ್ದೇಶಕ ಕಬೀರ್ ಖಾನ್ ಹೇಳಿದ್ದಾರೆ- “ನಮ್ಮ ಸಿನಿಮಾ ಟಾಕೀಸಿನಲ್ಲೇ ಬಿಡುಗಡೆಯಾಗುವುದು”

ಕಳೆದ ವರ್ಷ ಕೊರೊನಾ ಮಹಾಮಾರಿಯ ನಂತರ ದೊಡ್ಡ ದೊಡ್ಡ ಸ್ಟಾರ್ ಗಳ ಫಿಲ್ಮ್ ಗಳೆಲ್ಲ ಸಿನಿಮಾ ಟಾಕೀಸ್ ಗಳನ್ನು ಕೈಬಿಟ್ಟಿತ್ತು.
ಅವುಗಳಲ್ಲಿ ಗುಲಾಬೋ ಸಿತಾಬೋ, ಲಕ್ಷ್ಮಿ ಬಾಂಬ್, ದ ಗರ್ಲ್ ಆನ್ ದ ಟ್ರೈನ್……. ನಿಂದ ಹಿಡಿದು ಬೆಲ್ ಬಾಟಮ್ ಫಿಲ್ಮ್ ತನಕ ಮೇಕರ್ಸ್ ಗಳು ಟಾಕೀಸುಗಳನ್ನು ಕೈಬಿಟ್ಟರು .ಟ್ರೇಡ್ ಪಂಡಿತರ ಲೆಕ್ಕಾಚಾರದಲ್ಲಿ ರಾಧೆ….. ಫಿಲ್ಮ್ ಕೂಡ ಇಂಡೈರೆಕ್ಟ್ ಲೀ ಟಾಕೀಸ್ ಗಳನ್ನು ಕೈಬಿಟ್ಟಿದೆ.


ಆದರೆ ಇದೀಗ ’ಸೂರ್ಯವಂಶಿ’ ಫಿಲ್ಮ್ ನ ಮೇಕರ್ಸ್ ಮತ್ತು ಈಗ ’೮೩’ ರ ನಿರ್ದೇಶಕ ಕಬೀರ್ ಖಾನ್ ಅವರು ಒಂದು ಭರವಸೆ ನೀಡಿದ್ದಾರೆ- “ನಾವು ಸಿನಿಮಾ ಟಾಕೀಸ್ ಗಳ ಕೈಬಿಡುವುದಿಲ್ಲ” ಎಂದು. ಈ ೨ ಫಿಲ್ಮ್ ಗಳು ಸಿನಿಮಾ ಟಾಕೀಸ್ ನಲ್ಲೇ ಬಿಡುಗಡೆ ಆಗಲಿದೆಯಂತೆ.

“ನಾವು ಜೂನ್ ೪ರಂದು ಬಿಡುಗಡೆ ಮಾಡುವವರಿದ್ದೆವು.ಆದರೆ ಈಗಿನ ಸ್ಥಿತಿ ಗಮನಿಸಿದರೆ ಆ ತಾರೀಕಿಗೆ ನಾವು ಬರುವುದು ಕನ್ಫರ್ಮ್ ಇಲ್ಲ .ಆದರೆ ಒಂದಂತೂ ನಿಜ. ಯಾವುದೇ ಸ್ಥಿತಿಯಲ್ಲಿ ನಾವು ಸಿನಿಮಾ ಟಾಕೀಸುಗಳಲ್ಲೇ ರಿಲೀಸ್ ಮಾಡಲಿದ್ದೇವೆ. ಇನ್ನೂ ಸ್ವಲ್ಪ ಸಮಯ ಕಾದರೂ ಪರವಾಗಿಲ್ಲ. ’೮೩’ರ ಮೇಕಿಂಗ್ ಬಜೆಟ್ ೨೦೦ ಕೋಟಿ ರೂಪಾಯಿ ಆಗಿದೆ .ಇದು ಸಂಗ್ರಹ ಆಗಬೇಕಾದರೆ ಫಿಲ್ಮ್ ಸಿನಿಮಾ ಟಾಕೀಸ್ ಗಳಲ್ಲಿಯೇ ಬಿಡುಗಡೆಯಾಗಬೇಕಿದೆ” ಎಂದಿದ್ದಾರೆ ರಿಲಯನ್ಸ್ ಎಂಟರ್ಟೈನ್ಮೆಂಟ್ ಅಧಿಕಾರಿಗಳು.

