ಕೊರೊನಾ ಮೂರನೇ ಅಲೆ – ಜಿಲ್ಲಾಡಳಿತ ಪೂರ್ವ ಸಿದ್ಧತೆ

ಶಿಲ್ಪಾ ಫೌಂಡೇಶನ್ – ೨೦ ಆಕ್ಸಿಜನ್ ಕಾನ್ಸಂಟ್ರೇಟರ್ ವಿತರಣೆ
ರಾಯಚೂರು.ಮೇ.೨೮- ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಪ್ರಾರಂಭವಾಗುವ ನಿರೀಕ್ಷೆ ಇದ್ದು, ಜಿಲ್ಲಾಡಳಿತ ಸಕಲ ಪೂರ್ವ ಸಿದ್ದತೆಯನ್ನು ಮಾಡಲಾಗಿದ್ದು ಹಾಗೂ ಸ್ವಯಂ ಸೇವಾ ಸಂಸ್ಥೆಗಳು ಮುಂದು ಬಂದಿವೆ ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶ ಕುಮಾರ ಅವರು ಹೇಳಿದರು.
ಅವರಿಂದು ನಗರದ ನಗರದ ಸ್ವಾಮಿ ವಿವೇಕಾನಂದರ ಸಮಗ್ರ ಆರೋಗ್ಯ ಕೇಂದ್ರದಲ್ಲಿ ಶಿಲ್ಪಾ ಫೌಂಡೇಶನ್ ವತಿಯಿಂದ ೨೦ ವೆಂಟಿಲೇmರ್ ಕಾನ್ಸಂಟ್ರೇಟರ್ ವಿತರಣಾ ಕಾರ್ಯಕ್ರಮವನ್ನು ಧನ್ವಂತರಿ ದೇವಿಗೆ ಪುಷ್ಪರ್ಚನೆ ಮಾಡಿ, ಆಕ್ಸಿಜನ್ ಕಾನ್ಸಂಟ್ರೇಟರ್ ಲೋಕಾರ್ಪಣೆ ಮಾಡಿ ಮಾತನಾಡುತ್ತಾ, ಕೊರೊನಾ ಎರಡನೇ ಅಲೆ ದೇಶದಲ್ಲಿ ಹೆಚ್ಚಾಗಿದ್ದು, ಕಳೆದ ಒಂದು ತಿಂಗಳಿನಿಂದ ಆಕ್ಸಿಜನ್ ಕೊರೊತೆ ಹೆಚ್ಚಾಗಿತ್ತು. ಇಂದು ಯಾವುದೇ ಆ ಸಮಸ್ಯೆ ಇಲ್ಲ.
ಕಳೆದ ವರ್ಷ ಕೋವಿಡ್‌ಗೆ ಯಾವುದೇ ಆಕ್ಸಿಜನ್ ಕೊರತೆ ಇರಲಿಲ್ಲ. ಕೇವಲ ೭೦ ರಿಂದ ೮೦ ವರ್ಷದವರಿಗೆ ಮಾತ್ರ ಸೋಂಕು ತಗುಲಿ ಮೃತಪಡುತ್ತಿದ್ದರು. ಆದರೆ, ಎರಡನೇ ಅಲೆಯಲ್ಲಿ ೩೦ ರಿಂದ ೪೫ ವರ್ಷದವರಿಗೆ ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವುದು ಹೆಚ್ಚಾಗಿದೆ. ಅದರಿಂದ ನಾವು ಜಿಲ್ಲೆಯನ್ನು ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದ್ದು, ಇದರಿಂದ ಕೊರೊನಾ ಸೋಂಕು ಕಡಿಮೆ ಆಗಿದೆ.
ಅಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆ ೫೦ ರಷ್ಟು ಖಾಲಿ ಇದೆ. ಆದರೆ, ಇತ್ತೀಚಿಗೆ ಗ್ರಾಮಾಂತರ ಪ್ರದೇಶದಲ್ಲಿ ಸೋಂಕು ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಶಿಲ್ಪಾ ಫೌಂಡೇಶನ್ ಹಾಗೂ ಸ್ವಾಮಿ ವಿವೇಕಾನಂದರ ಸಮಗ್ರ ಅರೋಗ್ಯ ಕೇಂದ್ರದ ವತಿಯಿಂದ ಸುಮಾರು ೨೦ ಆಕ್ಸಿಜನ್ ಇಂದು ನೀಡಿದ್ದು, ಇವರು ಮನೆ ಮನೆಗೆ ತೆರಳಿ ಆಕ್ಸಿಜನ್ ಕಾನ್ಸಂಟ್ರೇಟರ್ ನೀಡುವ ಕಾರ್ಯ ಶ್ಲಾಘನೀಯವಾಗಿದೆ.
ಈಗಾಗಲೇ ಕೊರೊನಾ ಮೂರನೇ ಅಲೆಗೆ ಜಿಲ್ಲಾಡಳಿತ ಸಕಾಲ ಪೂರ್ವ ಸಿದ್ಧತೆಯನ್ನು ಮಾಡಲಾಗಿದ್ದು, ನಮ್ಮ ಜೊತೆ ಸ್ವಯಂ ಸೇವಾ ಸಂಸ್ಥೆಗಳು ಜೊತೆಗೂಡಿವೆ ಎಂದು ಹೇಳಿದರು. ನಂತರ ಶಿಲ್ಪಾ ಫೌಂಡೇಶನ್ ಮುಖ್ಯಸ್ಥ ವಿಷ್ಣುಕಾಂತ ಅವರು ಮಾತನಾಡುತ್ತಾ, ಕೊರೊನಾ ಎರಡನೇ ಅಲೆಯು ದೇಶದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಯಾವುದೇ ಸಮಸ್ಯೆ ಬಂದರು ಜಿಲ್ಲಾಡಳಿತದ ಜೊತೆಗೂಡಿ ಸೇವೆ ಸಲ್ಲಿಸಲು ನಮ್ಮ ಸಂಸ್ಥೆಸಿದ್ದ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಎಚ್‌ಓ ಡಾ.ರಾಮಕೃಷ್ಣ, ಡಾ.ನಾಗರಾಜ ಭಾಲ್ಕಿ, ಕಡಗೋಲ್ ಆಂಜನೇಯ, ರವಿಸಾಗರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.