“ಇಷ್ಟೊಂದು ಫಿಟ್ ಇದ್ದೀರಿ.ನಿಮಗೂ ಕೊರೊನಾ ಹೇಗೆ ಬಂತು?” ಅಭಿಮಾನಿಗಳಿಂದ ಮಿಲಿಂದ್ ಸೋಮನ್ ಅವರಿಗೆ ಪ್ರಶ್ನೆ

ನಟ ಮಿಲಿಂದ್ ಸೋಮನ್ ತಮ್ಮ ಫಿಟ್ನೆಸ್ ಗೆ ಬಹಳ ಪ್ರಸಿದ್ಧಿ .ಅವರು ಆಗಾಗ ಜನರಿಗೆ ಫಿಟ್ ಆಗಿರಲು ಹೇಳುತ್ತಿರುತ್ತಾರೆ. ಜನರಿಗೆ ಆ ಬಗ್ಗೆ ಎಚ್ಚರವಹಿಸಬೇಕಾದ ಅಗತ್ಯಗಳೇನು ಎಂದೂ ಹೇಳುತ್ತಿರುತ್ತಾರೆ.
ಆಶ್ಚರ್ಯವೆಂದರೆ ಇಷ್ಟೊಂದು ಫಿಟ್ ಇದ್ದ ಹೊರತೂ ಅವರಿಗೆ ಮಾರ್ಚ್ ತಿಂಗಳಲ್ಲಿ ಕೊರೊನಾ ಸೋಂಕು ರೋಗ ತಗಲಿತ್ತು. ಎಪ್ರಿಲ್ ಆರಂಭದಲ್ಲಿ ಅವರು ಕೊರೊನಾದಿಂದ ಮುಕ್ತರಾದರು.


ಇತ್ತೀಚೆಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಶೇರ್ ಮಾಡುತ್ತಾ – ಜನ ಈಗಲೂ ನನಗೆ ಪ್ರಶ್ನೆ ಹಾಕುತ್ತಾ ಇರುತ್ತಾರೆ. ಇಷ್ಟೊಂದು ಫಿಟ್ ಇದ್ದ ಹೊರತೂ ನಿಮಗೆ ಕೊರೊನಾ ಹೇಗೆ ಬಂತು? ಈ ಪ್ರಶ್ನೆಗೆ ಮಿಲಿಂದ್ ಅವರು ಉತ್ತರಿಸುತ್ತಾ-
“ಯಾವನೇ ವ್ಯಕ್ತಿ ಸೋಂಕು ರೋಗಕ್ಕೆ ಒಳಗಾಗಬಹುದಾದ ಸಾಧ್ಯತೆಗಳಿವೆ.” ಎಂದಿದ್ದಾರೆ.
೫೫ ವರ್ಷದ ಮಿಲಿಂದ್ ಸೋಮನ್ ಈವಾಗ ಒಂದು ಪೋಸ್ಟ್ ಶೇರ್ ಮಾಡುತ್ತಾ –
ನನ್ನ ಓರ್ವ ಸ್ನೇಹಿತ ಕೋವಿಡ್ ೧೯ ರ ಸೋಂಕಿನ ಕಾರಣ ಸಾವನ್ನಪ್ಪಿದ್ದಾರೆ. ನನಗೆ ಬಹಳ ಆಘಾತ ಆಗಿದೆ. ಆತನಿಗೆ ಕೇವಲ ೪೦ವರ್ಷ ಆಗಿತ್ತು. ಜನ ಈಗಲೂ ನನ್ನನ್ನು ಕೇಳುತ್ತಾರೆ -ನೀವು ಫಿಟ್ ಇದ್ದವರಿಗೆ ಹೇಗೆ ಕೊರೋನಾ ಬಂತು? ನನ್ನ ಉತ್ತರ ಇಷ್ಟೆ- ನಿಮ್ಮಲ್ಲಿ ಉತ್ತಮ ಆರೋಗ್ಯ ಮತ್ತು ಫಿಟ್ನೆಸ್ ಇದ್ದರೆ ಯಾವುದೇ ಸೋಂಕು ರೋಗ ತಗಲಿದರೂ ನೀವು ಅಪಾಯದಿಂದ ಪಾರಾಗಬಹುದು. ಸೋಂಕು ತಗಲಿದರೂ ನೀವು ಭಯಪಡಬೇಕಿಲ್ಲ. ಹಾಗಾಗಿ ಆರೋಗ್ಯ ಕಾಪಾಡಿಕೊಳ್ಳಬೇಕಾದರೆ ಹಲವು ಎಚ್ಚರಿಕೆಗಳನ್ನು ನೀವು ಪಾಲಿಸಲೇ ಬೇಕಾಗುತ್ತದೆ” ಎಂದಿದ್ದಾರೆ.